ಮುಂಬೈ: ಮುಂದಿನ ನವೆಂಬರ್-ಡಿಸೆಂಬರ್ನಲ್ಲಿ 2025ರ ಐಪಿಎಲ್ ಟೂರ್ನಿಗೆ ಮೆಗಾ ಹರಾಜು (IPL Mega Auction) ನಡೆಯುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ಫ್ರಾಂಚೈಸಿಗಳು ರಿಟೇನ್ ಆಟಗಾರರ ಪಟ್ಟಿ ಪ್ರಕಟಿಸಲು ಡೆಡ್ಲೈನ್ ಫಿಕ್ಸ್ ಮಾಡಿದೆ.
NEWS 🚨 – IPL Governing Council announces TATA IPL Player Regulations 2025-27.
READ – https://t.co/3XIu1RaYns #TATAIPL pic.twitter.com/XUFkjKqWed
— IndianPremierLeague (@IPL) September 28, 2024
Advertisement
ಮೆಗಾ ಹರಾಜಿಗೂ ಮುನ್ನ ತಂಡದಲ್ಲಿ ಉಳಿಸಿಕೊಳ್ಳಬಹುದಾದದ ಆಟಗಾರರ ಪಟ್ಟಿಯನ್ನು ಅಕ್ಟೋಬರ್ 31ರ ಒಳಗೆ ಪ್ರಕಟಿಸುವಂತೆ ಗಡುವು ನೀಡಿದೆ. ಎಲ್ಲಾ ಫ್ರಾಂಚೈಸಿಗಳಿಗೂ ಈ ಬಾರಿ ರೈಟ್ ಟು ಮ್ಯಾಚ್ (RTM Card) ಕಾರ್ಡ್ನೊಂದಿಗೆ 6 ಆಟಗಾರರನ್ನು ಉಳಿಸಿಕೊಳ್ಳಲು ಮಾತ್ರ ಬಿಸಿಸಿಐ ಅನುಮತಿಸಿದೆ. ಅಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ 5 ವರ್ಷಗಳಾಗಿರುವ ಆಟಗಾರರನ್ನು ಅನ್ಕ್ಯಾಪ್ಟ್ ಪ್ಲೇಯರ್ ಎಂದು, ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಚೊಚ್ಚಲ ಆವೃತ್ತಿ ಪ್ರವೇಶಿಸುವ ಆಟಗಾರರನ್ನು ಕ್ಯಾಪ್ಡ್ ಪ್ಲೇಯರ್ ಎಂದೂ ಪರಿಗಣಿಸಲಾಗುವುದು ಎಂದು ಬಿಸಿಸಿಐ ಹೇಳಿದೆ.
Advertisement
In a historic move to celebrate consistency and champion outstanding performances in the #IPL, we are thrilled to introduce a match fee of INR 7.5 lakhs per game for our cricketers! A cricketer playing all league matches in a season will get Rs. 1.05 crores in addition to his…
— Jay Shah (@JayShah) September 28, 2024
Advertisement
ಏನಿದು ಆರ್ಟಿಎಂ ಕಾರ್ಡ್ ರೂಲ್ಸ್?
ಆರ್ಟಿಎಂ ಕಾರ್ಡ್ (ರೈಟ್ ಟು ಮ್ಯಾಚ್ ಕಾರ್ಡ್ – RTM Card) ಅನ್ವಯ ಫ್ರಾಂಚೈಸಿಯೊಂದು ತನ್ನ ತಂಡದ ಆಟಗಾರನೊಬ್ಬ ಬೇರೆ ತಂಡಕ್ಕೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾದಾಗ ಅದೇ ಮೊತ್ತಕ್ಕೆ ಆತನನ್ನು ತನ್ನ ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ, ಇದನ್ನು ಆರ್ಟಿಎಂ ಎನ್ನಲಾಗುತ್ತದೆ. ಈ ಬಾರಿ ಒಂದೇ ಕಾರ್ಡ್ ಬಳಕೆಗೆ ಅವಕಾಶ ನೀಡುವುದಾಗಿ ಹೇಳಲಾಗಿದೆ. ಹೆಚ್ಚಿನ ಆರ್ಟಿಎಂ ಬಳಸಲು ಅವಕಾಶ ನೀಡಿದರೇ ಹರಾಜು ಪ್ರಕ್ರಿಯೆ ಮಹತ್ವ ಕಳೆದುಕೊಳ್ಳುತ್ತದೆ ಎಂದು ಬಿಸಿಸಿಐ ಅಭಿಪ್ರಾಯ ಪಟ್ಟಿದೆ. ಇದನ್ನೂ ಓದಿ: 6 ಆಟಗಾರರ ರಿಟೇನ್ಗೆ ಬಿಸಿಸಿಐ ಅವಕಾಶ, ಪರ್ಸ್ ಮೊತ್ತ 120 ರಿಂದ 157 ಕೋಟಿ ರೂ.ಗೆ ಹೆಚ್ಚಳ!
Advertisement
ಶ್ರೀಮಂತ ಕ್ರಿಕೆಟ್ ಲೀಗ್ನಲ್ಲಿ ಐತಿಹಾಸಿಕ ನಿರ್ಣಯ
ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ (IPL 2025) ಎಂದೇ ಗುರುತಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮಹತ್ವದ ಬದಲಾವಣೆಯೊಂದು ಆಗಿದೆ. 2025ರ ಐಪಿಎಲ್ ಮೆಗಾ ಹರಾಜಿಗೂ ಮುನ್ನವೇ ಬಿಸಿಸಿಐ ಆಟಗಾರರಿಗೆ ಭರ್ಜರಿ ಗಿಫ್ಟ್ ನೀಡಿದೆ. ಟೂರ್ನಿ ವೇಳೆ ಲೀಗ್ ಪಂದ್ಯಅಗಳನ್ನಾಡುವ ಪ್ರತಿಯೊಬ್ಬ ಆಟಗಾರನೂ ಹರಾಜಿನಲ್ಲಿ ನಿಗದಿಯಾದ ಮೊತ್ತಕ್ಕಿಂತ ಹೆಚ್ಚುವರಿ ನಗದು ಹಣವನ್ನು ಪಡೆಯಲಿದ್ದಾರೆ ಎಂದು ಬಿಸಿಸಿಐ (BCCI) ಘೋಷಣೆ ಮಾಡಿದೆ. ಇದನ್ನೂ ಓದಿ: ಹರಾಜಿನಲ್ಲಿ ಆಯ್ಕೆಯಾಗಿ ಅಲಭ್ಯರಾಗುವ ಆಟಗಾರರಿಗೆ ಖಡಕ್ ವಾರ್ನಿಂಗ್; ನಿಯಮ ಕಡೆಗಣಿಸಿದ್ರೆ 2 ವರ್ಷ ಬ್ಯಾನ್
ಈ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ತಮ್ಮ ಎಕ್ಸ್ ಖಾತೆಯಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. ಈವರೆಗಿನ ಲೀಗ್ನಲ್ಲಿ ಆಟಗಾರರು ಹರಾಜಿನಲ್ಲಿ ಪಡೆದ ಮೊತ್ತ ಪಡೆಯುತ್ತಿದ್ದರು. ಇದರೊಂದಿಗೆ ಸೂಪರ್ ಸಿಕ್ಸ್, ಬೌಂಡರಿ, ಕ್ಯಾಚ್, ಎಲೆಕ್ಟ್ರಿಕ್ ಸ್ಟ್ರೈಕರ್, ಪ್ಲೇಯರ್ ಆಫ್ದಿ ಮ್ಯಾಚ್, ಪ್ಲೇಯರ್ ಆಫ್ ದಿ ಸೀರಿಸ್ ಮೂಲಕ ಹೆಚ್ಚುವರಿ ನಗದು ಬಹುಮಾನ ಪಡೆಯುತ್ತಿದ್ದರು. ಇನ್ಮುಂದೆ ಇದರ ಹೊರತಾಗಿ ಪ್ರತಿ ಲೀಗ್ ಪಂದ್ಯದಲ್ಲೂ ಆಟಗಾರರು ಹೆಚ್ಚುವರಿಯಾಗಿ ಲಕ್ಷ ಲಕ್ಷ ಹಣ ಗಳಿಸಲಿದ್ದಾರೆ. ಇದನ್ನೂ ಓದಿ: IPL 2025 | ಮೆಗಾ ಹರಾಜಿಗೂ ಮುನ್ನವೇ IPL ಆಟಗಾರರಿಗೆ ಬಿಸಿಸಿಐ ಭರ್ಜರಿ ಗಿಫ್ಟ್
ಜಯ್ ಶಾ ಎಕ್ಸ್ ಖಾತೆಯಲ್ಲಿ ಏನಿದೆ?
ಐತಿಹಾಸಿಕ ಕ್ರಮದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಶನಿವಾರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ ಆಡುವ ಕ್ರಿಕೆಟಿಗರಿಗೆ ಪಂದ್ಯ ಶುಲ್ಕವನ್ನು ಘೋಷಿಸಿದೆ. ಹರಾಜಿನಲ್ಲಿ ಬಿಕರಿಯಾದ ನಂತರ ಕಾಂಟ್ರ್ಯಾಕ್ಟ್ನೊಂದಿಗೆ ಪ್ರತಿ ಆಟಗಾರನೂ ಒಂದು ಪಂದ್ಯಕ್ಕೆ 7.5 ಲಕ್ಷ ರೂ. ಪಡೆಯುತ್ತಾರೆ. ಈ ಪೈಕಿ ಆಟಗಾರನೊಬ್ಬ ಒಂದು ಋತುವಿನಲ್ಲಿ ಎಲ್ಲಾ ಲೀಗ್ ಪಂದ್ಯಗಳನ್ನು ಆಡಿದರೆ, ಹರಾಜಿನಲ್ಲಿ ನಿಗದಿಯಾದ ಹಣ ಹೊರತುಪಡಿಸಿ, ಹೆಚ್ಚುವರಿಯಾಗಿ 1.05 ಕೋಟಿ ರೂ. ಹೆಚ್ಚುವರಿ ಲಾಭ ಪಡೆದುಕೊಳ್ಳಲಿದ್ದಾರೆ. ಅದಕ್ಕಾಗಿ ಎಲ್ಲಾ ಫ್ರಾಂಚೈಸಿಗಳು ಪಂದ್ಯ ಶುಲ್ಕಕ್ಕಾಗಿ 12.60 ಕೋಟಿ ರೂ.ಗಳ ಪ್ರತ್ಯೇಕ ನಿಧಿ ಮೀಸಲಿಡುತ್ತವೆ. ಐಪಿಎಲ್ನಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಹಾಗೂ ಆಟಗಾರರಲ್ಲಿ ಅತ್ತುತ್ತಮ ಪ್ರದರ್ಶನಕ್ಕಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.