Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cricket

ಮಿಸ್ಟರ್‌ 360 ಮೇಲೆ ಆರ್‌ಸಿಬಿ ಕಣ್ಣು – ಈ ಸಲ ಕಪ್‌ ನಮ್ಮದಾಗುತ್ತಾ ಅಂತಿದ್ದಾರೆ ಫ್ಯಾನ್ಸ್‌?

Public TV
Last updated: October 5, 2024 3:26 pm
Public TV
Share
4 Min Read
Suryakumar Yadav
SHARE

ಮುಂಬೈ: ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ ಎಂದೇ ಗುರುತಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (IPL 2025) ಈ ಬಾರಿ ಮಹತ್ವದ ಬದಲಾವಣೆ ಕಂಡುಬರುತ್ತಿದೆ.‌ 17 ಆವೃತ್ತಿ ಕಳೆದರೂ ಒಂದೇ ಒಂದು ಬಾರಿಯೂ ಕಪ್‌ ಗೆಲ್ಲದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಈ ಬಾರಿ ಟ್ರೋಫಿ ಎತ್ತಿಹಿಡಿಯುವುದಕ್ಕಾಗಿಯೇ ಬಲಿಷ್ಟ ತಂಡ ಕಟ್ಟಲು ಸಜ್ಜಾಗಿದೆ. ಅದಕ್ಕಾಗಿ ಮುಂಬೈ ಇಂಡಿಯನ್ಸ್‌ ತಂಡ ಸೂಪರ್‌ ಸ್ಟಾರ್‌ ಬ್ಯಾಟರ್‌ಗಳಾದ ಸೂರ್ಯಕುಮಾರ್ ಯಾದವ್‌ (Suryakumar Yadav) ಮತ್ತು ಟಿಮ್‌ ಡೇವಿಡ್‌ (Tim David) ಅವರ ಮೇಲೆ ಕಣ್ಣಿಟ್ಟಿದೆ ಎಂದು ಮೂಲಗಳು ತಿಳಿಸಿವೆ.

IPL MIvsRCB

ಈಗಾಗಲೇ ಬಿಸಿಸಿಐ (BCCI) 2025-27 ಐಪಿಎಲ್‌ ಆವೃತ್ತಿಗಳಿಗೆ ಸಂಬಂಧಿಸಿದಂತೆ ಹಲವು ನಿಯಮಗಳನ್ನು ಜಾರಿಗೊಳಿಸಿದೆ. ಈ ಬಾರಿ ಮೆಗಾ ಹರಾಜು ನಡೆಯುತ್ತಿರುವುದರಿಂದ 5 ಆಟಗಾರರನ್ನು ಉಳಿಸಿಕೊಳ್ಳಲು ಬಿಸಿಸಿಐ ಅನುಮತಿ ನೀಡಿದೆ. ಅಲ್ಲದೇ ಒಂದು ಆರ್‌ಟಿಎಂ ಕಾರ್ಡ್‌ ಬಳಕೆಗೂ ಅಸ್ತು ಎಂದಿದೆ. ಹಾಗಾಗಿ ಈ ಬಾರಿ ಟ್ರೇಡ್‌ ಇನ್‌ ವಿಂಡೋ ಅಥವಾ ಆರ್‌ಟಿಎಂ ಕಾರ್ಡ್‌ (RTM Card) ನಿಯಮದಲ್ಲಿ ಇಬ್ಬರು ಬ್ಯಾಟರ್‌ಗಳನ್ನು ತಂಡಕ್ಕೆ ಕರೆತರಲು ಆರ್‌ಸಿಬಿ ಪ್ಲ್ಯಾನ್‌ ಮಾಡಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಫ್ರಾಂಚೈಸಿಗಳು ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಇದನ್ನೂ ಓದಿ: IPL Mega Auction | ಹಿಟ್‌ಮ್ಯಾನ್ ರೋಹಿತ್‌ ಇನ್‌ – ಡುಪ್ಲೆಸಿ ಔಟ್‌ – ಆರ್‌ಸಿಬಿಗೆ ಆನೆ ಬಲ

IPL 2022 RCB VS MI

ಮುಂಬೈನಲ್ಲಿ ಸೂರ್ಯನ ಸಾಧನೆ:
2011ರಿಂದಲೂ ಮುಂಬೈ ಇಂಡಿಯನ್ಸ್‌ ತಂಡದಲ್ಲೇ ಇರುವ ಸೂರ್ಯಕುಮಾರ್‌ ಯಾದವ್‌ 150 ಪಂದ್ಯಗಳಲ್ಲಿ 3,594 ರನ್‌ ಗಳಿಸಿದ್ದಾರೆ. ಇದರಲ್ಲಿ 2 ಶತಕ, 24 ಅರ್ಧಶತಕ, 385 ಬೌಂಡರಿಗಳು ಹಾಗೂ 130 ಸಿಕ್ಸರ್‌ಗಳೂ ಸೇರಿವೆ. ಇನ್ನೂ ಈವರೆಗೆ 38 ಪಂದ್ಯಗಳನ್ನಾಡಿರುವ ಎಲೆಕ್ಟ್ರಿಕ್‌ ಸ್ಟ್ರೈಕರ್‌ ಟಿಮ್‌ ಡೇವಿಡ್‌ 659 ರನ್‌ಗಳನ್ನ ಗಳಿಸಿದ್ದಾರೆ. ಇದರಲ್ಲಿ 38 ಬೌಂಡರಿ, 46 ಸಿಕ್ಸರ್‌ಗಳು ಸೇರಿವೆ. ಇದನ್ನೂ ಓದಿ: ಕುಸಿಯಲಿದೆಯೇ 24 ಕೋಟಿ ಸರದಾರನ ಮೌಲ್ಯ – 18 ಕೋಟಿ ಪಡೆಯಲು ಪಾಂಡ್ಯ ಅರ್ಹರೇ?

ಈಗಾಗಲೇ ಮುಂಬರುವ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ ಆರ್‌ಸಿಬಿ ಸೇರಲಿದ್ದಾರೆ ಎಂಬ ವದಂತಿಗಳ ನಡುವೆ ಈ ಸುದ್ದಿ ಬಂದಿದೆ. ಮೆಗಾ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡದ ರಿಟೇನ್‌ ಆಟಗಾರರ ಪಟ್ಟಿಯನ್ನು ಅ.31ರ ಒಳಗೆ ಪ್ರಕಟಿಸುವಂತೆ ಬಿಸಿಸಿಐ (BCCI) ಡೆಡ್‌ಲೈನ್‌ ಫಿಕ್ಸ್‌ ಮಾಡಿದೆ. ಈ ಹಿನ್ನೆಲೆಯಲ್ಲಿ ಫ್ರಾಂಚೈಸಿಗಳು ಉಳಿಸಿಕೊಳ್ಳುವ ಆಟಗಾರರ ಸಂಭಾವ್ಯ ಪಟ್ಟಿಯನ್ನು ಸಿದ್ಧ ಮಾಡಿಕೊಂಡಿವೆ ಎಂದು ಹೇಳಲಾಗುತ್ತಿವೆ.

RCB

ಸದ್ಯ ಈಗಿರುವ 10 ಫ್ರಾಂಚೈಸಿಗಳ ಸಂಭಾವ್ಯ ರಿಟೇನ್‌ ಆಟಗಾರರ ಪಟ್ಟಿ:
* ಚೆನ್ನೈ ಸೂಪರ್ ಕಿಂಗ್ಸ್:
ರುತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಶಿವಂ ದುಬೆ, ಡೇರಿಲ್‌ ಮಿಚೆಲ್, ಮತೀಶ ಪತಿರಣ, ಎಂ.ಎಸ್ ಧೋನಿ

* ಮುಂಬೈ ಇಂಡಿಯನ್ಸ್:
ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಅನ್ಶುಲ್ ಕಾಂಬೋಜ್

* ರಾಯಲ್ ಚಾಲೆಂಜರ್ಸ್ ಬೆಂಗಳೂರು:
ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್, ವಿಲ್ ಜಾಕ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ಯಶ್ ದಯಾಳ್

* ರಾಜಸ್ಥಾನ್ ರಾಯಲ್ಸ್:
ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಹಾಲ್, ಸಂದೀಪ್ ಶರ್ಮಾ

* ಕೋಲ್ಕತ್ತಾ ನೈಟ್ ರೈಡರ್ಸ್:
ಶ್ರೇಯಸ್ ಅಯ್ಯರ್, ರಿಂಕು ಸಿಂಗ್, ಫಿಲ್ ಸಾಲ್ಟ್, ಸುನಿಲ್ ನರೈನ್, ಆಂಡ್ರೆ ರಸೆಲ್, ಹರ್ಷಿತ್ ರಾಣಾ

* ಗುಜರಾತ್ ಟೈಟಾನ್ಸ್:
ಶುಭಮನ್ ಗಿಲ್, ರಶೀದ್ ಖಾನ್, ಡೇವಿಡ್ ಮಿಲ್ಲರ್, ಸಾಯಿ ಸುದರ್ಶನ್, ಮೊಹಮ್ಮದ್ ಶಮಿ, ರಾಹುಲ್ ತೆವಾಟಿಯಾ

* ಲಕ್ನೋ ಸೂಪರ್ ಜೈಂಟ್ಸ್:
ಕೆ.ಎಲ್ ರಾಹುಲ್, ಕ್ವಿಂಟನ್ ಡಿ ಕಾಕ್, ನಿಕೋಲಸ್ ಪೂರನ್, ರವಿ ಬಿಷ್ಣೋಯ್, ಮಾರ್ಕಸ್ ಸ್ಟೊಯಿನಿಸ್, ಮಯಾಂಕ್ ಯಾದವ್

* ಡೆಲ್ಲಿ ಕ್ಯಾಪಿಟಲ್ಸ್‌:
ರಿಷಬ್ ಪಂತ್, ಟ್ರಿಸ್ಟಾನ್ ಸ್ಟಬ್ಸ್, ಮಿಚೆಲ್ ಮಾರ್ಷ್, ಜೇಕ್ ಫ್ರೇಸರ್-ಮೆಕ್‌ ಗಾರ್ಕ್‌, ಅಕ್ಷರ್‌ ಪಟೇಲ್, ಅಭಿಷೇಕ್ ಪೊರೆಲ್

* ಪಂಜಾಬ್ ಕಿಂಗ್ಸ್:
ಸ್ಯಾಮ್ ಕುರ್ರಾನ್, ಅರ್ಷ್‌ದೀಪ್‌ ಸಿಂಗ್, ಕಗಿಸೊ ರಬಾಡ, ಲಿಯಾಮ್ ಲಿವಿಂಗ್‌ಸ್ಟೋನ್‌, ಶಶಾಂಕ್ ಸಿಂಗ್, ಅಶುತೋಷ್ ಶರ್ಮಾ

* ಸನ್‌ರೈಸರ್ಸ್ ಹೈದರಾಬಾದ್:
ಪ್ಯಾಟ್ ಕಮಿನ್ಸ್, ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಹೆನ್ರಿಚ್ ಕ್ಲಾಸೆನ್, ಟಿ. ನಟರಾಜನ್, ನಿತೀಶ್ ಕುಮಾರ್ ರೆಡ್ಡಿ.

Mumbai Indians 5

ಟ್ರೇಡ್‌ ಇನ್‌ ವಿಂಡೋನಲ್ಲಿ ಬದಲಾವಣೆ ಸಾಧ್ಯತೆ:
ಸದ್ಯ ಮುಂಬೈ ಇಂಡಿಯನ್ಸ್‌ನ ರೋಹಿತ್‌ ಶರ್ಮಾ ಅವರು ರಿಟೇನ್‌ ಆಟಗಾರರ ಪಟ್ಟಿಯಲ್ಲಿದ್ದರೂ, ಅವರು ಟ್ರೇಡ್‌ ಇನ್‌ ವಿಂಡೋ ನಿಯಮದಲ್ಲಿ ಆರ್‌ಸಿಬಿ ಪಾಲಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಹಾಲಿ ಕ್ಯಾಪ್ಟನ್‌ ಫಾಫ್‌ ಡು ಪ್ಲೆಸಿಸ್‌ ರಿಟೇನ್‌ ಸಂಭಾವ್ಯ ಪಟ್ಟಿಯಲ್ಲಿ ಇಲ್ಲದಿರುವುದೂ ಇದಕ್ಕೆ ಕಾರಣವಾಗಿದೆ. 2024ರ ಆವೃತ್ತಿಯಲ್ಲಿ ಆಸೀಸ್‌ ಆಟಗಾರ ಕ್ಯಾಮರೂನ್‌ ಗ್ರೀನ್‌ ಮುಂಬೈ ಇಂಡಿಯನ್ಸ್‌ ಮತ್ತು ಹಾರ್ದಿಕ್‌ ಪಾಂಡ್ಯ ಗುಜರಾತ್‌ ಟೈಟಾನ್ಸ್‌ ತಂಡದಲ್ಲಿದ್ದರೂ ಅವರನ್ನು ಟ್ರೆಡ್‌ ಇನ್‌ ವಿಂಡೋ ನಿಯಮದ ಪ್ರಕಾರ ಬದಲಾವಣೆ ಮಾಡಿಕೊಳ್ಳಲಾಗಿತ್ತು. ಹಾರ್ದಿಕ್‌ ಪಾಂಡ್ಯ ಅವರನ್ನು ಗುಜರಾತ್‌ ಟೈಟಾನ್ಸ್‌ಗೆ ಕರೆತಂದು, ಗ್ರೀನ್‌ ಅವರನ್ನ ಆರ್‌ಸಿಬಿ ತಂಡಕ್ಕೆ ಬಿಟ್ಟುಕೊಡಲಾಗಿತ್ತು.

TAGGED:IPL 2025IPL mega auctionMumbai IndiansrcbSuryakumar YadavTim Davidvirat kohliಆರ್‍ಸಿಬಿಮುಂಬೈ ಇಂಡಿಯನ್ಸ್ಸೂರ್ಯಕುಮಾರ್ ಯಾದವ್
Share This Article
Facebook Whatsapp Whatsapp Telegram

You Might Also Like

Meghalaya Honeymoon 7
Crime

ಹನಿಮೂನ್ ಹಂತಕಿಯ ಮತ್ತೊಂದು ರಹಸ್ಯ ಬಯಲು – 3 ವಾರಗಳಲ್ಲಿ ಆ ಸಂಖ್ಯೆಗೆ 234 ಬಾರಿ ಫೋನ್‌ ಕಾಲ್‌ ಮಾಡಿದ್ದ ಸೋನಂ

Public TV
By Public TV
14 minutes ago
Operation Sindhu
Latest

Israel-Iran Conflict – ಇರಾನ್‍ನಿಂದ ದೆಹಲಿ ತಲುಪಿದ 110 ಭಾರತೀಯರು

Public TV
By Public TV
21 minutes ago
Gold Suresh
Bengaluru City

Exclusive | ಲಕ್ಷ ಲಕ್ಷ ಹಣ ವಂಚನೆ ಆರೋಪ – ನನ್ನ ಹೆಸರು ಹಾಳು ಮಾಡುವ ಉದ್ದೇಶ ಬಿಟ್ಟು ಬೇರೆನಿಲ್ಲ: ಗೋಲ್ಡ್‌ ಸುರೇಶ್‌

Public TV
By Public TV
50 minutes ago
KRS Dam 2
Districts

45 ವರ್ಷಗಳ ಇತಿಹಾಸದಲ್ಲಿ ನೂತನ ದಾಖಲೆ ಬರೆಯಲು ಕೆಆರ್‌ಎಸ್ ಸಜ್ಜು

Public TV
By Public TV
59 minutes ago
Priyank Kharge 2
Bengaluru City

ವಿದೇಶದಿಂದ ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರಿಗೆ ವಾಪಸ್ – ಬರ್ತಿದ್ದಂತೆ ಕೇಂದ್ರದ ವಿರುದ್ಧ ವಾಗ್ದಾಳಿ

Public TV
By Public TV
1 hour ago
Chinnaswamy Stadium Stampede
Bengaluru City

ಕಾಲ್ತುಳಿತ ತನಿಖೆಗೆ ಇನ್ನೊಂದು ವಾರ ಗಡುವು ಕೇಳಲು ಚಿಂತನೆ – ಸಿಸಿಟಿವಿ ಫೂಟೇಜ್ ನೀಡುವಂತೆ ಡಿಸಿ ಪತ್ರ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?