ಬೆಂಗಳೂರು: ಇಂದಿನಿಂದ 65 ದಿನಗಳ ಐಪಿಎಲ್ (IPL) ಹಬ್ಬ ಆರಂಭವಾಗಲಿದ್ದು ಕೋಲ್ಕತ್ತಾದಲ್ಲಿ ಆರ್‌ಸಿಬಿ (RCB) ಮತ್ತು ಕೋಲ್ಕತ್ತಾ ತಂಡಗಳ ನಡವೆ ಮೊದಲ ಪಂದ್ಯ ನಡೆಯಲಿದೆ. ಮೊದಲ ಪಂದ್ಯದ ಆರಂಭಕ್ಕೂ ಮುನ್ನ ಆರ್‌ಸಿಬಿ ತಂಡದ ನಾಯಕ ರಜತ್ ಪಾಟಿದಾರ್ (Rajat Patidar) ಅವರು ಎರಡು ಕೈ ಜೋಡಿಸಿ ನಟ ರಾಜ್‌ಕುಮಾರ್ ಅವರ ಪ್ರಸಿದ್ಧ “ಅಭಿಮಾನಿಗಳೇ ನಮ್ಮ ದೇವರು” ಡೈಲಾಗ್ ಹೊಡೆದು ಅಭಿಮಾನಿಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಕಳೆದ 16 ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಇಲ್ಲಿಯವರೆಗೆ ಚಾಂಪಿಯನ್ ಆಗಿ ಹೊರಹೊಮ್ಮಿಲ್ಲ. ಚಾಂಪಿಯನ್ ಆಗದೇ ಇದ್ದರೂ ಅಭಿಮಾನಿಗಳ ಪ್ರೀತಿ ಮಾತ್ರ ಕಮ್ಮಿಯಾಗಿಲ್ಲ. ಇದಕ್ಕೆ ಸಾಕ್ಷಿ ಯಾವುದು ಎಂದರೆ ಆರ್‌ಸಿಬಿ ಪಂದ್ಯಗಳು. ಬೆಂಗಳೂರು ಮಾತ್ರವಲ್ಲ ಬೇರೆ ಕಡೆ ನಡೆದ ಪಂದ್ಯಗಳಲ್ಲೂ ಸ್ಟೇಡಿಯಂ ಭರ್ತಿಯಾಗಿರುತ್ತದೆ. ಅಭಿಮಾನಿಗಳು ಆರ್‌ಸಿಬಿ ಪ್ಲೇ ಕಾರ್ಡ್ ಹಿಡಿದು ತಂಡಕ್ಕೆ ಪ್ರೋತ್ಸಾಹ ನೀಡುತ್ತಿರುತ್ತಾರೆ.
View this post on Instagram
ಬೆಂಗಳೂರಿನಲ್ಲಿ (Bengaluru) ಆರ್‌ಸಿಬಿ ಪಂದ್ಯ ಆಯೋಜನೆಗೊಂಡರೆ ದುಬಾರಿ ಟಿಕೆಟ್ ದರ ಇದ್ದರೂ ಇದ್ದರೂ ಅದು ಮಾರಾಟವಾಗುತ್ತದೆ. ಸ್ಟೇಡಿಯಂನಲ್ಲಿ ಆರ್‌ಸಿಬಿ ಆರ್‌ಸಿಬಿ…ಧ್ವನಿ ಮೊಳಗುತ್ತಿರುತ್ತದೆ. ಪುರುಷರ ಕ್ರಿಕೆಟ್ ಮಾತ್ರವಲ್ಲ, ಆರ್‌ಸಿಬಿ ಮಹಿಳೆಯರ ತಂಡಕ್ಕೂ ಅಭಿಮಾನಿಗಳು ಪ್ರೋತ್ಸಾಹ ನೀಡುತ್ತಾರೆ. ಈ ಕಾರಣಕ್ಕೆ ಐಪಿಎಲ್ ಆರಂಭಕ್ಕೆ ಮೊದಲು ನೂತನ ನಾಯಕ ರಜತ್ ಪಾಟಿದಾರ್ ಅವರು ಮಿಸ್ಟರ್ ನ್ಯಾಗ್ಸ್ ಅವರ ಆರ್‌ಸಿಬಿ ಇನ್‌ಸೈಡ್ ಶೋನಲ್ಲಿ ಅಭಿಮಾನಿಗಳೇ ನಮ್ಮ ದೇವರು ಎಂದು ಹೆಮ್ಮೆಯಿಂದ ಹೇಳಿದ್ದಾರೆ. ಇದನ್ನೂ ಓದಿ: UnSold ಪ್ಲೇಯರ್, ಟೂರ್ನಿ ಅರ್ಧದಲ್ಲೇ ಆರ್‌ಸಿಬಿ ಸೇರ್ಪಡೆ, ಸ್ಫೋಟಕ ಶತಕ ಸಿಡಿಸಿ ದಾಖಲೆ – ಪಾಟಿದಾರ್‌ಗೆ ನಾಯಕ ಪಟ್ಟ ಸಿಕ್ಕಿದ್ದು ಹೇಗೆ?
2021 ರಿಂದ ಆರ್‌ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್ನ ಖಾಯಂ ಸದಸ್ಯರಾಗಿ ಕಾಣಿಸಿಕೊಳ್ಳುತ್ತಿರುವ ಮಧ್ಯಪ್ರದೇಶದ ಪಾಟಿದರ್ ಈ ವರ್ಷದಿಂದ ತಂಡವನ್ನು ಮುನ್ನಡೆಸಲಿದ್ದಾರೆ. ರಜತ್ ಪಾಟಿದಾರ್ ಅವರಿಗೆ ನಾಯಕತ್ವದ ಅನುಭವ ಇದೆ. ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಧ್ಯಪ್ರದೇಶ ತಂಡವನ್ನು ಲೀಡ್ ಮಾಡಿದ್ದರು.
2022 ರಿಂದ 2024 ರವರೆಗೆ ದಕ್ಷಿಣ ಆಫ್ರಿಕಾದ ಫಾಫ್ ಡುಪ್ಲೆಸಿಸ್ (Faf du Plessis) ಆರ್‌ಸಿಬಿ ನಾಯಕರಾಗಿದ್ದರು. ಆದರೆ ಈ ಬಾರಿಯ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡುಪ್ಲೆಸಿಸ್ ಅವರನ್ನು ಬಿಡುಗಡೆ ಮಾಡಿತ್ತು. ಹರಾಜಿನಲ್ಲಿ 40 ವರ್ಷದ ಡುಪ್ಲೆಸಿಸ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 2 ಕೋಟಿ ರೂ. ನೀಡಿ ಖರೀದಿಸಿತ್ತು.