– ಅಭಿಮಾನಿಗಳಿಗೆ ಭಾರೀ ನಿರಾಸೆ
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ (Bengaluru) ಸುರಿಯುತ್ತಿರುವ ಭಾರೀ ಮಳೆ ಹಿನ್ನೆಲೆ ಮೇ 23ರಂದು ತವರು ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡದ ಲೀಗ್ ಸುತ್ತಿನ ಪಂದ್ಯ ಲಕ್ನೋಗೆ ಸ್ಥಳಾಂತರಿಸಲಾಗಿದೆ.
ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ವರುಣನ ಅಬ್ಬರ ಜೋರಾಗಿದ್ದು, ಮೇ 24ರ ವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಮೇ 23ರಂದು ಆರ್‌ಸಿಬಿ ತನ್ನ ತವರೂರಲ್ಲಿ ಆಡಬೇಕಿದ್ದ ಲೀಗ್‌ನ ಕೊನೆಯ ಪಂದ್ಯ ಸ್ಥಳಾಂತರಗೊಂಡಿದೆ. ಮೇ 23ರಂದು ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ (Ekana Cricket Stadium) ಆರ್‌ಸಿಬಿ (RCB) ಹಾಗೂ ಎಸ್‌ಆರ್‌ಹೆಚ್ (SRH) ತಂಡಗಳು ಮುಖಾಮುಖಿಯಾಗಲಿವೆ.ಇದನ್ನೂ ಓದಿ: ರಾಹುಲ್ ಜೆಟ್ ಪ್ರಶ್ನೆಗೆ ಬಿಜೆಪಿ ಪಾಕ್ ಪೋಸ್ಟರ್ – ಬಿರಿಯಾನಿ ತಿಂದವರು ಯಾರು? ಅಂತ ಕಾಂಗ್ರೆಸ್ ಕೌಂಟರ್
ಮುನ್ನ ಮೇ 17ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಆರ್‌ಸಿಬಿ ಹಾಗೂ ಕೆಕೆಆರ್ ಪಂದ್ಯ ಭಾರೀ ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯವನ್ನ ಸ್ಥಳಾಂತರಿಸಲಾಗಿದೆ. ಅಲ್ಲಿಗೆ ತವರು ಕ್ರೀಡಾಂಗಣದಲ್ಲಿ ಆರ್‌ಸಿಬಿ ಈ ಆವೃತ್ತಿಯ ಪಂದ್ಯಗಳನ್ನು ಮುಗಿಸಿದಂತಾಗಿದೆ.
🚨 News 🚨
Schedule for TATA IPL 2025 Playoffs announced.
Additionally, Match no. 65 between #RCB and #SRH shifted to Lucknow from Bengaluru.
🔽 Details | #TATAIPL
— IndianPremierLeague (@IPL) May 20, 2025
ಈಗಾಗಲೇ 12 ಪಂದ್ಯಗಳನ್ನಾಡಿರುವ ಆರ್‌ಸಿಬಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, 17 ಅಂಕ ಗಳಿಸಿ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿರೋ ಆರ್‌ಸಿಬಿ ನಂ.1 ಪಟ್ಟಕ್ಕಾಗಿ ಹಣಾಹಣಿ ನಡೆಸುತ್ತಿದೆ.ಇದನ್ನೂ ಓದಿ: ಪಂಜಾಬ್‌ನಲ್ಲಿ ಏರೋಸ್ಪೇಸ್ ಎಂಜಿನಿಯರ್ ಸಾವು ಕೇಸ್ – ಪ್ರೊಫೆಸರ್ ಅರೆಸ್ಟ್