ಬೆಂಗಳೂರು: ತವರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ (RCB) ಹ್ಯಾಟ್ರಿಕ್ ಸೋಲಾಗಿದೆ. ಮಳೆಯ (Rain) ಆಟದಲ್ಲಿ ಆರ್‌ಸಿಬಿ ವಿರುದ್ಧ ಪಂಜಾಬ್ ಕಿಂಗ್ಸ್ (Punjab Kings) 5 ವಿಕೆಟ್‌ಗಳ ಜಯ ಗಳಿಸಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಏರಿದೆ.
ಮಳೆಯಿಂದಾಗಿ 7:30ಕ್ಕೆ ಆರಂಭವಾಗಿದ್ದ ಪಂದ್ಯ 2 ಗಂಟೆ ತಡವಾಗಿ 9:30ಕ್ಕೆ ಆರಂಭವಾಯಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತ್ತು. ಕೊನೆಯಲ್ಲಿ ಟಿಮ್ ಡೇವಿಡ್ (Tim David) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಆರ್‌ಸಿಬಿ 9 ವಿಕೆಟ್ ನಷ್ಟಕ್ಕೆ 95 ರನ್ ಹೊಡೆಯಿತು.
𝘽𝙊𝙊𝙈 💥
Nehal Wadhera is in a hurry to finish it for #PBKS 🏃
Updates ▶ https://t.co/7fIn60rqKZ #TATAIPL | #RCBvPBKS | @PunjabKingsIPL pic.twitter.com/upMlSvOJi9
— IndianPremierLeague (@IPL) April 18, 2025
ಸುಲಭದ ಸವಾಲನ್ನು ಬೆನ್ನಟ್ಟಿದ ಪಂಜಾಬ್ 12.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 98 ರನ್ ಹೊಡೆದು ಜಯಗಳಿಸಿತು. ಈ ಮೊದಲು ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಪಂದ್ಯವನ್ನು ಸೋತಿತ್ತು. ಈಗ ಮತ್ತೆ ತವರಿನಲ್ಲಿ ರಾಜಸ್ಥಾನದ ವಿರುದ್ಧ ಸೋತಿದೆ. ಇದನ್ನೂ ಓದಿ: ʻಈ ಸಲ ಕಪ್ ನಮ್ದೇʼ ಅಂತ ಹೇಳಬೇಡಿ, ಹೇಳಿದಾಗೆಲ್ಲ ತೊಂದ್ರೆ ಆಗುತ್ತೆ: ಅನಿಲ್ ಕುಂಬ್ಳೆ
ಪಂಜಾಬ್ ಪರ ನೆಹಾಲ್ ವಧೇರಾ ಔಟಾಗದೇ 33 ರನ್ (19 ಎಸೆತ, 3 ಬೌಂಡರಿ, 3 ಸಿಕ್ಸ್) ಪ್ರಿಯಾಂಶ್ ಆರ್ಯ 16 ರನ್, ಪ್ರಭುಸಿಮ್ರಾನ್‌ಸಿಂಗ್ 13 ರನ್ ಹೊಡೆದು ಜಯವನ್ನು ತಂದುಕೊಟ್ಟರು.
#RCB are pumped and HOW 🤩
Sharp catch by Jitesh Sharma and #PBKS are 4️⃣ down 👌
High quality over from Josh Hazlewood 🫡
Updates ▶ https://t.co/7fIn60rqKZ #TATAIPL | #RCBvPBKS | @RCBTweets pic.twitter.com/O8F4deioAZ
— IndianPremierLeague (@IPL) April 18, 2025
ಆರ್‌ಸಿಬಿ ಪರ ಸಾಲ್ಟ್ 4 ರನ್, ಕೊಹ್ಲಿ 1 ರನ್, ನಾಯಕ ಪಾಟೀದರ್ 23 ರನ್ (18 ಎಸೆತ, 1 ಬೌಂಡರಿ, 1 ಸಿಕ್ಸ್ ) ಹೊಡೆದು ಔಟಾದರು.
63 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿದ್ದರೂ ಕೊನೆಯಲ್ಲಿ ಡೇವಿಡ್ ಔಟಾಗದೇ ಸ್ಫೋಟಕ 50 ರನ್ (26 ಎಸೆತ, 5 ಬೌಂಡರಿ, 3 ಸಿಕ್ಸ್) ಹೊಡೆದು ತಂಡದ ಮೊತ್ತವನ್ನು 90 ರನ್‌ಗಳ ಗಡಿಯನ್ನು ದಾಟಿಸಿದರು.
ಆರ್ಶ್‌ದೀಪ್ ಸಿಂಗ್, ಜಾನ್‌ಸೆನ್ ಚಹಲ್, ಹರ್‌ಪ್ರೀತ್ ಬಾರ್ ತಲಾ 2 ವಿಕೆಟ್ ಪಡೆದರು.