ಮುಂಬೈ ಸಂಘಟಿತ ಬ್ಯಾಟಿಂಗ್‌ – ಪಂಜಾಬ್‌ಗೆ 204 ರನ್‌ ಗುರಿ

Public TV
1 Min Read
tilak varma suryakumar yadav

ಅಹಮದಾಬಾದ್: ಇಲ್ಲಿ ನಡೆಯುತ್ತಿರುವ ಐಪಿಎಲ್‌ ಕ್ವಾಲಿಫೈಯರ್‌ 2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡವು ಪಂಜಾಬ್‌ಗೆ 204 ರನ್‌ಗಳ ಗುರಿ ನೀಡಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಸಂಘಟಿತ ಬ್ಯಾಟಿಂಗ್‌ ಪ್ರದರ್ಶನ ತೋರಿತು. 20 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 203 ರನ್‌ ಗಳಿಸಿತು.

ಕಳೆದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್‌ ಮಾಡಿದ್ದ ರೋಹಿತ್‌ ಶರ್ಮಾ ಈ ಪಂದ್ಯದಲ್ಲಿ ಕೇವಲ 8 ರನ್‌ಗೆ ಔಟಾಗಿದ್ದು, ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು. ದೊಡ್ಡ ಹೊಡೆತಕ್ಕೆ ಮುಂದಾಗಿ ಕ್ಯಾಚ್‌ ನೀಡಿ ಹಿಟ್‌ ಮ್ಯಾನ್‌ ನಿರ್ಗಮಿಸಿದರು.

ಜಾನಿ ಬೈರ್‌ಸ್ಟೋವ್ 38, ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್‌ ಯಾದವ್‌ ತಲಾ 44 ರನ್‌ ಗಳಿಸಿ ಅರ್ಧಶತಕ ವಂಚಿತರಾದರು. ನಮನ್ ಧೀರ್ 37 ರನ್‌ಗಳ ಕೊಡುಗೆ ನೀಡಿದರು. ಹಾರ್ದಿಕ್‌ ಪಾಂಡ್ಯ 15 ರನ್‌ ಗಳಿಸಿದರು. ಇವರ ಸಂಘಟಿತ ಬ್ಯಾಟಿಂಗ್‌ ಪ್ರದರ್ಶನದಿಂದ ಮುಂಬೈ 203 ರನ್‌ಗಳ ಸವಾಲಿನ ಮೊತ್ತ ಪೇರಿಸಲು ಸಹಕಾರಿಯಾಯಿತು.

ಪಂಜಾಬ್‌ ಪರ ಅಜ್ಮತುಲ್ಲಾ ಒಮರ್ಜೈ 2, ಕೈಲ್ ಜೇಮಿಸನ್, ಮಾರ್ಕಸ್ ಸ್ಟೊಯಿನಿಸ್, ವಿಜಯಕುಮಾರ್ ವೈಶಾಕ್, ಯುಜುವೇಂದ್ರ ಚಾಹಲ್ ತಲಾ 1 ವಿಕೆಟ್‌ ಪಡೆದರು.

Share This Article