ಬೆಂಗಳೂರು: 15ನೇ ಆವೃತ್ತಿ ಐಪಿಎಲ್ ಮೆಗಾ ಹರಾಜು ಮುಕ್ತಾಯಗೊಂಡಿದೆ. ಹರಾಜಿನಲ್ಲಿ ಕರ್ನಾಟಕ ಮೂಲದ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಕೇವಲ ಇಬ್ಬರು ಕನ್ನಡಿಗರನ್ನು ಖರೀದಿಸಿ ಅಭಿಮಾನಿಗಳ ಟೀಕೆಗೆ ಗುರಿಯಾಗಿದೆ.
Advertisement
ಆರ್ಸಿಬಿ ತಂಡ ಮೆಗಾ ಹರಾಜಿನಲ್ಲಿ ಒಟ್ಟು 88.45 ಕೋಟಿ ರೂ. ಖರ್ಚು ಮಾಡಿ ಒಟ್ಟು 22 ಜನ ಆಟಗಾರರನ್ನು ಖರೀದಿಸಿದೆ. ಆದರೆ ಸ್ಥಳೀಯ ಆಟಗಾರರ ಪೈಕಿ ಕರ್ನಾಟಕದ ಯುವ ಆಟಗಾರ ಅನೀಶ್ವರ್ ಗೌತಮ್ ಮತ್ತು ಲವ್‌ನಿತ್ ಸಿಸೋದಿಯಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅನೀಶ್ವರ್ ಗೌತಮ್ ಮತ್ತು ಲವ್‌ನಿತ್ ಸಿಸೋದಿಯಾ ಭಾರತದ ಅಂಡರ್-19 ತಂಡದಲ್ಲಿ ಮತ್ತು ಕರ್ನಾಟಕ ರಾಜ್ಯ ತಂಡದಲ್ಲಿ ಮಿಂಚು ಹರಿಸಿದ್ದಾರೆ. ಈ ಪ್ರದರ್ಶನವನ್ನು ಗಮನಿಸಿ ತಲಾ 20 ಲಕ್ಷ ರೂ. ನೀಡಿ ಆರ್ಸಿಬಿ ಇಬ್ಬರು ಆಟಗಾರರನ್ನು ಖರೀದಿಸಿದೆ. ಇದನ್ನೂ ಓದಿ: ಈ ವರ್ಷ ಆಡದೇ ಇದ್ದರೂ ಆರ್ಚರ್‌ಗೆ ಮುಂಬೈ 8 ಕೋಟಿ ನೀಡಿದ್ದು ಯಾಕೆ: ರಿವೀಲ್ ಮಾಡಿದ ಆಕಾಶ್ ಅಂಬಾನಿ
Advertisement
Joining RCB’s #ClassOf2022:
Name: Aneeshwar Gautam
Price: 20 Lakhs
Welcome to the family! ????#PlayBold #WeAreChallengers #IPLMegaAuction #IPL2022 #IPLAuction pic.twitter.com/UnbIdZqjT6
— Royal Challengers Bangalore (@RCBTweets) February 13, 2022
Advertisement
Advertisement
ಹರಾಜಿನಲ್ಲಿ ಕರ್ನಾಟಕದ ಸ್ಟಾರ್ ಆಟಗಾರರಾದ ಮನೀಶ್ ಪಾಂಡೆ, ರಾಬಿನ್ ಉತ್ತಪ್ಪ, ದೇವದತ್ ಪಡಿಕ್ಕಲ್, ಪ್ರಸಿದ್ಧ್ ಕೃಷ್ಣರಂತಹ ಆಟಗಾರರು ಇದ್ದರೂ ಕೂಡ ಆರ್ಸಿಬಿ ಮಾತ್ರ ಕರ್ನಾಟಕದ ಆಟಗಾರರನ್ನು ಖರೀದಿಸಲು ಮುಂದಾಗಲಿಲ್ಲ. ಈ ನಡೆಯನ್ನು ಗಮನಿಸಿ ಕರ್ನಾಟಕದ ಮಾಜಿ ಆಟಗಾರರು ಮತ್ತು ಆರ್ಸಿಬಿ ಅಭಿಮಾನಿಗಳು ಆರ್ಸಿಬಿ ಆಡಳಿತ ಮಂಡಳಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಐಪಿಎಲ್ ಹರಾಜು ಅಂತ್ಯ – ಫ್ರಾಂಚೈಸ್‍ಗಳಿಗೆ ಬೇಡವಾದ ಸ್ಟಾರ್ ಆಟಗಾರರು
Why does RCB deliberately not bid for Karnataka players? If they don’t want to even bid for Manish, Manohar and Prasidh, something is seriously amiss. This is happening for decades. Ridiculous #DoddaMathu #CricketTwitter #IPLAuction
— Dodda Ganesh | ದೊಡ್ಡ ಗಣೇಶ್ (@doddaganesha) February 12, 2022
ಆರ್ಸಿಬಿ ಹರಾಜಿನಲ್ಲಿ ಈವರೆಗೆ ಹೆಸರೇ ಕೇಳಿರದ ಆಟಗಾರರನ್ನು ಖರೀದಿಸಿದೆ. ಆದರೆ ಕರ್ನಾಟಕದಲ್ಲೇ ಇದ್ದ ಪ್ರತಿಭಾನ್ವಿತ ಆಟಗಾರರನ್ನುಕಡೆಗಣಿಸಿದೆ. ಹಾಗಾಗಿ ಕರ್ನಾಟಕದ ಆಟಗಾರರು ಹೆಚ್ಚಿರುವ ತಂಡಕ್ಕೆ ನಾವು ಐಪಿಎಲ್‍ನಲ್ಲಿ ಸಪೋರ್ಟ್ ಮಾಡುತ್ತೇವೆ ಎಂದು ಕರ್ನಾಟಕದ ಮಾಜಿ ಆಟಗಾರರೊಬ್ಬರು ವಾಹಿನಿಯೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ.
16 Karnataka players are part of various IPL squads. Their combined price is 60.60 crores. 10 IPL teams have spend ~553 crores, off which Karnataka players take ~9.2% – lion's share! Congratulations to all the players ???? #IPL pic.twitter.com/gc02gdGq7R
— Karnataka Ranji Team║ಕರ್ನಾಟಕ ರಣಜಿ ತಂಡ (@RanjiKarnataka) February 13, 2022