ಚೆನ್ನೈ: 17ನೇ ಆವೃತ್ತಿ ಐಪಿಎಲ್‌ನ (IPL) ಉದ್ಘಾಟನಾ ಪಂದ್ಯದಲ್ಲೇ ಆರ್‌ಸಿಬಿ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ (Virat Kohli) 21 ರನ್ ಬಾರಿಸುವ ಮೂಲಕ ಎರಡೆರಡು ದಾಖಲೆಗಳನ್ನ ಉಡೀಸ್ ಮಾಡಿದ್ದಾರೆ.
ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಫೀಲ್ಡಿಂಗ್ ಮಾಡುವ ಅವಕಾಶವನ್ನು ಸಿಎಸ್‌ಕೆಗೆ (CSK) ಬಿಟ್ಟುಕೊಟ್ಟಿತು. ಆರ್‌ಸಿಬಿ ಪರ ನಿಧಾನಗತಿಯ ಬ್ಯಾಟಿಂಗ್ ಮಾಡಿ 1 ಸಿಕ್ಸರ್ ಜೊತೆಗೆ 21 ರನ್ ಗಳಿಸಿದ ಕೊಹ್ಲಿ, ಟಿ20 ಕ್ರಿಕೆಟ್‌ನಲ್ಲಿ ಎರಡು ತಂಡಗಳ (ಡೆಲ್ಲಿ ಕ್ಯಾಪಿಟಲ್ಸ್ & ಸಿಎಸ್‌ಕೆ) ವಿರುದ್ಧ 1,000 ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಖ್ಯಾತಿಗೆ ಪಾತ್ರರಾದರು. ಅಲ್ಲದೇ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 12,000 ರನ್ ಪೂರೈಸಿದ ಮೊದಲ ಭಾರತೀಯ ಹಾಗೂ ವಿಶ್ವದ 2ನೇ ಆಟಗಾರ ಸಹ ಎನಿಸಿಕಕೊಂಡರು.
- Advertisement
- Advertisement
ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ಕ್ರಿಸ್ ಗೇಲ್ (Chris Gayle) 343 ಇನ್ನೀಂಗ್ಸ್‌ಗಳಲ್ಲಿ 12,000 ರನ್ ಪೂರೈಸಿದ್ದರೆ, ವಿರಾಟ್ 360 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: IPL 2024: ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ವಿನ್ನರ್ಸ್ ಲಿಸ್ಟ್ – ಶಾನ್ ಮಾರ್ಷ್‌ನಿಂದ ಗಿಲ್ ವರೆಗೆ
ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರರು:
* 14,562 – ಕ್ರಿಸ್ ಗೇಲ್
* 13,360 – ಶೋಯೆಬ್ ಮಲಿಕ್
* 12,900 – ಕಿರನ್ ಪೊಲಾರ್ಡ್
* 12,319 – ಅಲೆಕ್ಸ್ ಹೇಲ್ಸ್
* 12,065 – ಡೇವಿಡ್ ವಾರ್ನರ್
* 12,000 – ವಿರಾಟ್ ಕೊಹ್ಲಿ
ಸದ್ಯ ಚೆನ್ನೈನ ಚಿದಂಬರಂ (ಚೆಪಾಕ್) ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 173 ರನ್ ಗಳಿಸಿ. ಸಿಎಸ್‌ಕೆಗೆ 174 ರನ್‌ಗಳ ಗುರಿ ನೀಡಿದೆ. ಇದನ್ನೂ ಓದಿ: IPL ಉದ್ಘಾಟನಾ ವೇದಿಕೆಯಲ್ಲಿ ಬೆಡಗು ಬಿನ್ನಾಣ; ಇಲ್ಲಿದೆ ಅಂದ-ಚೆಂದದ ಫೋಟೋಸ್!