ಮುಂಬೈ: ಐಪಿಎಲ್ 2026 ಮಿನಿ ಹರಾಜಿಗೂ ಮುನ್ನ 10 ಆಟಗಾರರು ಟ್ರೇಡಿಂಗ್ ಆಯ್ಕೆ ಮೂಲಕ ಬೇರೆ ಬೇರೆ ತಂಡಗಳಿಗೆ ಸೇರ್ಪಡೆಯಾಗಿದ್ದಾರೆ. ಟ್ರೇಡ್ ಆಗಿರುವ ಆಟಗಾರರ ಪೂರ್ಣ ಪಟ್ಟಿ ಹೀಗಿದೆ.
ಸಂಜು ಸ್ಯಾಮ್ಸನ್
ರಾಜಸ್ಥಾನ್ ರಾಯಲ್ಸ್ ತಂಡದ ಕ್ಯಾಪ್ಟನ್ ಆಗಿದ್ದ ಸಂಜು ಸ್ಯಾಮ್ಸನ್ ಮುಂದಿನ ಸೀಸನ್‌ಗೆ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸ್ವಾಪ್ ಡೀಲ್ ಆಗಿದ್ದಾರೆ. ಸಿಎಸ್‌ಕೆ ಫ್ರಾಂಚೈಸಿ ರವೀಂದ್ರ ಜಡೇಜಾ ಹಾಗೂ ಸ್ಯಾಮ್ ಕರನ್ ಅವರನ್ನು ಕೈಬಿಟ್ಟು 18 ಕೋಟಿ ರೂ.ಗೆ ಸಂಜು ಸ್ಯಾಮ್ಸನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ರವೀಂದ್ರ ಜಡೇಜಾ
ಸಿಎಸ್‌ಕೆ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ ಮುಂದಿನ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಲಿದ್ದಾರೆ. ಜಡೇಜಾ ಅವರನ್ನು 14 ಕೋಟಿ ರೂ.ಗೆ ಆರ್‌ಆರ್ ಖರೀದಿಸಿದೆ.
ನಿತೀಶ್ ರಾಣಾ
ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ನಿತೀಶ್ ರಾಣಾರನ್ನು 4.2 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಖರೀದಿ ಮಾಡಿದೆ.
ಮಯಾಂಕ್ ಮಾರ್ಕಂಡೆ
ಕೆಕೆಆರ್ ತಂಡದಲ್ಲಿದ್ದ ಸ್ಪಿನ್ನರ್ ಮಯಾಂಕ್ ಮಾರ್ಕಂಡೆ 30 ಲಕ್ಷ ರೂ. ಕ್ಯಾಶ್ ಡೀಲ್‌ನೊಂದಿಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಪಾಲಾಗಿದ್ದಾರೆ.
ಶಾರ್ದೂಲ್ ಠಾಕೂರ್
ಎಲ್‌ಎಸ್‌ಜಿ ತಂಡದಲ್ಲಿದ್ದ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 2 ಕೋಟಿ ರೂ.ಗೆ ಖರೀದಿಸಿದೆ.
ಸ್ಯಾಮ್ ಕರನ್
ಸಿಎಸ್‌ಕೆ ತಂಡದಿಂದ ಸ್ಯಾಮ್ ಕರನ್ ಅವರನ್ನು ರಾಜಸ್ಥಾನ್ ರಾಯಲ್ಸ್ ಸ್ವಾಪ್ ಡೀಲ್‌ನೊಂದಿಗೆ ತಂಡಕ್ಕೆ ಸೇರಿಸಿಕೊಂಡಿದೆ. 2.4 ಕೋಟಿ ರೂ.ಗೆ ಆರ್‌ಆರ್ ಪಾಲಾಗಿದ್ದಾರೆ.
ಮೊಹಮ್ಮದ್ ಶಮಿ
ವೇಗದ ಬೌಲರ್ ಮೊಹಮ್ಮದ್ ಶಮಿ ಇನ್ಮುಂದೆ ಎಲ್‌ಎಸ್‌ಜಿ ತಂಡದಲ್ಲಿ ಆಡಲಿದ್ದಾರೆ. ಎಸ್‌ಆರ್‌ಹೆಚ್ ಫ್ರಾಂಚೈಸಿಯಿಂದ 10 ಕೋಟಿ ರೂ.ಗೆ ಶಮಿಯನ್ನು ಖರೀದಿಸಿದೆ.
ಶೆರ್ಪೆನ್ ರದರ್‌ಫೋರ್ಡ್
ಶೆರ್ಪೆನ್ ರದರ್‌ಫೋರ್ಡ್ ಅವರನ್ನು 2.6 ಕೋಟಿ ರೂ.ಗೆ ಮುಂಬೈ ಇಂಡಿಯನ್ಸ್ ಖರೀದಿಸಿದೆ. ಗುಜರಾತ್ ಟೈಟನ್ಸ್ ತಂಡ ಇವರನ್ನು ಬಿಟ್ಟುಕೊಟ್ಟಿದೆ.
ಅರ್ಜುನ್ ತೆಂಡೂಲ್ಕರ್
ಮುಂಬೈ ಇಂಡಿಯನ್ಸ್ ಆಲ್‌ರೌಂಡರ್ ಅರ್ಜುನ್ ತೆಂಡೂಲ್ಕರ್ ಇನ್ಮುಂದೆ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಆಡಲಿದ್ದಾರೆ. ಇವರನ್ನು 30 ಲಕ್ಷ ರೂ.ಗೆ ಖರೀದಿಸಲಾಗಿದೆ.
ಡೊನೊವನ್ ಫೆರೀರಾ
ಡೆಲ್ಲಿ ಕ್ಯಾಪಿಟಲ್ಸ್ ಕೈಬಿಟ್ಟ ಡೊನೊವನ್ ಫೆರೀರಾ ಅವರನ್ನು ರಾಜಸ್ಥಾನ್ ರಾಯಲ್ಸ್ 1 ಕೋಟಿ ರೂ.ಗೆ ಖರೀದಿ ಮಾಡಿದೆ.

