ಲಕ್ನೋ: ಕೊನೆಯವರೆಗೂ ಜಿದ್ದಾಜಿದ್ದಿಯಿಂದ ಕೂಡಿದ್ದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಲಕ್ನೋ ತಂಡ ಸೋತರೂ ನಾಯಕ ಬಾರಿಸಿದ ರಿಷಭ್ ಪಂತ್ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
APPEAL FOR A RUN OUT AT THE NON STRIKER’S END.
– But it’s Not Out. pic.twitter.com/FiRonAfXNn
— Mufaddal Vohra (@mufaddal_vohra) May 27, 2025
17ನೇ ಓವರ್‌ನಲ್ಲಿ ಬೌಲಿಂಗ್‌ಗೆ ಬಂದ ದಿಗ್ವೇಶ್ ರಾಠಿ ಮೊದಲ ಎಸೆತದಲ್ಲೇ ಜಿತೇಶ್ ಶರ್ಮಾರನ್ನ ಔಟ್ ಮಾಡಿದ್ದರು. ಆದ್ರೆ ಅದು ನೋಬಾಲ್ ಆಗಿತ್ತು. ಈ ಬಗ್ಗೆ ರಿಷಭ್ ಪಂತ್ ಟಿವಿ ಅಂಪೈರ್‌ಗೂ ಮೊದಲೇ ಸಿಗ್ನಲ್ ಸೂಚಿಸುತ್ತಿದ್ದರು. ಆ ಎಸೆತದಲ್ಲಿ ಟಿವಿ ಅಂಪೈರ್ ತೀರ್ಪು ಪರಿಶೀಲಿಸುವುದಕ್ಕೂ ಮುನ್ನ ನೋಬಾಲ್ ಸಿಗ್ನಲ್ ಕೊಡಲಾಯಿತು. ಇನ್ನೂ ಅದೇ ಓವರ್‌ನ ಕೊನೇ ಎಸೆತದಲ್ಲಿ ದಿಗ್ವೇಶ್ ರಾಠಿ ಸ್ಫೋಟಕವಾಗಿ ಆಡುತ್ತಿದ್ದ ಜಿತೇಶ್ ಶರ್ಮಾರನ್ನ ಮಂಕಡ್ ರನೌಟ್ ಮಾಡಲು ಯತ್ನಿಸಿದರು. ಈ ಬಗ್ಗೆ ಮೂರನೇ ಅಂಪೈರ್‌ಗೂ ಅಪೀಲ್ ಮಾಡಿದ್ದರು. ಇದು ಆರ್‌ಸಿಬಿ ಫಲಿತಾಂಶದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿತ್ತು. ಆದ್ರೆ ತೀರ್ಪು ಹೊರ ಬರುವಷ್ಟರಲ್ಲಿ ಪಂತ್ ರಿವೀವ್ಯೂ ಹಿಂಪಡೆದರು. ಇದರಿಂದ ಭಾವುಕರಾದ ಜಿತೇಶ್ ಶರ್ಮಾ ಮೈದಾನದಲ್ಲೇ ಒಂದು ಕ್ಷಣ ಪಂತ್‌ರನ್ನ ಅಪ್ಪಿಕೊಂಡರು.
STREETS WILL REMEMBER THIS KNOCK OF JITESH SHARMA. 🫡pic.twitter.com/QivYlkB8MD
— Mufaddal Vohra (@mufaddal_vohra) May 27, 2025
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಲಕ್ನೋ ತಂಡ ಪಂತ್ ಅಮೋಘ ಶತಕದ ನೆರವಿನಿಂದ 3 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿತ್ತು. ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಆರ್‌ಸಿಬಿ 18.4 ಓವರ್‌ಗಳಲ್ಲಿ ಕೇವಲ 4 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿ ಗೆದ್ದು ಬೀಗಿದೆ. ಈ ಮೂಲಕ ಏಕನಾ ಕ್ರೀಡಾಂಗಣದಲ್ಲಿ ಅತಿದೊಡ್ಡ ಮೊತ್ತ ಚೇಸಿಂಗ್ ಮಾಡಿದ ದಾಖಲೆಯನ್ನೂ ಬರೆದಿದೆ.
ಮಯಾಂಕ್ ಜಿತೇಶ್ ಶತಕದ ಜೊತೆಯಾಟ:
ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಆರ್‌ಸಿಬಿಗೆ ಜಿತೇಶ್ ಶರ್ಮಾ – ಮಯಾಂಕ್ ಅಗರ್ವಾಲ್ ಬ್ಯಾಟಿಂಗ್‌ನಲ್ಲಿ ಬಲ ತುಂಬಿದರು. ಮುರಿಯದ 5ನೇ ವಿಕೆಟಿಗೆ ಈ ಜೋಡಿ 45 ಎಸೆತಗಳಲ್ಲಿ ಸ್ಫೋಟಕ 107 ರನ್ ಬಾರಿಸಿತು. ಇದು ತಂಡದ ಗೆಲುವನ್ನು ಸುಲಭವಾಗಿಸಿತು. 257.57 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಜಿತೇಶ್ ಶರ್ಮಾ 33 ಎಸೆತಗಳಲ್ಲಿ 85 ರನ್ (6 ಸಿಕ್ಸರ್, 8 ಬೌಂಡರಿ) ಚಚ್ಚಿದ್ರೆ, ವಿರಾಟ್ ಕೊಹ್ಲಿ 54 ರನ್ (30 ಎಸೆತ, 10 ಬೌಂಡರಿ), ಮಯಾಂಕ್ ಅಗರ್ವಾಲ್ 41 ರನ್ (23 ಎಸೆತ, 5 ಬೌಂಡರಿ) ಫಿಲ್ ಸಾಲ್ಟ್ 30 ರನ್ (19 ಎಸೆತ, 6 ಬೌಂಡರಿ), ರಜತ್ ಪಾಟೀದಾರ್ 14 ರನ್ ಗಳಿಸಿದ್ರು.
– RCB beat CSK in Chennai. ✅
– RCB beat MI in Mumbai. ✅
– RCB beat KKR in Kolkata. ✅
– RCB beat RR in Jaipur. ✅
– RCB beat PBKS in Mullanpur. ✅
– RCB beat DC in Delhi. ✅
– RCB beat LSG in Lucknow. ✅
RCB WIN 7/7 AWAY – CHASING 228 IN 18.4 OVERS. 🥶 pic.twitter.com/RnQNJsMwZ6
— Mufaddal Vohra (@mufaddal_vohra) May 27, 2025
ಲಕ್ನೋ ಪರ ರೂರ್ಕಿ 2 ವಿಕೆಟ್ ಕಿತ್ತರೆ, ಅಕಾಶ್ ಸಿಂಗ್, ಅವೇಶ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿತ್ತು. ಈಗಾಗಲೇ ಪ್ಲೇ ಆಫ್‌ನಿಂದ ಹೊರಬಿದ್ದಿರುವ ಲಕ್ನೋ ಕೊನೆಯ ಪಂದ್ಯದಲ್ಲಿ ಆರಂಭದಿಂದಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾಯಿತು. 2.4 ಓವರ್‌ಗಳಲ್ಲಿ 25 ರನ್‌ಗಳಿದ್ದಾಗಲೇ ಮೊದಲ ವಿಕೆಟ್ ಕಳೆದುಕೊಂಡು ನಿರಾಸೆ ಅನುಭವಿಸಿತು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪಂತ್ ಮತ್ತೊಬ್ಬ ಆರಂಭಿಕ ಮಿಚೆಲ್ ಮಾರ್ಷ್ ಜೊತೆಗೂಡಿ ಅಬ್ಬರಿಸಲು ಪ್ರಾರಂಭಿಸಿದರು. 2ನೇ ವಿಕೆಟಿಗೆ ಈ ಜೋಡಿ 78 ಎಸೆತಗಳಲ್ಲಿ ಬರೋಬ್ಬರಿ 152 ರನ್ ಜೊತೆಯಾಟ ನೀಡಿತ್ತು. ಇದರಿಂದ ಲಕ್ನೋ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.
ಲಕ್ನೋ ಪರ 193.44 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಪಂತ್ ಅಜೇಯ 118 ರನ್ (61 ಎಸೆತ, 8 ಸಿಕ್ಸರ್, 11 ಬೌಂಡರಿ), ಮಿಚೆಲ್ ಮಾರ್ಷ್ 67 ರನ್ ?(37 ಎಸೆತ, 5 ಸಿಕ್ಸರ್, 4 ಬೌಂಡರಿ), ಮ್ಯಾಥ್ಯೂ ಬ್ರೀಟ್ಜ್ಕೆ 14 ರನ್, ನಿಕೋಲಸ್ ಪೂರನ್ 13 ರನ್, ಅಬ್ದುಲ್ ಸಮದ್ 1 ರನ್ ಗಳಿಸಿದ್ರೆ, ಲೆಗ್‌ಬೈಸ್, ನೋಬಾಲ್, ವೈಡ್‌ನಿಂದ 14 ಹೆಚ್ಚುವರಿ ರನ್ ತಂಡಕ್ಕೆ ಸೇರ್ಪಡೆಯಾಯಿತು.
ಆರ್‌ಸಿಬಿ ಪರ ನುವಾನ್ ತುಷಾರ, ಭುವನೇಶ್ಚರ್ ಕುಮಾರ್, ರೊಮಾರಿಯೊ ಶೆಫರ್ಡ್ ತಲಾ ಒಂದೊಂದು ವಿಕೆಟ್ ಪಡೆದರು.