ತಿರುವನಂತಪುರಂ: ಐಪಿಎಲ್ ಮಿನಿ ಹರಾಜಿನಲ್ಲಿ (IPL Auction 2023) ಪಂಜಾಬ್ ಕಿಂಗ್ಸ್ (Punjab Kings) ಪಾಕಿಸ್ತಾನ ಮೂಲದ ಆಟಗಾರ ಸಿಕಂದರ್ ರಾಜಾರನ್ನು (Sikandar Raza) ಖರೀದಿಸಿದೆ.
ಸಿಕಂದರ್ ರಾಜಾ ಮೂಲತಃ ಪಾಕಿಸ್ತಾನದವರಾದರೂ (Pakistan) ಇದೀಗ ಜಿಂಬಾಬ್ವೆ (Zimbabwe) ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದಾರೆ. ಐಪಿಎಲ್ ಮಿನಿ ಹರಾಜಿನಲ್ಲಿ ಸಿಕಂದರ್ ರಾಜಾ ಕಾಣಿಸಿಕೊಂಡಿದ್ದರು. ಅವರನ್ನು ಪಂಜಾಬ್ ಕಿಂಗ್ಸ್ ತಂಡ 50 ಲಕ್ಷ ರೂ.ಗೆ ಖರೀದಿಸಿದೆ. ಸಿಕಂದರ್ ರಾಜಾ ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್‍ನಲ್ಲಿ ಜಿಂಬಾಬ್ವೆ ಪರ ಮ್ಯಾಚ್ ವಿನ್ನಿಂಗ್ ಫರ್ಫಾಮೆನ್ಸ್ ತೋರಿದ್ದರು. ಹಾಗಾಗಿ ಐಪಿಎಲ್‍ನಲ್ಲಿ ಅವಕಾಶ ಪಡೆದಿದ್ದಾರೆ. ಇದನ್ನೂ ಓದಿ: ಐಪಿಎಲ್ ಇತಿಹಾಸದಲ್ಲೇ ದುಬಾರಿ ಆಟಗಾರ – 18.50 ಕೋಟಿ ರೂ.ಗೆ ಬಿಕರಿಯಾದ ಸ್ಯಾಮ್ ಕರ್ರನ್
ಈ ಬಾರಿ ಹರಾಜಿನಲ್ಲಿ ಸ್ಯಾಮ್ ಕರ್ರನ್ 18.50 ಕೋಟಿ ರೂ.ಗೆ ಬಿಕರಿಯಾದರೆ, ಕ್ಯಾಮರೂನ್ ಗ್ರೀನ್ 17.50 ಕೋಟಿ ಮತ್ತು ಬೆನ್‍ಸ್ಟೋಕ್ಸ್ 16.25 ಕೋಟಿ ರೂ.ಗೆ ಮಾರಾಟವಾಗಿ ದುಬಾರಿ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಇದನ್ನೂ ಓದಿ: ರನ್ ಓಡಲು ಪಂತ್ ನಿರಾಕರಣೆ – ಗುರಾಯಿಸಿದ ಕೊಹ್ಲಿ