IPL 2025 | ಅತ್ಯುತ್ತಮ ಜೊತೆಯಾಟದಲ್ಲಿ ಆರ್‌ಸಿಬಿ ಆಟಗಾರರೇ ಟಾಪ್‌!

Public TV
3 Min Read
RCB Top

ಯಾವುದೇ ಟಿ20 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್‌ ಮಾಡುವ ತಂಡವು ಬೃಹತ್‌ ಮೊತ್ತ ಬಾರಿಸಬೇಕಾದ್ರೆ, ಸ್ಫೋಟಕ ಬ್ಯಾಟಿಂಗ್‌ ಮಾಡುವ ಹೊರತಾಗಿ ಉತ್ತಮ ಪಾಲುದಾರಿಕೆಯೂ ಮುಖ್ಯವಾಗುತ್ತದೆ. ಐಪಿಎಲ್‌ ಟೂರ್ನಿಗೂ (IPL 2025) ಇದು ಅನ್ವಯಿಸುತ್ತದೆ.

ಮೊದಲು ಬ್ಯಾಟಿಂಗ್‌ ಮಾಡುವ ತಂಡದ ಪರ ಬ್ಯಾಟಿಂಗ್‌ ಜೋಡಿಯು ಕ್ರೀಸ್‌ ಮೇಲೆ ಭದ್ರವಾಗಿ ನೆಲೆಯೂರಿದರೆ, ದೊಡ್ಡ ಹೊಡೆತ ನೀಡಲು ಮುಂದಾದ್ರೆ, ಕನಿಷ್ಠ 200 ರನ್‌ಗಳನ್ನು ಕಲೆಹಾಕುವುದು ಖಚಿತ. ಕೆಲವೊಮ್ಮೆ ಅಧಿಕ ರನ್‌ ಗಳಿಸಿದ ತಂಡವು ಬೌಲಿಂಗ್‌ನಲ್ಲಿ ಕೊಂಚ ಎಡವಿದರೂ ಎದುರಾಳಿ ತಂಡಕ್ಕೆ ಗೆಲುವು ತಂದುಕೊಡಬಹುದು. ಉದಾಹರಣೆಗೆ 2023ರ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಆರ್‌ಸಿಬಿ (CSK vs RCB) ನಡುವಿನ ಪಂದ್ಯ ಸಾಕ್ಷಿಯಾಗಿದೆ. ಅಂದು ಚೆನ್ನೈ 226 ರನ್‌ ಪೇರಿಸಿದ್ದರೂ, ಕೇವಲ 9 ರನ್‌ಗಳಿಂದ ಗೆಲುವು ಸಾಧಿಸಿತ್ತು. 18ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ದಿನಗಳು ಸಮೀಪಿಸುತ್ತಿರುವ ಕಾರಣ ಈ ಹಿಂದಿನ ಅತ್ಯುತ್ತಮ ಜೊತೆಯಾಟವನ್ನು ಮೆಲುಕು ಹಾಕುಬೇಕಾಗಿದ್ದು, ಐಪಿಎಲ್‌ ಇತಿಹಾಸದಲ್ಲೇ ದಾಖಲೆಯ ಜೊತೆಯಾಟ ನೀಡಿದ ಟಾಪ್‌ ಜೋಡಿಗಳನ್ನು ಇಲ್ಲಿ ಕಾಣಬಹುದು.

RCB 11

ವಿರಾಟ್ ಕೊಹ್ಲಿ & ಎಬಿ ಡಿವಿಲಿಯರ್ಸ್
ಐಪಿಎಲ್‌ ಇತಿಹಾಸದಲ್ಲಿ ಅತ್ಯುತ್ತಮ ಜೊತೆಯಾಟ ನೀಡಿದ ಟಾಪ್‌-5 ಪಟ್ಟಿಯಲ್ಲಿ ಕೊಹ್ಲಿ ಮೂರರಲ್ಲಿ ಕಾಣಿಸಿಕೊಂಡಿದ್ದಾರೆ, ಅಲ್ಲದೇ ಆರ್‌ಸಿಬಿ ತಂಡ ಮೂವರು ಆಟಗಾರರು ಈ ಪಟ್ಟಿಲ್ಲಿರುವುದು ವಿಶೇಷ. 2016ರ ಆವೃತ್ತಿಯಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಎಬಿ ಡಿವಿಲಿಯರ್ಸ್ (AB de Villiers) ಅವರೊಂದಿಗೆ 2ನೇ ವಿಕೆಟ್​ಗೆ ವಿರಾಟ್​ ಕೊಹ್ಲಿ (Virat Kohli) 229 ರನ್​​ಗಳನ್ನು ಸೇರಿಸಿದ್ದರು. ಈ ಪಂದ್ಯದಲ್ಲಿ ಇಬ್ಬರೂ ಶತಕಗಳನ್ನು ಸಿಡಿಸಿದ್ದರು. ದಕ್ಷಿಣ ಆಫ್ರಿಕಾದ ಬ್ಯಾಟರ್ ಮಿಸ್ಟರ್‌-360, ಕೇವಲ 52 ಎಸೆತಗಳಲ್ಲಿ 12 ಸಿಕ್ಸರ್​ಗಳು ಮತ್ತು 10 ಬೌಂಡರಿಗಳ ಸಹಾಯದಿಂದ 129 ರನ್ ಗಳಿಸಿದ್ದರು. ವಿರಾಟ್ ಕೊಹ್ಲಿ 55 ಎಸೆತಗಳಲ್ಲಿ 109 ರನ್ ಗಳಿಸುವುದರೊಂದಿಗೆ ಆರ್​ಸಿಬಿ 3 ವಿಕೆಟ್ ನಷ್ಟಕ್ಕೆ 248 ರನ್ ಪೇರಿಸಿತ್ತು. ಪಂದ್ಯದಲ್ಲಿ ಆರ್​​ಸಿಬಿ ಗೆದ್ದಿತ್ತು.

RCB 2 3

ವಿರಾಟ್ ಕೊಹ್ಲಿ & ಎಬಿ ಡಿವಿಲಿಯರ್ಸ್
2015ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 2ನೇ ವಿಕೆಟ್​ಗೆ ಕೊಹ್ಲಿ ಮತ್ತು ವಿಲಿಯರ್ಸ್ 215 ರನ್​ಗಳ ಜೊತೆಯಾಟವಾಡಿದ್ದರು. ಆ ಪಂದ್ಯದಲ್ಲಿ ಎಬಿಡಿ ಕೇವಲ 59 ಎಸೆತಗಳಲ್ಲಿ 19 ಬೌಂಡರಿ ಮತ್ತು 4 ಸಿಕ್ಸರ್ ಸೇರಿದಂತೆ 133 ರನ್ ಚಚ್ಚಿದ್ದರು. ವಿರಾಟ್ 50 ಎಸೆತಗಳಲ್ಲಿ 82 ರನ್ ಸಿಡಿಸಿ ಔಟಾದರು. ಮೊದಲ ಇನ್ನಿಂಗ್ಸ್​​ನಲ್ಲಿ 235/1 ಸ್ಕೋರ್ ಮಾಡಿದ್ದ ಆರ್​ಸಿಬಿ ಈ ಪಂದ್ಯವನ್ನು 39 ರನ್​ಗಳಿಂದ ಗೆದ್ದುಕೊಂಡಿತ್ತು.

GTvsLSG 4

ಕ್ವಿಂಟನ್‌ ಡಿ ಕಾಕ್‌ & ಕೆ.ಎಲ್‌ ರಾಹುಲ್‌
2022ರ ಐಪಿಎಲ್‌ ಟೂರ್ನಿಯಲ್ಲಿ ಪದಾರ್ಪಣೆ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಪರ ಆರಂಭಿಕರಾದ ಕ್ವಿಂಟನ್ ಡಿ ಕಾಕ್ ಮತ್ತು ಕೆ.ಎಲ್ ರಾಹುಲ್ ಅಬ್ಬರದ ಪ್ರದರ್ಶನ ನೀಡಿದ್ದರು. ಕೆಕೆಆರ್ ವಿರುದ್ಧ ರಾಹುಲ್ ಹಾಗೂ ಡಿ ಕಾಕ್ ಜೋಡಿ 210 ರನ್​ಗಳ ಜೊತೆಯಾಟ ದಾಖಲಿಸಿದ್ದರು. ಇದು ಟಿ20 ಲೀಗ್‌ನಲ್ಲಿ 3ನೇ ಅತ್ಯುತ್ತಮ ಜೊತೆಯಾಟವಾಗಿ ದಾಖಲಾಯಿತು.

Shubman Gill2‌

ಶುಭಮನ್‌ ಗಿಲ್‌ & ಸಾಯಿ ಸುದರ್ಶನ್‌:
2024ರ ಐಪಿಎಲ್‌ ಆವೃತ್ತಿಯಲ್ಲಿ ಸಿಎಸ್‌ಕೆ ವಿರುದ್ಧ ನಡೆದ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ತಂಡದ ನಾಯಕ ಶುಭಮನ್‌ ಗಿಲ್‌, ಆರಂಭಿಕ ಆಟಗಾರ ಸಾಯಿ ಸುದರ್ಶನ್‌ ಮೊದಲ ವಿಕೆಟ್‌ಗೆ 210 ರನ್‌ಗಳ ಜೊತೆಯಾಟ ನೀಡಿದ್ದರು. ಈ ಪಂದ್ಯದಲ್ಲಿ ಆರಂಭಿಕರಿಬ್ಬರೂ ಶತಕ ಸಿಡಿಸಿ ಮಿಂಚಿದ್ದರು. ಇದು ಐಪಿಎಲ್‌ ಇತಿಹಾಸದಲ್ಲಿ ಅತಿಹೆಚ್ಚು ರನ್‌ಗಳ ನಾಲ್ಕನೇ ಜೊತೆಯಾಟವಾಗಿದೆ.

shaun marsh Orange Cap

ಗಿಲ್​ಕ್ರಿಸ್ಟ್​​ & ಶಾನ್​ ಮಾರ್ಷ್​​
2011ರ ಆವೃತ್ತಿಯಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ, ಪಂಜಾಬ್ ನಾಯಕ ಆಡಂ ಗಿಲ್​​ಕ್ರಿಸ್ಟ್​​ 55 ಎಸೆತಗಳಲ್ಲಿ 106 ರನ್ ಗಳಿಸುವ ಮೂಲಕ ಅದ್ಭುತ ಶತಕ ಗಳಿಸಿದ್ದರು. ಶಾನ್ ಮಾರ್ಷ್ ಜೊತೆಗೂಡಿ 2ನೇ ವಿಕೆಟ್ ಗೆ 206 ರನ್ ಪೇರಿಸಿದ್ದರು. ಇದು ಐಪಿಎಲ್ ಇತಿಹಾಸದಲ್ಲಿನ 4ನೇ ಅತಿ ದೊಡ್ಡ ಜೊತೆಯಾಟವಾಗಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಪಂಜಾಬ್ 2 ವಿಕೆಟ್ ನಷ್ಟಕ್ಕೆ 232 ರನ್ ಗಳಿಸಿತ್ತು. ಅಂತಿಮವಾಗಿ ಆರ್​ಸಿಬಿ 111 ರನ್ ಗಳ ಸೋಲು ಅನುಭವಿಸಿತ್ತು.

ದಾಖಲೆ ಜೊತೆಯಾಟ ನೀಡಿದ ಟಾಪ್‌-5 ಜೋಡಿಗಳು:
* ವಿರಾಟ್ ಕೊಹ್ಲಿ & ಎಬಿ ಡಿವಿಲಿಯರ್ಸ್ – 2ನೇ ವಿಕೆಟ್​ಗೆ, 229 ರನ್​, ಗುಜರಾತ್​ ಲಯನ್ಸ್​ ವಿರುದ್ಧ (2016)
* ವಿರಾಟ್ ಕೊಹ್ಲಿ & ಎಬಿ ಡಿವಿಲಿಯರ್ಸ್ – 2ನೇ ವಿಕೆಟ್​ಗೆ 215 ರನ್​, ಮುಂಬೈ ಇಂಡಿಯನ್ಸ್ ವಿರುದ್ಧ (2015)
* ಕ್ವಿಂಟನ್ ಡಿ ಕಾಕ್ & ಕೆಎಲ್ ರಾಹುಲ್ – ಮೊದಲ ವಿಕೆಟ್​ಗೆ, 210 ರನ್​, ಕೆಕೆಆರ್ ವಿರುದ್ಧ (2022)
* ಶುಭಮನ್‌ ಗುಲ್‌ & ಸಾಯಿ ಸುದರ್ಶನ್‌ – ಮೊದಲ ವಿಕೆಟ್‌ಗೆ, 210 ರನ್‌, ಸಿಎಸ್‌ಕೆ ವಿರುದ್ಧ (2024)
* ಆಡಮ್ ಗಿಲ್ಕ್ರಿಸ್ಟ್ & ಶಾನ್ ಮಾರ್ಷ್ – 2ನೇ ವಿಕೆಟ್‌ಗೆ 206 ರನ್‌, ಆರ್​​ಸಿಬಿ ವಿರುದ್ಧ (2011)

Share This Article