ಮುಂಬೈ: ಐಪಿಎಲ್ ಮಿನಿ ಹರಾಜು (IPL Auction 2023) ಮುಗಿದಿದೆ. ಫ್ರಾಂಚೈಸ್‍ಗಳು ತಮಗೆ ಬೇಕಾಗಿದ್ದ ಆಟಗಾರರನ್ನು ಖರೀದಿಸಿದ್ದಾರೆ. ಈ ನಡುವೆ 2021ರ ಹರಾಜಿನಲ್ಲಿ ಬರೋಬ್ಬರಿ 15 ಕೋಟಿ ರೂ. ನೀಡಿ ಕೈಲ್ ಜೇಮಿಸನ್‍ರನ್ನು (Kyle Jamieson) ಆರ್ಸಿಬಿ ಖರೀದಿಸಿತ್ತು. ಆ ಬಳಿಕ ಈ ಬಾರಿ ಮಿನಿ ಹರಾಜಿಗೆ ಬಿಟ್ಟುಕೊಟ್ಟಿತ್ತು. ಇದೀಗ ಚೆನ್ನೈ ಕೇವಲ 1 ಕೋಟಿ ರೂ. ನೀಡಿ ತಂಡಕ್ಕೆ ಬರಮಾಡಿಕೊಂಡಿದೆ.
Advertisement
27 ವರ್ಷದ ಜೇಮಿಸನ್ ನ್ಯೂಜಿಲೆಂಡ್ ಪರ ಆಡುವ ಆಲ್‍ರೌಂಡರ್ ಆಟಗಾರ. 2022ರ ಹರಾಜಿನಲ್ಲಿ ಭಾರೀ ಬೇಡಿಕೆ ಹೊಂದಿದ್ದ ಜೇಮಿಸನ್‍ರನ್ನು 15 ಕೋಟಿ ರೂ. ನೀಡಿ ಆರ್ಸಿಬಿ ಖರೀದಿತ್ತು. ಆದರೆ ಜೇಮಿಸನ್ ಆರ್ಸಿಬಿ ಪರ ಪ್ಲಾಫ್ ಆದರು. ಹಾಗಾಗಿ ಈ ಬಾರಿ ಮಿನಿ ಹರಾಜಿಗೆ ಬಿಟ್ಟುಕೊಟ್ಟಿತು. ನಿನ್ನೆ ನಡೆದ ಹರಾಜಿನಲ್ಲಿ ಜೇಮಿಸನ್ 1 ಕೋಟಿ ರೂ. ಮೂಲಬೆಲೆ ಹೊಂದಿದ್ದರು. ಈ ಮೂಲಬೆಲೆಗೆ ಚೆನ್ನೈ ಜೇಮಿಸನ್‍ರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಇದನ್ನೂ ಓದಿ: ಐಪಿಎಲ್ ಇತಿಹಾಸದಲ್ಲೇ ದುಬಾರಿ ಆಟಗಾರ – 18.50 ಕೋಟಿ ರೂ.ಗೆ ಬಿಕರಿಯಾದ ಸ್ಯಾಮ್ ಕರ್ರನ್
Advertisement
Advertisement
2021ರ ಐಪಿಎಲ್‍ನಲ್ಲಿ ಜೇಮಿಸನ್ ಆರ್ಸಿಬಿ ಪರ 9 ಪಂದ್ಯವಾಡಿದ್ದು, ಕೇವಲ 9 ವಿಕೆಟ್ ಮತ್ತು 65 ರನ್ ಬಾರಿಸಿ ನಿರಾಸೆ ಮೂಡಿಸಿದ್ದರು. ಇದೀಗ ಚೆನ್ನೈ ಪಡೆ ಸೇರಿಕೊಂಡಿರುವ ಜೇಮಿಸನ್ ಪ್ರದರ್ಶನ ಯಾವ ರೀತಿ ಇರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
Advertisement
ಮಿನಿ ಹರಾಜಿನಲ್ಲಿ ಚೆನ್ನೈ ಫ್ರಾಂಚೈಸಿ ಬೆನ್‍ಸ್ಟೋಕ್ಟ್‌ರನ್ನು 16.25 ಕೋಟಿ ರೂ. ನೀಡಿ ಖರೀದಿಸಿದರೆ, ಆ ಬಳಿಕ ಜೇಮಿಸಿನ್‍ಗೆ 1 ಕೋಟಿ ರೂ. ಮತ್ತು ಅಜಿಂಕ್ಯಾ ರಹಾನೆಗೆ 50 ಲಕ್ಷ ರೂ. ನೀಡಿ ಖರೀದಿಸಿರುವುದು ಹೆಚ್ಚಿನ ಮೊತ್ತವಾಗಿದೆ. ಇದನ್ನೂ ಓದಿ: RCB ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಸಿಂಧನೂರಿನ ಮನೋಜ್ ಭಾಂಡಗೆ