ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ಹರಾಜು ಪ್ರಕ್ರಿಯೆಯಲ್ಲಿ 17 ವರ್ಷದ ಬ್ಯಾಟ್ಸ್ ಮ್ಯಾನ್ ಯಶಸ್ವಿ ಜಸ್ವಾಲ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡ 2.40 ಕೋಟಿ ಕೊಟ್ಟು ಖರೀದಿ ಮಾಡಿದರೆ ಪ್ರಿಯಮ್ ಗಾರ್ಗ್ ಅವರನ್ನು ಹೈದರಾಬಾದ್ ತಂಡ 1.9 ಕೋಟಿ ರೂ. ನೀಡಿ ಖರೀದಿ ಮಾಡಿದೆ.
ಗುರುವಾರ ಐಪಿಎಲ್ 13 ನೇ ಆವೃತ್ತಿ ಆಟಗಾರರ ಹರಾಜು ಪ್ರಕ್ರಿಯೆ ಕೋಲ್ಕತ್ತಾದಲ್ಲಿ ಆರಂಭವಾಗಿದ್ದು, ತಂಡಗಳು ತಮಗೆ ಬೇಕಾದ ಆಟಗಾರರನ್ನು ಬಿಡ್ ಮಾಡುತ್ತಿವೆ. ಗುರುವಾರ ನಡೆದ ಹರಾಜಿನಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ 15.50 ಕೋಟಿಗೆ ಕೆಕೆಆರ್ ತಂಡದ ಪಾಲಾಗಿ ದುಬಾರಿ ಆಟಗಾರನಾಗಿದ್ದಾರೆ. ಈ ಹರಾಜಿನಲ್ಲಿ ನಮ್ಮ ದೇಶೀಯ ಪ್ರತಿಭೆಗಳಿಗೂ ಉತ್ತಮ ಬೆಲೆ ಸಿಕ್ಕಿದ್ದು, ಮಹಾರಾಷ್ಟ್ರದ ಆಟಗಾರ ಯಶಸ್ವಿ ಜಸ್ವಾಲ್ ಮತ್ತು ಭಾರತದ ಅಂಡರ್-19 ತಂಡದ ನಾಯಕ ಪ್ರಿಯಮ್ ಗಾರ್ಗ್ ಹರಾಜಿನಲ್ಲಿ ಮಿಂಚಿದ್ದಾರೆ.
Advertisement
Advertisement
ಇತ್ತೀಚೆಗೆ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದ ಮಹಾರಾಷ್ಟ್ರದ ಆಟಗಾರ ಯಶಸ್ವಿ ಜಸ್ವಾಲ್ ಅವರನ್ನು ಶಿಲ್ಪ ಶೆಟ್ಟಿ ಮಾಲೀಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ಬರೋಬ್ಬರಿ 2.40 ಕೋಟಿ ಕೊಟ್ಟು ಖರೀದಿ ಮಾಡಿದೆ. ಜಸ್ವಾಲ್ ಬಡಕುಟಂಬದ ಹುಡುಗನಾಗಿದ್ದು ಈ ಮೂಲಕ ಮುಂಬೈನ ರಸ್ತೆಬದಿಯಲ್ಲಿ ಪಾನಿಪುರಿ ಮಾರಿ ಮಗನನ್ನು ಕ್ರಿಕೆಟರ್ ಆಗಿ ಮಾಡಿದ ತಂದೆಯ ಪರಿಶ್ರಮಕ್ಕೆ ಬೆಲೆ ಸಿಕ್ಕಂತೆ ಆಗಿದೆ. ಇದನ್ನು ಓದಿ: ಫಿಂಚ್, ಮೋರಿಸ್ ಆರ್ಸಿಬಿಗೆ- ದಾಖಲೆ ಬೆಲೆಗೆ ಪ್ಯಾಟ್ ಕಮಿನ್ಸ್ ಸೇಲ್
Advertisement
ಚಾಲಕನ ಮಗನಿಗೆ ಕೋಟಿ ಬೆಲೆ
ಭಾರತದ ಅಂಡರ್-19 ತಂಡದ ಕ್ಯಾಪ್ಟನ್ ಆಗಿರುವ ಪ್ರಿಯಮ್ ಗಾರ್ಗ್ ಮೂಲತಃ ಉತ್ತರ ಪ್ರದೇಶದವರು. ಗಾರ್ಗ್ ಅವರ ತಂದೆ ಉತ್ತರ ಪ್ರದೇಶದ ಪರೀಕ್ಷಿತ್ ನಗರದಲ್ಲಿ ಶಾಲಾ ವಾಹನವನ್ನು ಚಾಲಯಿಸುತ್ತಾರೆ. ಆದರೆ ತುಂಬಾ ಕಠಿಣ ಪರಿಸ್ಥಿತಿಯಲ್ಲೂ ಕ್ರಿಕೆಟ್ ಅಭ್ಯಾಸ ಬಿಡದ ಗಾರ್ಗ್ ಭಾರತದ ಅಂಡರ್-19 ತಂಡದ ನಾಯಕನಾಗಿ ಮಿಂಚಿದ್ದರು. ಈಗ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ 1.9 ಕೋಟಿ ನೀಡಿ ಖರೀದಿ ಮಾಡಿದೆ.
Advertisement
ಆರೋನ್ ಪಿಂಚ್, ಮೋರಿಸ್ ಆರ್ಸಿಬಿಗೆ
ಆರ್ಸಿಬಿ ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮ್ಯಾನ್ ಆರೋನ್ ಫಿಂಚ್ ಅವರನ್ನು 4.40 ಕೋಟಿ ನೀಡಿ ಖರೀದಿ ಮಾಡಿತು. ನಂತರ ಸೌಥ್ ಆಫ್ರಿಕಾದ ಆಲ್ರೌಂಡರ್ ಕ್ರಿಸ್ ಮೋರಿಸ್ ಅವರನ್ನು 10 ಕೋಟಿಗೆ ಖರೀದಿ ಮಾಡಿದೆ. ನಂತರ ಕೇನ್ ರಿಚಡ್ರ್ಸನ್ 4.40 ಕೋಟಿ, ಜೊಶುವಾ ಫಲಿಪ್ 20 ಲಕ್ಷ, ಪವನ್ ದೇಶಪಾಂಡೆ 20 ಲಕ್ಷಕ್ಕೆ ಖರೀದಿ ಮಾಡಿದೆ.
Here's a look at the TOP 10 BUYS ????????post some fierce bidding at the 2020 @Vivo_India #IPLAuction ???????????? pic.twitter.com/wxuFnBx4fq
— IndianPremierLeague (@IPL) December 19, 2019