ಬೆಂಗಳೂರು: ಮಳೆಯಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯ ರದ್ದಾಗಿದೆ. ಪಂದ್ಯ ರದ್ದಾದ ಕಾರಣ ಕಳೆದ ಬಾರಿಯ ಚಾಂಪಿಯನ್ ಕೋಲ್ಕತ್ತಾ ಪ್ಲೇ ಆಫ್ ರೇಸ್‌ನಿಂದ ನಿರ್ಗಮಿಸಿದೆ.
ಸಂಜೆಯಿಂದಲೇ ಬೆಂಗಳೂರಿನಲ್ಲಿ ಮಳೆ ಆರಂಭವಾಗಿತ್ತು. ರಾತ್ರಿಯೂ ಜೋರು ಮಳೆ ಸುರಿದ ಕಾರಣ ರಾತ್ರಿ 10:20ಕ್ಕೆ ಅಂಪೈರ್‌ಗಳು ಪಂದ್ಯವನ್ನು ರದ್ದುಗೊಳಿಸಿದರು. ಇದನ್ನೂ ಓದಿ: ಬಿಳಿ ಪಾರಿವಾಳಗಳಿಂದಲೂ ಕೊಹ್ಲಿಗೆ ಗೌರವ – ಇದು ವೈಟ್ ಆರ್ಮಿ ಎಂದ ಕೊಹ್ಲಿ ಫ್ಯಾನ್ಸ್
ಆರ್‌ಸಿಬಿ ಈಗ 12 ಪಂದ್ಯಗಳಿಂದ 17 ಅಂಕ ಪಡೆದು ಪ್ಲೇ ಆಫ್ ಸನಿಹದಲ್ಲಿದೆ. ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರೂ ಆರ್‌ಸಿಬಿಗೆ ಇನ್ನೂ ಪ್ಲೇ ಆಫ್‌ಗೆ ಅಧಿಕೃತವಾಗಿ ಎಂಟ್ರಿ ಪಡೆದಿಲ್ಲ. ಇನ್ನು ಹೈದರಾಬಾದ್ ಮತ್ತು ಲಕ್ನೋ ಜೊತೆ ಪಂದ್ಯ ಆಡಲಿದ್ದು ಕನಿಷ್ಠ ಒಂದು ಪಂದ್ಯವನ್ನು ಗೆಲ್ಲಬೇಕಾಗುತ್ತದೆ.
ಒಂದು ವೇಳೆ ಎರಡೂ ಪಂದ್ಯ ಸೋತರೆ ನೆಟ್ ರನ್ ರೇಟ್ ಪರಿಗಣನೆ ಮಾಡಲಾಗುತ್ತದೆ. ನೆಟ್ ರನ್ ರೇಟ್ ಉತ್ತಮವಾಗಿದ್ದರೆ ಮಾತ್ರ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಲಿದೆ.