ಚೆನ್ನೈ: 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದಲೂ ಲೆಜೆಂಡ್ ಎಂ.ಎಸ್ ಧೋನಿ (MS Dhoni) ಅವರ ನಿವೃತ್ತಿಯ ಸುದ್ದಿ ಸದ್ದು ಮಾಡುತ್ತಲೇ ಇದೆ. ನಿರೀಕ್ಷೆಯಂತೆ 2024ರ ಐಪಿಎಲ್ (IPL 2024) ಟೂರ್ನಿಯಲ್ಲೂ ಸಿಎಸ್‌ಕೆ ಪರ ನಾಯಕನಾಗಿ ಕಣಕ್ಕಿಳಿಯಲಿರುವ ಮಹಿ ಮುಂದಿನ ಸೀಸನ್‌ಗಳಲ್ಲೂ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಬಗ್ಗೆ ಅವರ ಬಾಲ್ಯದ ಗೆಳೆಯ ಪರಮ್‌ಜಿತ್ ಸಿಂಗ್ (Paramjit Singh) ಸುಳಿವು ಕೊಟ್ಟಿದ್ದಾರೆ.
ಹೌದು. 16ನೇ ಆವೃತ್ತಿಯ ಐಪಿಎಲ್‌ನಲ್ಲಿ ಚೆನ್ನೈ ಚಾಂಪಿಯನ್ (CSK) ಕಿರೀಟ ಮುಡಿಗೇರಿಸಿಕೊಳ್ಳುತ್ತಿದ್ದಂತೆ, ಧೋನಿ ನಿವೃತ್ತಿ ಘೋಷಣೆ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದ್ರೆ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟ ಮಹಿ, 2024ರ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುವುದಾಗಿ ಹೇಳಿದ್ದರು. ಅದರಂತೆ ಅವರು ಚೆನ್ನೈ ತಂಡದ ಭಾಗವಾಗಿದ್ದಾರೆ. ಇದನ್ನೂ ಓದಿ: WTC – ಮತ್ತೆ ನಂ.1 ಸ್ಥಾನಕ್ಕೆ ಜಿಗಿದ ಭಾರತ – ಹಿಟ್‌ಮ್ಯಾನ್ ನಾಯಕತ್ವಕ್ಕೆ ಮೆಚ್ಚುಗೆ
Advertisement
Advertisement
ಬಾಲ್ಯದ ಗೆಳೆಯ ಹೇಳಿದ್ದೇನು?
2024ರ ಐಪಿಎಲ್ ಟೂರ್ನಿಯೇ ಧೋನಿ ಅವರ ಕೊನೆಯ ಸೀಸನ್ ಆಗಿರುತ್ತದೆ ಎಂದು ನಾನು ಭಾವಿಸುವುದಿಲ್ಲ. ಅವರು ಇನ್ನೂ ಫಿಟ್ ಆಗಿದ್ದಾರೆ. ಇನ್ನೂ ಒಂದು ಅಥವಾ ಎರಡು ಸೀಸನ್‌ಗಳನ್ನು ಆಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂಬುದಾಗಿ ಪರಮ್‌ಜಿತ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಅಯ್ಯರ್, ಕಿಶನ್ ಕಾಂಟ್ರವರ್ಸಿ; ಸೋಶಿಯಲ್ ಮೀಡಿಯಾದಲ್ಲೂ ಟ್ರೆಂಡ್ – ಬಿಸಿಸಿಐ ಪರ ಪಾಕ್ ಮಾಜಿ ಕ್ರಿಕೆಟಿಗ ಬ್ಯಾಟಿಂಗ್
Advertisement
Advertisement
ನೆಟ್ಸ್‌ನಲ್ಲಿ ಬೆವರಿಳಿಸಿದ ಮಹಿ:
17ನೇ ಆವೃತ್ತಿಯ ಐಪಿಎಲ್ ಇದೇ ತಿಂಗಳ ಮಾರ್ಚ್ 22 ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೆಣಸಲಿವೆ. ಲೋಕಸಭಾ ಚುನಾವಣೆಯೂ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೊದಲ 21 ಪಂದ್ಯಗಳಿಗೆ ಮಾತ್ರ ಸಮಯ ನಿಗದಿಪಡಿಸಿದ್ದು, ಚುನಾವಣಾ ದಿನಾಂಕ ಬಿಡುಗಡೆಯಾದ ನಂತರ ಮುಂದಿನ ವೇಳಾಪಟ್ಟಿ ಪ್ರಕಟಿಸುವುದಾಗಿ ಐಪಿಎಲ್ ಮಂಡಳಿ ತಿಳಿಸಿದೆ. 22ರಿಂದಲೇ ಟೂರ್ನಿ ಆರಂಭವಾಗುವ ಹಿನ್ನೆಲೆಯಲ್ಲಿ ಧೋನಿ ಅವರು ನೆಟ್ಸ್‌ನಲ್ಲಿ ಸಮರಾಭ್ಯಾಸ ನಡೆಸುತ್ತಿದ್ದಾರೆ. ಸದ್ಯ ಕೆಲ ದಿನಗಳಮಟ್ಟಿಗೆ ಅನಂತ್ ಅಂಬಾನಿ ಅವರ ಪ್ರೀ-ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: T20 World Cup 2024: ಟೀಂ ಇಂಡಿಯಾ ಆಯ್ಕೆಗೆ ಡೆಡ್‌ಲೈನ್ ಫಿಕ್ಸ್
2023ರ ಐಪಿಎಲ್ ಫೈನಲ್ ನಂತ್ರ ಮಹಿ ಹೇಳಿದ್ದೇನು?
ಐಪಿಎಲ್ ಫೈನಲ್ ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ್ದ ಮಹಿ, ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ, ನನಗೆ ನಿವೃತ್ತಿ ಘೋಷಿಸಲು ಇದು ನನಗೆ ಉತ್ತಮ ಸಮಯವಾಗಿದೆ. ಈ ವರ್ಷ ನಾನು ಎಲ್ಲೇ ಹೋಗಿದ್ದರು ನನ್ನ ಮೇಲೆ ಪ್ರೀತಿ ಮತ್ತು ವಾತ್ಸಲ್ಯ ತೋರಿಸಿದರು. ಎಲ್ಲರಿಗೂ ತುಂಬಾ ಧನ್ಯವಾದಗಳು ಎಂದು ಹೇಳುವುದು ಸುಲಭದ ವಿಷಯ. ಆದ್ರೆ ಕಠಿಣ ವಿಷಯವೆಂದರೆ ಇನ್ನೂ 9 ತಿಂಗಳು ಕಷ್ಟಪಟ್ಟು ಮುಂದಿನ ಐಪಿಎಲ್ ಆಡುವುದು. ಇದು ನನ್ನ ದೈಹಿಕ ಸಾಮರ್ಥ್ಯಕ್ಕೆ ಸುಲಭವಲ್ಲ. ಆದ್ರೆ ಅಭಿಮಾನಿಗಳಿಗೆ ಉಡುಗೊರೆಯಾಗಲಿದೆ. ನಾನು ಈ ಬಾರಿ ಮೊದಲ ಪಂದ್ಯ ಆಡುವಾಗ ಎಲ್ಲರೂ ನನ್ನ ಹೆಸರನ್ನು ಕೂಗುತ್ತಿದ್ದರು. ನಿಜ ಹೇಳಬೇಕೆಂದರೆ ಆಗ ನನ್ನ ಕಣ್ಣುಗಳು ಒದ್ದೆಯಾಗಿದ್ದವು. ಹಾಗಾಗಿ ಡಗೌಟ್‌ನಲ್ಲಿ ಸ್ವಲ್ಪ ಸಮಯ ತೆಗೆದುಕೊಂಡಿದ್ದೆ. ಅಭಿಮಾನಿಗಳ ಈ ಪ್ರೀತಿಯನ್ನು ಆನಂದಿಸಬೇಕು ಎಂದು ನಾನು ಅರಿತುಕೊಂಡಿದ್ದೇನೆ. ಇಂದು ನಾನು ಏನಾಗಿದ್ದೇನೋ ಅದಕ್ಕೆಲ್ಲಾ ಮೂಲ ಕಾರಣವೇ ಅಭಿಮಾನಿಗಳ ಪ್ರೀತಿ. ಅಭಿಮಾನಿಗಳು ನನ್ನ ವೃತ್ತಿ ಜೀವನದ ಪ್ರಮುಖ ಭಾಗ ಎಂದು ಧೋನಿ ಭಾವುಕರಾಗಿದ್ದರು.
ರೋಚಕ ಪಂದ್ಯದಲ್ಲಿ ಸಿಎಸ್‌ಕೆ ಗೆದ್ದದ್ದು ಹೇಗೆ?
2023ರ ಐಪಿಎಲ್ ಫೈನಲ್ ಪಂದ್ಯದಲ್ಲಿ 215 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 3 ಎಸೆತಗಳನ್ನು ಎದುರಿಸುತ್ತಿದ್ದಂತೆ ಮಳೆ ಕಾಟ ಶುರುವಾಯಿತು. ಬಳಿಕ ತಡರಾತ್ರಿ 12:10ಕ್ಕೆ ಪಂದ್ಯ ಆರಂಭಗೊಂಡಿತು. ಮಳೆ ಅಡ್ಡಿಯಾಗಿದ್ದರಿಂದ ಡಕ್ವರ್ತ್ ಲೂಯಿಸ್ ನಿಯಮ ಅನ್ವಯಿಸಲಾಯಿತು. ಈ ನಿಯಮದ ಪ್ರಕಾರ ಸಿಎಸ್‌ಕೆ 15 ಓವರ್‌ಗಳಲ್ಲಿ 171 ರನ್ ಗಳ ಬೃಹತ್ ಮೊತ್ತದ ಟಾರ್ಗೆಟ್ ಪಡೆಯಿತು. ಸಂಘಟಿತ ಬ್ಯಾಟಿಂಗ್ ಪ್ರದರ್ಶನ ತೋರಿದ ಸಿಎಸ್‌ಕೆ ನಿಗದಿತ ಓವರ್‌ಗಳಲ್ಲಿ ರನ್ ಪೂರೈಸುವಲ್ಲಿ ಯಶಸ್ವಿಯಾಯಿತು. ಮಧ್ಯ ರಾತ್ರಿಯಲ್ಲಿ ಆರಂಭಗೊಂಡ ಪಂದ್ಯ ಕೊನೇ ಕ್ಷಣದ ವರೆಗೂ ರೋಚಕತೆಯಿಂದ ಕೂಡಿತ್ತು.