ಆಟಕ್ಕುಂಟು ಲೆಕ್ಕಕ್ಕಿಲದ ಪಂದ್ಯದಲ್ಲಿ ರೋಷಾವೇಶ – ಗುಜರಾತ್‌ ವಿರುದ್ಧ ಲಕ್ನೋಗೆ 33 ರನ್‌ಗಳ ಭರ್ಜರಿ ಗೆಲುವು

Public TV
3 Min Read
Lucknow Super Gaints

ಅಹಮದಾಬಾದ್‌: ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯದಲ್ಲಿ ರೋಷಾವೇಶದ ಪ್ರದರ್ಶನ ನೀಡಿದ ಲಕ್ನೋ ಸೂಪರ್‌ ಜೈಂಟ್ಸ್‌ (Luknow Super Gaints) ತಂಡ ಗುಜರಾತ್‌ ಟೈಟಾನ್ಸ್‌ ವಿರುದ್ಧ 33 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್‌ ಜೈಂಟ್ಸ್‌ ಹಾಗೂ ಗುಜರಾತ್‌ ಟೈಟನ್‌ (Gujarat Titans) ನಡುವಿನ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್ ಮಾಡಿದ ಲಕ್ನೋ ಕೇವಲ 2 ವಿಕೆಟ್‌ ನಷ್ಟಕ್ಕೆ 235 ರನ್‌ ಹೊಡೆಯಿತು. 236 ರನ್‌ ಗುರಿ ಬೆನ್ನಟ್ಟಿದ ಟೈಟನ್ಸ್‌ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 202 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಈಗಾಗಲೇ ಪ್ಲೇ ಆಫ್‌ ಪ್ರವೇಶಿಸಿರುವ ಟೈಟಾನ್ಸ್‌ಗೆ ಈ ಸೋಲು ಲೆಕ್ಕವಿಲ್ಲದಂತಾಗಿದೆ.

Gujarat Titans

ಚೇಸಿಂಗ್‌ ಆರಂಭಿಸಿದ ಟೈಟನ್ಸ್‌ ಪರ ಸಾಯಿ ಸುದರ್ಶನ್‌ ಹಾಗೂ ಶುಭ್‌ಮನ್‌ ಗಿಲ್‌ (Shubman Gill) ತಂಡಕ್ಕೆ ಉತ್ತಮ ಆರಂಭ ನೀಡಿದರು. 4ನೇ ಓವರ್‌ನಲ್ಲಿ ಸಾಯಿ ಸುದರ್ಶನ್‌ 16 ಎಸೆತಗಳಲ್ಲಿ 21 ರನ್‌ ಬಾರಿಸಿ ವಿಲ್ ಒ’ರೂರ್ಕ್‌ಗೆ ವಿಕೆಟ್‌ ಒಪ್ಪಿಸಿದರು. ಬಳಿಕ ಬಂದ ಜೋಸ್‌ ಬಟ್ಲರ್‌ ಹಾಗೂ ಶುಭಮನ್‌ ಗಿಲ್‌ ಜೋಡಿ ತಂಡಕ್ಕೆ ಆಸರೆಯಾಗಿತ್ತು. ಆದ್ರೆ ಲಕ್ನೋ ಬೌಲರ್‌ ಆವೇಶ್‌ ಖಾನ್‌, ಶುಭ್‌ಮನ್‌ ಗಿಲ್‌ ವಿಕಟ್‌ ಕಿತ್ತು ಈ ಜೋಡಿಯ ಆಟಕ್ಕೆ ಬ್ರೇಕ್‌ ಹಾಕಿತು.

ಈ ಬೆನ್ನಲ್ಲೇ ಸ್ಫೋಟಕ ಪ್ರದರ್ಶನ ನೀಡುತ್ತಿದ್ದ ಜೋಸ್‌ ಬಟ್ಲರ್‌ (Jos Buttler) ಸಹ 33 ರನ್‌ ಗಳಿಸಿ ಔಟಾದರು. ಇನ್ನೂ ಮಧ್ಯಮ ಕ್ರಮಾಂಕದಲ್ಲಿ ಶೆರ್ಫೇನ್ ರುದರ್ಫೋರ್ಡ್ ಮತ್ತು ಶಾರೂಖ್‌ ಖಾನ್‌ ಸ್ಫೋಟಕ ಪ್ರದರ್ಶನದಿಂದ ಗುಜರಾತ್‌ ಗೆಲುವಿನ ಕನಸು ಕಂಡಿತ್ತು. ಆದ್ರೆ ಇವರಿಬ್ಬರ ವಿಕೆಟ್‌ ಬೀಳುತ್ತಿದ್ದಂತೆ ಗೆಲುವಿನ ಆಸೆ ಕಮರಿತು. ಶಾರೂಖ್‌ ಖಾನ್‌ 29 ಎಸೆತಗಳಲ್ಲಿ 57 ರನ್‌, ಶೆರ್ಫೇನ್ ರುದರ್ಫೋರ್ಡ್ 38 ರನ್‌, ಶುಭಮನ್‌ ಗಿಲ್‌ 20 ಎಸೆತಗಳಲ್ಲಿ 35 ರನ್‌, ಸಾಯಿ ಸುದರ್ಶನ್‌ 21 ರನ್‌ ಗಳಿಸಿದರು.

ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮೆನ್ಸ್‌ಗಳಾದ ಮಿಚೆಲ್ ಮಾರ್ಷ್ ಹಾಗೂ ಏಡನ್‌ ಮಾರ್ಕ್ರಮ್‌ ಜೋಡಿ ತಂಡಕ್ಕೆ ಭರ್ಜರಿ ಜೊತೆಯಾಟ ನೀಡಿತು. ಮಿಚೆಲ್ ಮಾರ್ಷ್ ಹಾಗೂ ಮಾರ್ಕ್ರಮ್‌ ಜೋಡಿ 53 ರನ್‌ ಸಿಡಿಸಿತು. ಈ ಜೋಡಿಯ ರನ್‌ ಓಟವನ್ನು ಕಟ್ಟಿ ಹಾಕುವಲ್ಲಿ ಗುಜರಾತ್‌ ಬೌಲರ್‌ಗಳು ವಿಫಲರಾದರು.

Nicholas Pooran 2 1

9.5 ಓವರನ್‌ನಲ್ಲಿ 36 ರನ್‌ ಬಾರಿಸಿದ್ದ ಮಾರ್ಕ್ರಮ್‌, ಸಾಯಿ ಕಿಶೋರ್‌ಗೆ ವಿಕೆಟ್‌ ಒಪ್ಪಿಸಿದರು. ಅಷ್ಟರಲ್ಲಾಗಲೇ ಲಕ್ನೋ 1 ವಿಕೆಟ್‌ ನಷ್ಟಕ್ಕೆ 91 ರನ್‌ ಸಿಡಿಸಿತ್ತು. ಬಳಿಕ ಕ್ರೀಸ್‌ಗೆ ಬಂದ ನಿಕೋಲಸ್‌ ಪೂರನ್‌, ಮಿಚೆಲ್‌ ಮಾರ್ಷ್‌ಗೆ ಉತ್ತಮ ಸಾಥ್‌ ನೀಡಿದರು. ಈ ಜೋಡಿ ಬೌಂಡರಿ, ಸಿಕ್ಸರ್‌ ಮೂಲಕ ಸ್ಟೇಡಿಯಂನಲ್ಲಿ ರನ್‌ ಮಳೆಯನ್ನೇ ಹರಿಸಿತ್ತು. ಮಿಚೆಲ್‌ ಮಾರ್ಷ್ ಹಾಗೂ ನಿಕೋಲಸ್‌ ಪೂರನ್‌ ಜೊತೆಯಾಟ ಅಭಿಮಾನಿಗಳಿಗೆ ಕಣ್ಣಿಗೆ ಹಬ್ಬ ನೀಡಿತು. ಇವರಿಬ್ಬರ ಅದ್ಭುತ ಬ್ಯಾಟಿಂಗ್‌ ಪ್ರದರ್ಶನವು ಲಕ್ನೋ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ನೆರವಾಯಿತು.

Nicholas Pooran 2

ಮಿಚೆಲ್‌ ಮಾರ್ಷ್‌ 64 ಎಸೆತಗಳಲ್ಲಿ 117 ರನ್‌ (8 ಸಿಕ್ಸರ್‌, 10 ಬೌಂಡರಿ)ಸಿಡಿಸಿ ಔಟ್ ಆದರು. 2ನೇ ವಿಕೆಟ್‌ಗೆ ಮಿಚೆಲ್‌ ಮಾರ್ಷ್ ಹಾಗೂ ನಿಕೋಲಸ್‌ ಪೂರನ್ ಜೋಡಿ 52 ಎಸೆತಗಳಲ್ಲಿ 121 ರನ್‌ ಹಾಕಿ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದರು. ಕಳೆದ ಕೆಲವು ಪಂದ್ಯಗಳಲ್ಲಿ ನಿರಾಸೆ ಮೂಡಿಸಿದ್ದ ನಿಕೋಲಸ್‌ ಪೂರನ್‌ ಗುಜರಾತ್‌ ವಿರುದ್ಧ ಅಬ್ಬರಿಸಿದರು. ಇವರು 27 ಎಸೆತಗಳಲ್ಲಿ (4 ಬೌಂಡರಿ, 5 ಸಿಕ್ಸರ್‌) ಸಹಾಯದಿಂದ ಅಜೇಯ 56 ರನ್‌ ಸಿಡಿಸಿ ಮಿಂಚಿದರು. ನಾಯಕ ರಿಷಭ್‌ ಪಂತ್‌ 6 ಎಸೆತಗಳಲ್ಲಿ 2 ಸಿಕ್ಸರ್ ಬಾರಿಸಿ ಅಜೇಯ 16 ರನ್‌ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಲಕ್ನೋ ತಂಡ 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 235 ರನ್‌ಗಳ ಬೃಹತ್‌ ಮೊತ್ತದ ಗುರಿ ನೀಡಿತು.

Share This Article