Connect with us

Cricket

ಆರ್‌ಸಿಬಿ ಇಂದ ಮೆಕಲಮ್, ವೋಕ್ಸ್ ಔಟ್ – ಅಬ್ಬರಿಸಲು ಎಬಿಡಿ ಸಿದ್ಧ!

Published

on

ಮುಂಬೈ: 2019 ಐಪಿಎಲ್ ಆವೃತ್ತಿಗೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ 10 ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಆರ್‌ಸಿಬಿ ತಂಡದಿಂದ ನ್ಯೂಜಿಲೆಂಡ್ ನ ಬ್ರೆಂಡನ್ ಮೆಕಲಮ್, ಕ್ರಿಸ್ ವೋಕ್ಸ್ ಹಾಗೂ ಸರ್ಫರಾಜ್ ಖಾನ್ ಸೇರಿದಂತೆ ಹಲವು ಆಟಗಾರನ್ನು ಕೈಬಿಟ್ಟಿದೆ.

2019ರ ಟೂರ್ನಿಯ ಹರಾಜು ಪ್ರಕ್ರಿಯೆ ಕಾರಣ ಆರ್‌ಸಿಬಿ ಕೆಲ ಆಟಗಾರರಿಗೆ ಗೇಟ್ ಪಾಸ್ ನೀಡಿದ್ದು, ತಂಡದಲ್ಲಿ ನಾಯಕ ವಿರಾಟ್ ಕೊಹ್ಲಿ, ಎ ಬಿ ಡಿವಿಯರ್ಸ್, ಪಾರ್ಥಿವ್ ಪಟೇಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಪವನ್ ನೇಗಿ, ಮೊಯಿನ್ ಅಲಿ, ಯಜುವೇಂದ್ರ ಚಹಲ್, ಮೊಹಮ್ಮದ್ ಸಿರಾಜ್, ಟಿಮ್‌ ಸೌಥಿ, ಉಮೇಶ್ ಯಾದವ್, ನವದೀಪ್ ಸೈನಿ ಉಳಿದುಕೊಂಡಿದ್ದಾರೆ.

ಇತ್ತ ಆರ್‌ಸಿಬಿ ದಕ್ಷಿಣ ಅಫ್ರಿಕಾ ಸ್ಫೋಟಕ ಆಟಗಾರ ಎಬಿ ಡಿವಿಲಿಯರ್ಸ್ ರನ್ನು ಉಳಿಸಿಕೊಂಡಿದ್ದು, ಈ ಮೂಲಕ ದಿಢೀರ್ ನಿವೃತ್ತಿ ಘೋಷಿಸಿ ಅಭಿಮಾನಿಗಳಿಕೆ ಶಾಕ್ ನೀಡಿದ್ದ ಎಬಿಡಿ ಆಟವನ್ನು ನೋಡಲು ಅಭಿಮಾನಿಗಳಿಗೆ ಅವಕಾಶ ಲಭಿಸಿದೆ. ಈ ಬಾರಿ ಎಬಿಡಿ ಬ್ಯಾಟಿಂಗ್ ಅರ್ಭಟ ಶುರುವಾದರೆ ಕಪ್ ಗೆಲ್ಲುವುದು ಖಚಿತವಾಗಿದ್ದು, ನಿವೃತ್ತಿಯ ಬಳಿಕ ಕ್ರಿಕೆಟ್ ಗೆ ಮತ್ತೆ ಕಮ್ ಬ್ಯಾಕ್ ಮಾಡಿದ್ದ ಎಬಿಡಿ ಮಜಾನ್ಸಿ ಸೂಪರ್ ಲೀಗ್ ಅಭ್ಯಾಸ ಪಂದ್ಯದಲ್ಲಿ 96 ರನ್ ಸಿಡಿಸಿ ಮಿಂಚಿದ್ದರು. ಈ ಮೂಲಕ 6 ತಿಂಗಳ ಬಳಿಕ ಮತ್ತೆ ಸ್ಫೋಟಕ ಪ್ರದರ್ಶನ ನೀಡಿದ್ದರು.

2016 ರಲ್ಲಿ ಆವೃತ್ತಿಯಲ್ಲಿ ಫೈನಲ್ ಪ್ರವೇಶ ಮಾಡಿದ್ದ ಆರ್‍ಸಿಬಿ ಬಳಿಕ ನಡೆದ ಟೂರ್ನಿಗಳಲ್ಲಿ ಪ್ಲೇಆಫ್ ಹಂತ ಪ್ರವೇಶ ಮಾಡಲು ವಿಫಲವಾಗಿತ್ತು. ಇದರಿಂದ ಈ ಬಾರಿ ಬಲಿಷ್ಠ ತಂಡದ ರೂಪಿಸಲು ತಂಡವನ್ನು ಆಯ್ಕೆ ಮಾಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Click to comment

Leave a Reply

Your email address will not be published. Required fields are marked *