ಅಹಮದಾಬಾದ್: ಗುಜರಾತ್ ಟೈಟಾನ್ಸ್ (Gujarat Titans )ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹೀನಾಯ ಸೋಲು ಕಂಡಿತು. ಈ ಬೆನ್ನಲ್ಲೇ ಆರ್‌ಆರ್ ತಂಡದ ನಾಯಕ ಸಂಜು ಸ್ಯಾಮ್ಸನ್ (Sanju Samson) ಅವರಿಗೆ 24 ಲಕ್ಷ ರೂ. ದಂಡ ವಿಧಿಸಿದೆ.
ಬುಧವಾರ ಟೈಟಾನ್ಸ್ ವಿರುದ್ಧ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್‌ಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ಪ್ರಸಕ್ತ ಆವೃತ್ತಿಯಲ್ಲಿ ಸ್ಲೋ ಓವರ್ ರೇಟ್‌ಗಾಗಿ (slow over-rate) ಆರ್‌ಆರ್‌ಗೆ 2ನೇ ಬಾರಿ ದಂಡ ವಿಧಿಸಲಾಗಿದೆ. ಇನ್ನೊಂದು ಪಂದ್ಯದಲ್ಲಿ ಈ ಘಟನೆ ಮರುಕಳಿಸಿದ್ರೆ, ಸಂಜು ಸ್ಯಾಮ್ಸನ್ ಒಂದು ಪಂದ್ಯದಿಂದ ಬ್ಯಾನ್ ಆಗಲಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: IPL 2025 – ಜಿಯೋದಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉಚಿತ ಇಂಟರ್ನೆಟ್
ಈ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಆರ್ ಸ್ಲೋ ಓವರ್ ರೇಟ್ ಕಾಯ್ದುಕೊಂಡಿತ್ತು. ಆಗ ಸ್ಟ್ಯಾಂಡ್ ಇನ್ ಕ್ಯಾಪ್ಟನ್ ಆಗಿದ್ದ ರಿಯಾನ್ ಪರಾಗ್‌ಗೆ (Riyan Parag) 12 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಜೊತೆಗೆ ತಂಡದ ಇತರ ಆಟಗಾರರಿಗೆ ಪಂದ್ಯ ಶುಲ್ಕದ ಶೇ.25 ರಷ್ಟು ಅಥವಾ ತಲಾ 6 ಲಕ್ಷ ರೂ. ದಂಡ ವಿಧಿಸಿತ್ತು. ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ದರು. 2ನೇ ಬಾರಿ ಅದೇ ತಪ್ಪು ಮಾಡಿದ್ದರಿಂದ ತಂಡದ ನಾಯಕ ಸ್ಯಾಮ್ಸನ್‌ಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದನ್ನೂ ಓದಿ: ತನ್ನ ಚೊಚ್ಚಲ ಐಪಿಎಲ್‌ನಲ್ಲೇ ಸ್ಫೋಟಕ ಶತಕ – ಎಬಿಡಿ, ಕೊಹ್ಲಿ ದಾಖಲೆ ಪುಡಿಗಟ್ಟಿದ 24ರ ಯುವಕ
ಬುಧವಾರ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 58 ರನ್‌ಗಳ ಹೀನಾಯ ಸೋಲು ಕಂಡಿರು. ಬಳಿಕ ಪೋಸ್ಟ್ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಸಂಜು, ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ನಮ್ಮ ಪ್ರದರ್ಶನ ಕಳಪೆಯಾಗಿತ್ತು. ಬೌಲಿಂಗ್‌ನಲ್ಲಿ 15-20 ರನ್‌ಗಳನ್ನು ಹೆಚ್ಚುವರಿಯಾಗಿ ಕೊಟ್ಟಿದ್ದೇವೆ. ಅಲ್ಲದೇ ತಂಡಕ್ಕೆ ರನ್ ಅಗತ್ಯವಿದ್ದಾಗಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡೆವು ಇದು ತಂಡದ ಸೋಲಿಗೆ ಕಾರಣ ಎಂದು ಹೇಳಿದರು. ಇದನ್ನೂ ಓದಿ: ಐಪಿಎಲ್ 2025: ಪಂಜಾಬ್ ಆಲ್‌ರೌಂಡರ್ ಮ್ಯಾಕ್ಸ್‌ವೆಲ್‌ಗೆ ಪಂದ್ಯದ 25% ದಂಡ