ಬೆಂಗಳೂರು: ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು ಹರಾಜಿನಲ್ಲಿ 16 ಕರ್ನಾಟಕದ ಆಟಗಾರರು 8 ತಂಡಕ್ಕೆ ಸೇಲ್ ಆಗಿದ್ದಾರೆ.
Advertisement
ಈ ಹಿಂದಿನ ಐಪಿಎಲ್ ಮತ್ತು ಕರ್ನಾಟಕ ರಾಜ್ಯ ತಂಡದಲ್ಲಿ ಉತ್ತಮ ಪ್ರದರ್ಶನ ತೋರಿದ 16 ಕನ್ನಡಿಗರಿಗೆ ಐಪಿಎಲ್‍ನಲ್ಲಿ ಬೇಡಿಕೆ ಕಂಡು ಬಂತು. ಅದರಲ್ಲೂ 8 ಕನ್ನಡಿಗರು ಕೋಟಿ ವೀರರಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: RCB ತಂಡದಲ್ಲಿ ಇಬ್ಬರು ಕನ್ನಡಿಗರು – ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
Advertisement
Advertisement
ಒಟ್ಟು 12 ತಂಡಗಳ ಪೈಕಿ 10 ತಂಡಗಳು ಪ್ರತಿಭಾನ್ವಿತ ಕನ್ನಡಿಗ ಆಟಗಾರರ ಮೇಲೆ ನಂಬಿಕೆ ಇಟ್ಟು ಖರೀದಿಸಿದೆ. ಈ ಪೈಕಿ ಕೆ.ಎಲ್ ರಾಹುಲ್‍ಗೆ 17 ಕೋಟಿ ರೂ. ನೀಡಿ ಲಕ್ನೋ ಸೂಪರ್ ಜೈಂಟ್ ಖರೀದಿಸಿದರೆ, ಮಯಾಂಕ್ ಅರ್ಗವಾಲ್‍ಗೆ 12 ಕೋಟಿ ರೂ. ನೀಡಿ ರಾಜಸ್ಥಾನ್ ಬರಮಾಡಿಕೊಂಡಿದೆ. ಪ್ರಸಿದ್ಧ್ ಕೃಷ್ಣರನ್ನು 10 ಕೋಟಿ ನೀಡಿ ರಾಜಸ್ಥಾನ ರಾಯಲ್ಸ್ ತಂಡ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಈ ಮೂಲಕ ಈ ಮೂವರು ಕರ್ನಾಟಕದ ದುಬಾರಿ ಆಟಗಾರರೆನಿಸಿಕೊಂಡಿದ್ದಾರೆ. ಇದನ್ನೂ ಓದಿ: ಐಪಿಎಲ್ ಹರಾಜು ಅಂತ್ಯ – ಫ್ರಾಂಚೈಸ್‍ಗಳಿಗೆ ಬೇಡವಾದ ಸ್ಟಾರ್ ಆಟಗಾರರು
Advertisement
16 Karnataka players are part of various IPL squads. Their combined price is 60.60 crores. 10 IPL teams have spend ~553 crores, off which Karnataka players take ~9.2% – lion's share! Congratulations to all the players ???? #IPL pic.twitter.com/gc02gdGq7R
— Karnataka Ranji Team║ಕರ್ನಾಟಕ ರಣಜಿ ತಂಡ (@RanjiKarnataka) February 13, 2022
ಇನ್ನೂಳಿದಂತೆ ದೇವದತ್ ಪಡಿಕ್ಕಲ್ ರಾಜಸ್ಥಾನ ರಾಯಲ್ಸ್ 7 ಕೋಟಿ, ಮನೀಶ್ ಪಾಂಡೆ ಲಕ್ನೋ ಸೂಪರ್ ಜೈಂಟ್ಸ್ 4.60 ಕೋಟಿ, ಅಭಿನವ್ ಮನೋಹರ್ ಗುಜರಾತ್ ಟೈಟಾಟ್ಸ್ 2.60 ಕೋಟಿ, ರಾಬಿನ್ ಉತ್ತಪ್ಪ ಚೆನ್ನೈ ಸೂಪರ್ ಕಿಂಗ್ಸ್ 2 ಕೋಟಿ, ಕರಣ್ ನಾಯರ್ ರಾಜಸ್ಥಾನ ರಾಯಲ್ಸ್ 1.40 ಕೋಟಿ, ಕೃಷ್ಣಪ್ಪ ಗೌತಮ್ ಲಕ್ನೋ ಸೂಪರ್ ಜೈಂಟ್ಸ್ 90 ಲಕ್ಷ, ಶ್ರೇಯಸ್ ಗೋಪಾಲ್ ಸನ್‍ರೈಸರ್ಸ್ ಹೈದರಾಬಾದ್ 75 ಲಕ್ಷ, ಪ್ರವೀಣ್ ದುಬೆ ಡೆಲ್ಲಿ ಕಾಪಿಟಲ್ಸ್ 50 ಲಕ್ಷ, ಕೆ.ಸಿ ಕಾರ್ಯಪ್ಪ ರಾಜಸ್ಥಾನ ರಾಯಲ್ಸ್ 30 ಲಕ್ಷ, ರವಿಕುಮಾರ್ ಸಮರ್ಥ್, ಜಗದೀಶ್ ಸುಚಿತ್, ಅನೀಶ್ವರ್ ಗೌತಮ್, ಲವ್‍ನಿತ್ ಸಿಸೋದಿಯಾ ತಲಾ 20 ಲಕ್ಷ ರೂ. ಪಡೆದು ಕ್ರಮವಾಗಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.