ಮುಂಬೈ: ತನ್ನ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟಕ್ಕೇರಿ, ನಂತರದ ಸೀಸನ್ನಲ್ಲೂ ಫೈನಲ್ಗೇರಿದ್ದ ಗುಜರಾತ್ ಟೈಟಾನ್ಸ್ (Gujarat Titans) ಫ್ರಾಂಚೈಸಿಯು ರಶೀದ್ ಖಾನ್, ನಾಯಕ ಶುಭಮನ್ ಗಿಲ್ (Shubman Gill) ಸೇರಿ ಐವರು ಪ್ರಮುಖ ಆಟಗಾರರನ್ನ ತಂಡದಲ್ಲೇ ಉಳಿಸಿಕೊಂಡಿದೆ.
ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಗುಜರಾತ್ ಟೈಟಾನ್ಸ್ ತಂಡ ಲೀಗ್ ಸುತ್ತಿನಲ್ಲೇ ಹೊರಬಿದ್ದಿತ್ತು. ಹೀಗಾಗಿ ಮುಂದಿನ ಆವೃತ್ತಿಗೆ ಬಲಿಷ್ಠ ತಂಡ ಕಟ್ಟಲು ಸಿದ್ದವಾಗಿರುವ ಗುಜರಾತ್, ಮೆಗಾ ಹರಾಜಿಗೂ ಮುನ್ನ ಐವರು ಆಟಗಾರರನ್ನು ತನ್ನಲ್ಲೇ ಉಳಿಸಿಕೊಂಡಿದೆ.
ಅವರಲ್ಲಿ ನಾಯಕ ಶುಭ್ಮನ್ ಗಿಲ್, ರಶೀದ್ ಖಾನ್, ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ ಮತ್ತು ಶಾರುಖ್ ಖಾನ್ ಸೇರಿದರೆ, ಉಳಿದಂತೆ ಅನುಭವಿ ಆಟಗಾರರಾದ ಮೊಹಮ್ಮದ್ ಶಮಿ, ಡೇವಿಡ್ ಮಿಲ್ಲರ್, ಉಮೇಶ್ ಯಾದವ್, ಕೇನ್ ವಿಲಿಯಮ್ಸನ್ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ.
ಗಿಲ್‌ಗಿಂತಲೂ ರಶೀದ್ ದುಬಾರಿ!
* ರಶೀದ್ ಖಾನ್ – 18 ಕೋಟಿ ರೂ.
* ಶುಭಮನ್ ಗಿಲ್ – 16.5 ಕೋಟಿ ರೂ.
* ಸಾಯಿ ಸುದರ್ಶನ್ – 8.5 ಕೋಟಿ ರೂ.
* ರಾಹುಲ್ ತೆವಾಟಿಯ – 4 ಕೋಟಿ ರೂ.
* ಶಾರೂಖ್ ಖಾನ್ – 4 ಕೋಟಿ ರೂ.
2025 ರಿಂದ 2027ರ ಐಪಿಎಲ್ ಆವೃತ್ತಿಗಳಿಗೆ ಹೊಸ ನಿಯಮ ಘೋಷಣೆ ಮಾಡಿರುವ ಬಿಸಿಸಿಐ, ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಮೆಗಾ ಹರಾಜು ನಡೆಸಲು ತೀರ್ಮಾನಿಸಿದೆ.