ಬೆಂಗಳೂರು: ಐಪಿಎಲ್ (IPL 2025) ಪಂದ್ಯಗಳು ನಡೆಯುತ್ತಿರುವ ಮೈದಾನಗಳಲ್ಲಿ ಜಿಯೋದಿಂದ (Jio) ಉಚಿತ ಮೊಬೈಲ್ ಇಂಟರ್ನೆಟ್ ದೊರೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ (M.Chinnaswamy Stadium) ಮೈದಾನದಲ್ಲೂ ಉಚಿತ ಸೇವೆ ಲಭ್ಯವಿದ್ದು, ಅದಕ್ಕಾಗಿಯೇ ಜಿಯೋ 2000 ಬೂಸ್ಟರ್ ಸೆಲ್‌ಗಳನ್ನು ಅಳವಡಿಸಿದೆ. ಪ್ರೇಕ್ಷಕರು ವೈಫೈ ಆನ್ ಮಾಡಿ, ಮೊಬೈಲ್ ಸಂಖ್ಯೆ ನಮೂದಿಸಿ, ಬರುವ ಒಟಿಪಿಯನ್ನು ಹಾಕಿದರೆ, ಉಚಿತ ಇಂಟರ್ನೆಟ್ ಪಡೆಯಬಹುದಾಗಿದೆ.
ಇಂದು (ಏ.10) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ- ಡೆಲ್ಲಿ ಕ್ಯಾಪಿಟಲ್ಸ್ ನಡುವೆ 24ನೇ ಪಂದ್ಯ ನಡೆಯಲಿದೆ. ಸದ್ಯ ಈ ಐಪಿಎಲ್ನಲ್ಲಿ 3 ಪಂದ್ಯಗಳನ್ನು ಆಡಿರುವ ಡೆಲ್ಲಿ ಕ್ಯಾಪಿಟಲ್ಸ್ ಮೂರರಲ್ಲೂ ವಿಜಯ ಸಾಧಿಸಿ ಟಾಪ್ನಲ್ಲಿದೆ. ಆರ್ಸಿಬಿ 4 ಪಂದ್ಯಗಳನ್ನ ಆಡಿ ಒಂದರಲ್ಲಿ ಮಾತ್ರ ಸೋಲು ಕಂಡಿದೆ. ಇದನ್ನೂ ಓದಿ: 159ಕ್ಕೆ ರಾಜಸ್ಥಾನ್ ಆಲೌಟ್; ಗುಜರಾತ್‌ಗೆ 58 ರನ್‌ಗಳ ಭರ್ಜರಿ ಜಯ
ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಮ್ಯಾಚ್ ಆಡಿದಾಗೆಲ್ಲಾ ಹೆಚ್ಚು ಬಾರಿ ಬೆಂಗಳೂರು ತಂಡವೇ ಜಯಗಳಿಸಿದೆ. ಆರ್ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇದುವರೆಗೆ 31 ಐಪಿಎಲ್ ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಆರ್ಸಿಬಿ 19 ಪಂದ್ಯಗಳಲ್ಲಿ ಜಯಗಳಿಸಿದ್ದರೆ, ಡೆಲ್ಲಿ ತಂಡ ಕೇವಲ 11 ರಲ್ಲಿ ಜಯಗಳಿಸಿದೆ. ಇದರಲ್ಲಿ 12 ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆದಿವೆ. ಈ 12 ರಲ್ಲಿ 7 ಪಂದ್ಯಗಳಲ್ಲಿ ಆರ್ಸಿಬಿ ಜಯ ಸಾಧಿಸಿದೆ. ಇದನ್ನೂ ಓದಿ: ಐಪಿಎಲ್ 2025: ಪಂಜಾಬ್ ಆಲ್‌ರೌಂಡರ್ ಮ್ಯಾಕ್ಸ್‌ವೆಲ್‌ಗೆ ಪಂದ್ಯದ 25% ದಂಡ