IPL 2025 | ಶ್ರೀಮಂತ ಕ್ರಿಕೆಟ್‌ ಟೂರ್ನಿಯಲ್ಲಿ ರನ್‌ ಹೊಳೆ ಹರಿಸಿದ ವೀರರು ಇವರೇ…

Public TV
3 Min Read
ipl 2025

ಇದೇ ಮಾರ್ಚ್‌ 22ರಿಂದ ಆರಂಭವಾಗಲಿರುವ ವಿಶ್ವದ ಶ್ರೀಮಂತ ಕ್ರಿಕೆಟ್‌ ಟೂರ್ನಿಯತ್ತ ಎಲ್ಲರ ಚಿತ್ತ ನೆಟ್ಟಿದೆ. ಟೂರ್ನಿಯಲ್ಲಿ ಮೊದಲಿನಿಂದಲೂ ಬ್ಯಾಟರ್‌ಗಳ ಅಬ್ಬರ ಜೋರಾಗಿದೆ. ಹಾಗಿದ್ದರೆ ಒಟ್ಟಾರೆ ಲೀಗ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಟಾಪ್‌-5 ಬ್ಯಾಟರ್‌ ಯಾರು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಟಿ20 ಫಾರ್ಮೆಟ್‌ಗೆ ಹೊಸ ಹೊಳಪು ನೀಡಿದ್ದು ಐಪಿಎಲ್. ಈ ಲೀಗ್ ಆರಂಭವಾದಾಗ ಇಷ್ಟು ದೊಡ್ಡದಾಗಿ ಬೆಳೆಯುತ್ತದೆ ಎಂದು ಯಾರು ಊಹಿಸಿರಲು ಸಾಧ್ಯವೇ ಇರಲಿಲ್ಲ. ಆದರೆ ಕಳೆದ 18 ವರ್ಷಗಳಲ್ಲಿ ಈ ಲೀಗ್ ಬೆಳೆದು ನಿಂತ ಪರಿ ಅಮೋಘ. ಈ ಲೀಗ್‌ನಲ್ಲಿ ಬ್ಯಾಟರ್‌ ಅಬ್ಬರ ಜೋರಾಗಿರುತ್ತದೆ. ಬೌಲರ್‌ಗಳ ರಣ ತಂತ್ರವನ್ನು ಬುಡಮೇಲು ಮಾಡಿ ರನ್‌ ವೇಗಕ್ಕೆ ಚುರುಕು ಮುಟ್ಟಿಸುವ ಬ್ಯಾಟರ್‌ಗಳು, ತಮ್ಮ ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದ್ದಾರೆ.

Virat Kohli 3

ಇಂದಿಗೂ ಕೊಹ್ಲಿಯೇ ಕಿಂಗ್‌
ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ ಬಾರಿಸಿದ ಆಟಗಾರರ ಪಟ್ಟಿಯನ್ನು ಒಮ್ಮೆ ನೋಡಿದಾಗ, ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳುತ್ತಾರೆ. ಇವರು ಈಗಾಗಲೇ 17 ಆವೃತ್ತಿಗಳನ್ನು ಒಂದೇ ತಂಡದ ಪರ ಆಡಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಈಗ 18ನೇ ಆವೃತ್ತಿ ಆಡಲು ಸಿದ್ಧರಾಗಿದ್ದಾರೆ. ಈ ಲೀಗ್‌ನಲ್ಲಿ ತಮ್ಮದೇ ಹವಾ ಕ್ರಿಯೇಟ್‌ ಮಾಡಿರುವ ವಿರಾಟ್‌ ಗರಿಷ್ಠ ರನ್‌ ಲೆಕ್ಕಾಚಾರದಲ್ಲೂ ಮುಂಚೂಣಿಯಲಿದ್ದಾರೆ. ವಿರಾಟ್‌ ಒಟ್ಟಾರೆ 252 ಐಪಿಎಲ್‌ ಪಂದ್ಯಗಳ 244 ಇನಿಂಗ್ಸ್‌ನಲ್ಲಿ 38.66ರ ಸರಾಸರಿಯಲ್ಲಿ 8004 ರನ್‌ ಸಿಡಿಸಿದ್ದಾರೆ. ಈ ವೇಳೆ 8 ಶತಕ ಹಾಗೂ 55 ಅರ್ಧಶತಕಗಳು ಸೇರಿವೆ.

IPL 2023 Shikhar Dhawan

ರನ್‌ ಶಿಖರ ಏರಿರುವ ಧವನ್‌
ಐಪಿಎಲ್‌ನಲ್ಲಿ ಗರಿಷ್ಠ ರನ್‌ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಶಿಖರ್‌ ಧವನ್‌ ಅವರಿಗೆ ಎರಡನೇ ಸ್ಥಾನ ಇದೆ. ಇವರು 222 ಪಂದ್ಯಗಳ 221 ಇನಿಂಗ್ಸ್‌ನಲ್ಲಿ 6769 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 2 ಶತಕ ಹಾಗೂ 51 ಅರ್ಧಶತಕಗಳು ಸೇರಿವೆ. ಕಳೆದ ಆವೃತ್ತಿಯಲ್ಲಿ ಪಂಜಾಬ್‌ ಕಿಂಗ್ಸ್‌ ಪರ ಕೆಲವು ಪಂದ್ಯಗಳನ್ನಷ್ಟೇ ಆಡಿದ್ದರು.

ROHITH SHARMA 2

ಐಪಿಎಲ್‌ನಲ್ಲಿ ಹಿಟ್‌ಮ್ಯಾನ್‌ ಅಬ್ಬರ
ಐಪಿಎಲ್‌ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ 5 ಬಾರಿ ಚಾಂಪಿಯನ್‌ ಕಿರೀಟ ತಂದುಕೊಟ್ಟ ರೋಹಿತ್‌ ಶರ್ಮಾ ಅತಿಹೆಚ್ಚು ರನ್‌ ಗಳಿಸಿದ 3ನೇ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 257 ಪಂದ್ಯಗಳು, 252 ಇನಿಂಗ್ಸ್‌ಗಳಲ್ಲಿ 6,628 ರನ್‌ ಸಿಡಿಸಿದ್ದಾರೆ. ಇದರಲ್ಲಿ 2 ಶತಕ, 43 ಅರ್ಧಶತಕಗಳು, 599 ಬೌಂಡರಿಗಳು ಹಾಗೂ 280 ಸಿಕ್ಸರ್‌ಗಳು ಸೇರಿವೆ. ಆರಂಭಿಕ ಆವೃತ್ತಿಯಲ್ಲಿ ಡೆಕ್ಕನ್‌ ಚಾರ್ಜಸ್‌ ತಂಡದಲ್ಲಿದ್ದ ರೋಹಿತ್‌ ಶರ್ಮಾ ನಂತರ ಮುಂಬೈ ಇಂಡಿಯನ್ಸ್‌ಗೆ ಸೇರ್ಪಡೆಯಾದರು.

david warner 2

ದೈತ್ಯ ಬ್ಯಾಟರ್‌ ಡೇವಿಡ್‌ ವಾರ್ನರ್‌
ಇಡೀ ಐಪಿಎಲ್‌ ಇತಿಹಾಸದಲ್ಲಿ ಅತಿಹೆಚ್ಚು ರನ್‌ ಗಳಿಸಿದ ಟಾಪ್‌-5 ಬ್ಯಾಟರ್‌ಗಳ ಪೈಕಿ ಡೇವಿಡ್‌ ವಾರ್ನರ್‌ ಏಕೈಕ ವಿದೇಶಿ ಆಟಗಾರನಾಗಿದ್ದಾರೆ. ಜೊತೆಗೆ ಐಪಿಎಲ್‌ನಲ್ಲಿ ಅತಿಹೆಚ್ಚು ರನ್‌ ಗಳಿಸಿದ 4ನೇ ಆಟಗಾರನಾಗಿರುವ ವಾರ್ನರ್‌ ಭಾರತದಲ್ಲೂ ತಮ್ಮದೇ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. 184 ಪಂದ್ಯ, 184 ಇನ್ನಿಂಗ್ಸ್‌ಗಳನ್ನಾಡಿರುವ ಡೇವಿಡ್‌ ವಾರ್ನರ್‌ 139.77 ಸ್ಟ್ರೈಕ್‌ರೇಟ್‌ನಲ್ಲಿ 6,565 ರನ್‌ ಗಳಿಸಿದ್ದಾರೆ. ಇದರಲ್ಲಿ 4 ಶತಕ, 61 ಅರ್ಧಶತಕ, 663 ಬೌಂಡರಿ ಹಾಗೂ 236 ಸಿಕ್ಸರ್‌ಗಳು ಸೇರಿವೆ.

Suresh Raina 1

ರನ್‌ ಹೊಳೆ ಹರಿಸಿದ ರೈನಾ:
ಐಪಿಎಲ್‌ನ ಅತ್ಯಂತ ವಿಶೇಷ ಬ್ಯಾಟರ್‌ ಎನಿಸಿಕೊಂಡಿರುವ ಚೈನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಜಿ ಆಟಗಾರ ಸುರೇಶ್‌ ರೈನಾ ಟೂರ್ನಿಯಲ್ಲಿ ಅತಿಹೆಚ್ಚು ರನ್‌ ಗಳಿಸಿದ 5ನೇ ಆಟಗಾರನಾಗಿದ್ದಾರೆ. 205 ಪಂದ್ಯಗಳು ಹಾಗೂ 200 ಇನ್ನಿಂಗ್ಸ್‌ಗಳನ್ನಾಡಿರುವ ರೈನಾ 5,528 ರನ್‌ ಗಳಿಸಿದ್ದಾರೆ. ಈ ಪೈಕಿ 1 ಶತಕ, 39 ಅರ್ಧಶತಕ, 506 ಬೌಂಡರಿ, 203 ಸಿಕ್ಸರ್‌ಗಳು ಸೇರಿವೆ. ಐಪಿಎಲ್‌ ಇತಿಹಾಸದಲ್ಲಿ ಪವರ್‌ ಪ್ಲೇನಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್‌ ಸಿಡಿಸಿದ ದಾಖಲೆ ಸಹ ಸುರೇಶ್‌ ರೂನಾ ಹೆಸರಲ್ಲೇ ಇರುವುದು ವಿಶೇಷ.

Share This Article