ಬೆಂಗಳೂರು: 15ನೇ ಆವೃತ್ತಿ ಐಪಿಎಲ್‍ಗೂ ಮುನ್ನ ನಡೆದ ಆಟಗಾರರ ಹರಾಜು ಪ್ರಕ್ರಿಯೆ ಇಂದು ಅಂತ್ಯಗೊಂಡಿದೆ. ಹಲವು ಸ್ಟಾರ್ ಆಟಗಾರರು ಹರಾಜಾಗದೆ ಉಳಿದರೆ ಇನ್ನೂ ಕೆಲ ಆಟಗಾರರು ಬಿಕರಿಯಾಗಿದ್ದಾರೆ.
ಒಟ್ಟು 204 ಆಟಗಾರರು ಹರಾಜಾಗಿದ್ದು, 550 ಕೋಟಿ ರೂ.ಗಳನ್ನು ಫ್ರಾಂಚೈಸ್‌ಗಳು ಖಚು ಮಾಡಿದೆ. ಎರಡನೇ ದಿನದ ಐಪಿಎಲ್ ಮೆಗಾ ಹರಾಜಿನಲ್ಲಿ ಪ್ರಮುಖವಾಗಿ ಅಂಡರ್-19 ಆಟಗಾರರು ಉತ್ತಮ ಬೇಡಿಕೆ ಪಡೆದಿದ್ದಾರೆ. ರಾಜ್ ಬಾವ, ರಾಜವರ್ಧನ್ ಹಂಗೇರ್ಕರ್ ಕೋಟಿ ವೀರರಾದರೆ, ಅಂಡರ್ 19 ವಿಶ್ವಕಪ್ ವಿಜೇತ ನಾಯಕ ಯಶ್ ಧುಲ್ 50 ಲಕ್ಷ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದರು. 2ನೇ ದಿನದ ಹರಾಜಿನಲ್ಲಿ ಲಿಯಾಮ್ ಲಿವಿಂಗ್‍ಸ್ಟೋನ್ 11.50 ಕೋಟಿ ರೂ., ಟಿಮ್ ಡೇವಿಡ್ 8.25 ಕೋಟಿ, ಜೋಫ್ರಾ ಆರ್ಚರ್ 8 ಕೋಟಿ, ರೊಮಾರಿಯೋ ಶೆಫರ್ಡ್ 7.75 ಕೋಟಿ ರೂ. ಪಡೆದು ಬಿಕರಿಯಾದರು. ಇದನ್ನೂ ಓದಿ: IPL 2022 Auction: ಲಿವಿಂಗ್‍ಸ್ಟೋನ್ ದುಬಾರಿ ವಿದೇಶಿ ಆಟಗಾರ – ಫಿಂಚ್, ಮಾರ್ಗನ್ ಅನ್‍ಸೋಲ್ಡ್
ದುಬಾರಿ ಆಟಗಾರರ ಪಟ್ಟಿ:
ಲಿಯಾಮ್ ಲಿವಿಂಗ್‍ಸ್ಟೋನ್ ಪಂಜಾಬ್-11.50 ಕೋಟಿ ರೂ, ಜೋಫ್ರಾ ಆರ್ಚರ್ ಮುಂಬೈ – 8 ಕೋಟಿ, ರೊಮಾರೊಯೋ ಶೆಫರ್ಡ್ ಹೈದರಾಬಾದ್ – 7.75 ಕೋಟಿ, ಒಡೆನ್ ಸ್ಮಿತ್ ಪಂಜಾಬ್-6 ಕೋಟಿ, ಖಲೀಲ್ ಅಹಮದ್ ಡೆಲ್ಲಿ- 5.25 ಕೋಟಿ, ಮಾರ್ಕೋ ಜೆನ್ಸನ್ ಹೈದರಾಬಾದ್ – 4.20 ಕೋಟಿ, ಚೇತನ್ ಸಕಾರಿಯ ಡೆಲ್ಲಿ 4.2 ಕೋಟಿ, ಶಿವಂ ದುಬೆ ಚೆನ್ನೈ – 4 ಕೋಟಿ, ಏಡನ್ ಮಾಕ್ರರ್ಮ್ ಹೈದರಾಬಾದ್ – 2.6 ಕೋಟಿ, ರಾಜ್ ಬಾವ ಪಂಜಾಬ್ 2 ಕೋಟಿ ರೂ.ಗೆ ಸೇಲ್ ಅಚ್ಚರಿ ಮೂಡಿಸಿದರು. ಇದನ್ನೂ ಓದಿ: ಐಪಿಎಲ್ 2022ರ ಹರಾಜು ಪ್ರಕ್ರಿಯೆ ವೀಕ್ಷಿಸಿ ತುಂಬಾ ದಣಿದಿದ್ದೇನೆ: ಪ್ರೀತಿ ಜಿಂಟಾ
Introducing to you, the #ClassOf2022 ready to #PlayBold!????????
Bring on #IPL2022! ????????#WeAreChallengers #IPLMegaAuction #IPLAuction pic.twitter.com/qcEcna24y8
— Royal Challengers Bangalore (@RCBTweets) February 13, 2022
ಸ್ಟಾರ್ ಆಟಗಾರರಾಗಿ ಗುರುತಿಸಿಕೊಂಡಿದ್ದ ಸುರೇಶ್ ರೈನಾ, ಆರೋನ್ ಫಿಂಚ್, ಸ್ಟೀವ್ ಸ್ಮಿತ್, ಇಶಾಂತ್ ಶರ್ಮಾ, ಇಯಾನ್ ಮಾರ್ಗನ್, ಶ್ರೀಶಾಂತ್, ಮೊಹಮ್ಮದ್ ನಬಿ, ಮಾಕ್ರರ್ಮ್ ಸೇರಿದಂತೆ ಪ್ರಮುಖ ಆಟಗಾರರು ಅನ್‍ಸೋಲ್ಡ್ ಆಗಿದ್ದಾರೆ.