– ಆರ್‌ಟಿಎಂ ಕಾರ್ಡ್ ಬಳಕೆಯತ್ತ ಫ್ರಾಂಚೈಸಿಗಳ ಒಲವು
ಮುಂಬೈ: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ (IPL 2025) ಈ ಬಾರಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಸಂಬಂಧ ಈಗಾಗಲೇ ಎಲ್ಲಾ ತಂಡಗಳಿಗೂ ರಿಟೇನ್ ಆಟಗಾರರನ್ನು ಬಿಟ್ಟು ಉಳಿದ ಆಟಗಾರರನ್ನು ಬಿಡುಗಡೆಗೊಳಿಸುವಂತೆ ಸೂಚನೆ ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸ್ಟಾರ್ ಆಟಗಾರರು ಹರಾಜಿನಲ್ಲಿ ಇರುವ ಸಾಧ್ಯತೆಗಳಿವೆ. ಈ ಬೆನ್ನಲ್ಲೇ ಐಪಿಎಲ್ ಫ್ರಾಂಚೈಸಿಗಳು (IPL Franchises) ವಿಶೇಷ ಬೇಡಿಕೆಯನ್ನಿರಿಸಿವೆ.
Advertisement
ಸದ್ಯ ಮೆಗಾ ಹರಾಜಿಗೂ ಮುನ್ನ ಕನಿಷ್ಠ 3 ರಿಂದ 5 ಆಟಗಾರರನ್ನು ಮಾತ್ರ ರಿಟೇನ್ ಮಾಡಿಕೊಳ್ಳಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅವಕಾಶ ಮಾಡಿಕೊಟ್ಟಿದೆ. ಹಾಗಾಗಿ 8 ಆಟಗಾರರನ್ನು ರಿಟೇನ್ ಮಾಡಿಕೊಳ್ಳಲು ಅನುಮತಿ ನೀಡುವಂತೆ ಫ್ರಾಂಚೈಸಿಗಳು ಮನವಿ ಮಾಡಿವೆ. ಅಲ್ಲದೇ ಹರಾಜಿಗೆ (IPL Mega Auction) 100 ಕೋಟಿ ರೂ.ಗಳಿಗೆ ನಿಗದಿ ಮಾಡಿರುವ ಪರ್ಸ್ ಮೊತ್ತವನ್ನು ಹೆಚ್ಚಿಸುವಂತೆ ಮನವಿ ಮಾಡಿವೆ. ಆದ್ದರಿಂದ ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳ ಪರ್ಸ್ ಮೊತ್ತವನ್ನು 130 ರಿಂದ 140 ಕೋಟಿ ರೂ.ಗಳವರೆಗೆ ಹೆಚ್ಚಿಸುವ ಸಾಧ್ಯತೆಗಳಿವೆ ಹೇಳಲಾಗುತ್ತಿದೆ. ಇದನ್ನೂ ಓದಿ: Paris Olympics 2024 | ಕ್ರೀಡೆಗಳ ಮಹಾಸಂಗಮ; ಒಲಿಂಪಿಯಾ ಬೆಟ್ಟದಲ್ಲಿ ಹುಟ್ಟಿದ ಕ್ರೀಡೆ ವಿಶ್ವವಿಖ್ಯಾತಿಯಾಗಿದ್ದು ಹೇಗೆ?
Advertisement
Advertisement
ಅಲ್ಲದೇ ಮೆಗಾ ಹರಾಜಿನಲ್ಲಿ ಮತ್ತೊಮ್ಮೆ RTM (ರೈಟ್ ಟು ಮ್ಯಾಚ್ ಕಾರ್ಡ್ ಬಳಕೆ) ಕಾರ್ಡ್ ಬಳಸುವ ಬಗ್ಗೆಯೂ ಫ್ರಾಂಚೈಸಿಗಳು ಡಿಮ್ಯಾಂಡ್ ಮಾಡಿವೆ. 2018ರ ಮೆಗಾ ಹರಾಜಿನಲ್ಲಿ RTMಗೆ ಅವಕಾಶವಿತ್ತು. ಆದರೆ 2022ರಲ್ಲಿ ನಡೆದ ಮೆಗಾ ಹರಾಜಿನಲ್ಲಿ ಇದನ್ನು ಕೈಬಿಡಲಾಗಿತ್ತು. ಇದೀಗ ಮತ್ತೆ ಈ ನಿಯಮವನ್ನು ಜಾರಿಗೆ ತರಲು ಫ್ರಾಂಚೈಸಿಗಳು ಒಲುವು ತೋರಿವೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಮುಂಬೈಗೆ ಗುಡ್‌ಬೈ ಹೇಳ್ತಾರಾ ರೋಹಿತ್, ಬುಮ್ರಾ, ಸೂರ್ಯ? – 2025ರ ಐಪಿಎಲ್‌ನ ಮಹತ್ವದ 5 ಬೆಳವಣಿಗೆಗಳು ಹೀಗಿವೆ
Advertisement
ಏನಿದು ಆರ್‌ಟಿಎಂ ಕಾರ್ಡ್?
ಆರ್‌ಟಿಎಂ ಕಾರ್ಡ್ (ರೈಟ್ ಟು ಮ್ಯಾಚ್ ಕಾರ್ಡ್ – RTM Card) ಅನ್ವಯ ಫ್ರಾಂಚೈಸಿಯೊಂದು ತನ್ನ ತಂಡದ ಆಟಗಾರನೊಬ್ಬ ಬೇರೆ ತಂಡಕ್ಕೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾದಾಗ ಅದೇ ಮೊತ್ತಕ್ಕೆ ಆತನನ್ನು ತನ್ನ ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ, ಇದನ್ನು ಆರ್‌ಟಿಎಂ ಎನ್ನಲಾಗುತ್ತದೆ. ಈ ಬಾರಿ ಒಂದೇ ಕಾರ್ಡ್ ಬಳಕೆಗೆ ಅವಕಾಶ ನೀಡುವುದಾಗಿ ಹೇಳಲಾಗಿದೆ. ಹೆಚ್ಚಿನ ಆರ್‌ಟಿಎಂ ಬಳಸಲು ಅವಕಾಶ ನೀಡಿದರೆ ಹರಾಜು ಪ್ರಕ್ರಿಯೆ ಮಹತ್ವ ಕಳೆದುಕೊಳ್ಳುತ್ತದೆ ಎಂದು ಬಿಸಿಸಿಐ ಅಭಿಪ್ರಾಯ ಪಟ್ಟಿದೆ. ಇದನ್ನೂ ಓದಿ: IPL 2025: ಮರಳಿ ಆರ್‌ಸಿಬಿಗೆ ರಾಹುಲ್? – ಡೆಲ್ಲಿ ತೊರೆದು ಸಿಎಸ್‌ಕೆ ಸೇರಲಿದ್ದಾರೆ ರಿಷಭ್ ಪಂತ್?
ಪರ್ಸ್ ಮೊತ್ತ 140 ಕೋಟಿ ರೂ.ಗೆ ಏರಿಕೆ ಸಾಧ್ಯತೆ?
2025ರ ಐಪಿಎಲ್ ಟೂರ್ನಿಗೆ ಪ್ರಸಕ್ತ ವರ್ಷದಲ್ಲೇ ನಡೆಯಲಿರುವ ಮೆಗಾ ಹರಾಜಿಗೆ ಎಲ್ಲಾ 10 ತಂಡಗಳ ಪರ್ಸ್ ಮೊತ್ತವನ್ನು 100 ಕೋಟಿ ರೂ.ಗಳಿಂದ 140 ಕೋಟಿ ರೂ.ಗಳ ವರೆಗೆ ಹೆಚ್ಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಏಕೆಂದರೆ 2025 ಮತ್ತು 2026ರ ಟೂರ್ನಿಗಳಲ್ಲಿ 84 ಪಂದ್ಯಗಳು ನಡೆಯಲಿವೆ, 2027ರ ಆವೃತ್ತಿ 94 ಪಂದ್ಯಗಳನ್ನು ಒಳಗೊಂಡಿರುತ್ತದೆ. ಇದರೊಂದಿಗೆ ಮೆಗಾ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ಬಿಡ್ ಮಾಡಬೇಕಿರುವ ಕಾರಣ ಹೆಚ್ಚಿನ ಹಣ ನೀಡಬೇಕಾಗುತ್ತದೆ. ಆದ್ದರಿಂದ ಪರ್ಸ್ ಮೊತ್ತ ಹೆಚ್ಚಿಸಬೇಕೆಂಬ ಫ್ರಾಂಚೈಸಿಗಳ ಮನವಿಯನ್ನು ಬಿಸಿಸಿಐ ಪುರಸ್ಕರಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. 2024ರ ಐಪಿಎಲ್ ವರೆಗೆ ತಲಾ 10 ತಂಡಗಳಿಗೆ 100 ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿತ್ತು. ಇದನ್ನೂ ಓದಿ: IPL: ರಾಜಸ್ಥಾನ್ ರಾಯಲ್ಸ್ ಕೋಚ್ ಆಗ್ತಾರಾ ರಾಹುಲ್ ದ್ರಾವಿಡ್!