ಮುಂಬೈ: 19ನೇ ಆವೃತ್ತಿಯ ಐಪಿಎಲ್ (IPL 2026) ಟೂರ್ನಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಟೂರ್ನಿಯ ಮೊದಲ 20 ಪಂದ್ಯಗಳ ಪಟ್ಟಿಯಷ್ಟೇ ರಿಲೀಸ್ ಆಗಿದ್ದು, ಮಾ.28 ರಿಂದ ಐಪಿಎಲ್ ಪಂದ್ಯ ಆರಂಭವಾಗಲಿದೆ. ಬೆಂಗಳೂರಿನಲ್ಲೇ ಉದ್ಘಾಟನಾ ಪಂದ್ಯ ನಡೆಯಲಿದ್ದು, ಎಸ್‌ಆರ್‌ಹೆಚ್ ವಿರುದ್ಧ ಆರ್‌ಸಿಬಿ (RCB) ಸೆಣಸಲಿದೆ.


ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಪಂಚರಾಜ್ಯ ಚುನಾವಣೆ ಹಿನ್ನೆಲೆ ವೇಳಾಪಟ್ಟಿ ಬಿಡುಗಡೆಗೆ ವಿಳಂಬವಾಗಿತ್ತು. ಮೊದಲ 20 ಪಂದ್ಯಗಳ ಪೈಕಿ ಬೆಂಗಳೂರಿನಲ್ಲಿ ಎರಡು ಪಂದ್ಯ ನಡೆಯಲಿವೆ. ಮಾ.28 ರಂದು ಉದ್ಘಾಟನಾ ಪಂದ್ಯದಲ್ಲಿ ಎಸ್‌ಆರ್‌ಹೆಚ್ ವಿರುದ್ಧ ಹಾಗೂ ಏ.5 ರಂದು ಚೆನ್ನೈ ವಿರುದ್ಧ ಬೆಂಗಳೂರಿನಲ್ಲಿ ಆರ್‌ಸಿಬಿ ಸೆಣಸಲಿದೆ.

