ನವದೆಹಲಿ: ವೈಭವ್ ಸೂರ್ಯವಂಶಿ (Vaibhav Suryavanshi)ಅವರ ಅಮೋಘ ಅರ್ಧಶತಕದ ಬ್ಯಾಟಿಂಗ್ ನೆರವಿನೊಂದಿಗೆ ರಾಜಸ್ಥಾನ್ಸ್ ರಾಯಲ್ಸ್ (Rajasthan Royals) ತಂಡವು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಸಂಜು ಸ್ಯಾಮ್ಸನ್ ನಾಯಕತ್ವದ ಆರ್‌ಆರ್ (RR)ತಂಡ 18ನೇ ಆವೃತ್ತಿಯ ಐಪಿಎಲ್‌ಗೆ (IPL) ವಿದಾಯ ಹೇಳಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 8 ಓವರ್‌ಗಳ ನಷ್ಟಕ್ಕೆ 187 ರನ್ ಗಳಿಸಿತ್ತು. ಸ್ಪರ್ಧಾತ್ಮಕ ಮೊತ್ತದ ಗುರಿ ಬೆನ್ನಟ್ಟಿದ ರಾಜಸ್ಥಾನ 17.1 ಓವರ್‌ಗಳಲ್ಲೇ 4 ವಿಕೆಟ್ ನಷ್ಟಕ್ಕೆ 188 ರನ್ ಗಳಿಸುವ ಮೂಲಕ ಕೊನೆಯ ಪಂದ್ಯದಲ್ಲಿ ವಿಜಯಶಾಲಿಯಾಯಿತು.ಇದನ್ನೂ ಓದಿ: ತನ್ನ ಚೊಚ್ಚಲ ಐಪಿಎಲ್‌ನಲ್ಲೇ ಉದ್ಧಟತನ – ಒಂದು ಪಂದ್ಯಕ್ಕೆ ದಿಗ್ವೇಶ್ ಅಮಾನತು, ಭಾರೀ ದಂಡ
ಲೀಗ್ ಸುತ್ತಿನ ಕೊನೆಯ ಪಂದ್ಯದಲ್ಲಿ ಗೆಲಲ್ಲೇಬೇಕೆಂದು ಪಣತೊಟ್ಟು ಕಣಕ್ಕಿಳಿದ ರಾಜಸ್ಥಾನ ರಾಯಲ್ಸ್ ಪಂದ್ಯದ ಮೊದಲಿನಿಂದಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾಯಿತು. ಯಶಸ್ವಿ ಜೈಸ್ವಾಲ್ 19 ಎಸೆತಗಳಲ್ಲಿ 36 ರನ್, ವೈಭವ್ ಸೂರ್ಯವಂಶಿ 33 ಎಸೆತಗಳಲ್ಲಿ 57 ರನ್, ಸಂಜು ಸ್ಯಾಮ್ಸನ್ 31 ಎಸೆತಗಳಲ್ಲಿ 41 ರನ್, ರಿಯಾನ್ ಪರಾಗ್ 4 ಎಸೆತಗಳಲ್ಲಿ 3 ರನ್, ಧ್ರುವ್ ಜುರೆಲ್ 12 ಎಸೆತಗಳಲ್ಲಿ 31 ರನ್ ಹಾಗೂ ಶಿಮ್ರಾನ್ ಹೆಟ್ಮೆಯರ್ 5 ಎಸೆತಗಳಲ್ಲಿ 12 ರನ್ ಗಳಿಸಿದರು.
Jurel says that’s how it’s done 😎@rajasthanroyals sign off from #TATAIPL 2025 in an emphatic way 🩷
Updates ▶ https://t.co/hKuQlLxjIZ #CSKvRR pic.twitter.com/F5H5AbcIVu
— IndianPremierLeague (@IPL) May 20, 2025
ಚೆನ್ನೈ ಪರ ಬೌಲಿಂಗ್ ಮಾಡಿದ ರವಿಚಂದ್ರನ್ ಅಶ್ವಿನ್ 2, ಅನ್ಶುಲ್ ಕಾಂಬೋಜ್, ನೂರ್ ಅಹ್ಮದ್ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಮಾಡಿ, ಆಯುಷ್ ಮಾತ್ರೆ 20 ಎಸೆತಗಳಲ್ಲಿ 43 ರನ್, ಡೆವೊನ್ ಕಾನ್ವೇ 8 ಎಸೆತಗಳಲ್ಲಿ 10 ರನ್, ರವಿಚಂದ್ರನ್ ಅಶ್ವಿನ್ 8 ಎಸೆತಗಳಲ್ಲಿ 13 ರನ್, ಡೆವಾಲ್ಡ್ ಬ್ರೆವಿಸ್ 25 ಎಸೆತಗಳಲ್ಲಿ 42 ರನ್, ಶಿವಂ ದುಬೆ 32 ಎಸೆತಗಳಲ್ಲಿ 39 ರನ್, ಎಂಎಸ್ ಧೋನಿ 17 ಎಸೆತಗಳಲ್ಲಿ 16 ರನ್ ಗಳಿಸಿದರು. ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಳ್ಳುವ ಮೂಲಕ 187 ಗಳಿಸಿದರು.
ರಾಜಸ್ಥಾನ ಪರ ಬೌಲಿಂಗ್ ಮಾಡಿದ ಯುದ್ವೀರ್ ಸಿಂಗ್ ಹಾಗೂ ಆಕಾಶ್ ಮಧ್ವಾಲ್ ತಲಾ 3 ವಿಕೆಟ್ ಪಡೆದರೆ, ತುಷಾರ್ ಸಿಂಗ್, ವನಿಂದು ಹಸರಂಗ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು. ಈಗಾಗಲೇ ಪ್ಲೇಆಫ್‌ನಿಂದ ಹೊರಬಿದ್ದಿರುವ ಚೆನ್ನೈ ತಂಡ ಗೆಲುವು ಸಾಧಿಸಿದ್ದರೂ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿರಲಿಲ್ಲ.ಇದನ್ನೂ ಓದಿ: ಬೆಂಗ್ಳೂರಲ್ಲಿ ಮಳೆ ಕಾಟ – ತವರಿನಲ್ಲಿ ನಡೆಯಬೇಕಿದ್ದ RCB ಕೊನೆಯ ಪಂದ್ಯ ಲಕ್ನೋಗೆ ಶಿಫ್ಟ್