ಅಹಮದಾಬಾದ್: ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ವಿರುದ್ಧದ ಪಂದ್ಯದಲ್ಲಿ ರನೌಟ್ ಆಗಿದ್ದಕ್ಕೆ ಗುಜರಾತ್ ಟೈಟಾನ್ (Gujarat Titans) ತಂಡದ ನಾಯಕ ಶುಭಮನ್ ಗಿಲ್ (Shubman Gill) ಅಂಪೈರ್ ವಿರುದ್ಧವೇ ಜಗಳ ಮಾಡಿದ್ದಾರೆ.
ಜೀಶನ್ ಅನ್ಸಾರಿ ಎಸೆದ 13ನೇ ಓವರ್‌ನ ಕೊನೆಯ ಎಸೆತವನ್ನು ಬಟ್ಲರ್ ಫೈನ್ ಲೆಗ್ ಕಡೆ ಹೊಡೆದು ಓಡಿದರು. ಈ ವೇಳೆ ನಾನ್ ಸ್ಟ್ರೈಕ್‌ನಲ್ಲಿ ಗಿಲ್ ಸ್ಟ್ರೈಕ್‌ನತ್ತ ಬರುತ್ತಿದ್ದರು.
ಈ ಸಂದರ್ಭದಲ್ಲಿ ಹರ್ಷಲ್ ಪಟೇಲ್ ಬಾಲ್ ಹಿಡಿದು ಕೀಪರ್ ಕ್ಲಾಸೆನ್ ಕಡೆಗೆ ಎಸೆದರು. ಬಾಲ್ ಬಂದ ಕೂಡಲೇ ಕ್ಲಾಸೆನ್ ಬಾಲನ್ನು ವಿಕೆಟ್‌ಗೆ ತಾಗಿಸಿದರು. ಗ್ರೌಂಡ್‌ನಲ್ಲಿ ಅಂಪೈರ್ ಮೂರನೇ ಅಂಪೈರ್‌ಗೆ ತೀರ್ಪು ನೀಡುವಂತೆ ಸೂಚಿಸಿದರು. ಇದನ್ನೂ ಓದಿ: IPL 2025 | ಒಂದೇ ಒಂದು ತೂಫಾನ್ ಶತಕ – ವೈಭವ್‌ಗೆ 10 ಲಕ್ಷ ರೂ. ಬಹುಮಾನ!
What’s your take? 👇✍🏻#ShubmanGill seen having a word with the umpire after being given out by the third umpire on a tight call! 👀
Watch the LIVE action ➡ https://t.co/RucOdyBVUf#IPLonJioStar 👉 #GTvSRH | LIVE NOW on SS-1, SS- 1 Hindi & JioHotstar! pic.twitter.com/TPiALXJu8O
— Star Sports (@StarSportsIndia) May 2, 2025
ರಿಪ್ಲೈಯಲ್ಲಿ ವಿಕೆಟ್‌ಗೆ ಗ್ಲೌಸ್ ತಾಗಿದೆಯೋ ಅಥವಾ ಚೆಂಡು ವಿಕೆಟ್ ತಾಗಿದೆಯೋ ಎನ್ನುವುದು ಸ್ಪಷ್ಟವಾಗಿರಲಿಲ್ಲ. ಆದರೆ ಮೂರನೇ ಅಂಪೈರ್ ಗಿಲ್ ಔಟ್ ಎಂದು ತೀರ್ಪು ನೀಡಿದರು. ಔಟ್ ತೀರ್ಪು ಪ್ರಕಟವಾದ ಬೆನ್ನಲ್ಲೇ ಶುಭಮನ್ ಗಿಲ್ ಬೌಂಡರಿ ಗೆರೆ ಬಳಿ ಇದ್ದ ಅಂಪೈರ್ ಬಳಿ ಬಂದು ಔಟ್ ತೀರ್ಪಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಗುಜರಾತ್ 6 ವಿಕೆಟ್ ನಷ್ಟಕ್ಕೆ 224 ರನ್ ಹೊಡೆಯಿತು. ನಾಯಕ ಶುಭಮನ್ ಗಿಲ್ 76 ರನ್ (38 ಎಸೆತ, 10 ಬೌಂಡರಿ, 2 ಸಿಕ್ಸ್), ಸಾಯಿ ಸುದರ್ಶನ್ 48 ರನ್(23 ಎಸೆತ, 9 ಬೌಂಡರಿ), ಜೋಸ್ ಬಟ್ಲರ್64 ರನ್(37 ಎಸೆತ, 3 ಬೌಂಡರಿ, 4 ಸಿಕ್ಸ್) ಹೊಡೆದು ಔಟಾದರು.