ಮುಂಬೈ: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯ 17ನೇ ಆವೃತ್ತಿಯ ಮೊದಲ 21 ಪಂದ್ಯಗಳ ವೇಳಾಪಟ್ಟಿ ಈಗಾಗಲೇ ಪ್ರಕಟಗೊಂಡಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (CSK vs RCB) ತಂಡಗಳು ಕಾದಾಟ ನಡೆಸಲಿವೆ. ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಣ ಈ ಹೈವೋಲ್ಟೇಜ್ ಕದನಕ್ಕೆ ಚೆನ್ನೈನ ಎಂ.ಎ ಚಿದಂಬರಂ (ಚೆಪಾಕ್) ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
Advertisement
ಐಪಿಎಲ್ ಟೂರ್ನಿ ಆರಂಭಕ್ಕೆ ಇನ್ನೂ 6 ದಿನಗಳು ಬಾಕಿಯಿರುವಂತೆಯೇ ಉದ್ಘಾಟನಾ ಪಂದ್ಯದ ಟಿಕೆಟ್ ಬಿಡುಗಡೆ ಮಾಡಿದ್ದು, ಸೋಮವಾರ (ಮಾರ್ಚ್ 18 ರಿಂದ) ಬೆಳಗ್ಗೆ 9:30 ಗಂಟೆಯಿಂದ ಟಿಕೆಟ್ ಮಾರಾಟ ಶುರುವಾಗಲಿದೆ. ಐಪಿಎಲ್‌ನ ಅಧಿಕೃತ ವೆಬ್ ಸೈಟ್, ಪೇಟಿಎಮ್ ಮತ್ತು ಇನ್‌ಸೈಡರ್ ಆನ್‌ಲೈನ್ ವೇದಿಕೆಗಳ ಮೂಲಕ ಅಭಿಮಾನಿಗಳು ಟಿಕೆಟ್ ಖರೀದಿ ಮಾಡಬಹುದಾಗಿದೆ.
Advertisement
ಆನ್‌ಲೈನ್ ಮಾರಾಟದ ಜೊತೆಗೆ ಪಂದ್ಯ ಕ್ರೀಡಾಂಗಣದ ಹೊರಗಿನ ಕೌಂಟರ್‌ಗಳಲ್ಲಿ ಆಫ್‌ಲೈನ್ ಟಿಕೆಟ್‌ಗಳ ಮಾರಾಟವೂ (IPL Ticket Sales) ಇರಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: WPL 2024: ಅಂಪೈರ್ ಎಡವಟ್ಟು – ಫಿಕ್ಸಿಂಗ್ ಹಣೆಪಟ್ಟಿ ಕಟ್ಟಿಕೊಂಡ ಮುಂಬೈ ಇಂಡಿಯನ್ಸ್
Advertisement
Advertisement
ಟಿಕೆಟ್ ದರ ಎಷ್ಟು?
ಸ್ಟ್ಯಾಂಡ್: C/D/E – 1,700 ರೂ.
ಸ್ಟ್ಯಾಂಡ್: I/J/K – 4,000 ರೂ.
ಸ್ಟ್ಯಾಂಡ್: I/J/K – 4,500 ರೂ.
ಸ್ಟ್ಯಾಂಡ್: C/D/E – 4,000 ರೂ.
ಸ್ಟ್ಯಾಂಡ್: KMK ಟೆರೇಸ್ – 7,500 ರೂ.
ಪ್ರಶ್ನೆಗೆ ಉತ್ತರಿಸಿ ಟಿಕೆಟ್ ಗೆಲ್ಲಿ:
ಇನ್ನೂ ಐಪಿಎಲ್ ಟೂರ್ನಿ ಬಗ್ಗೆ ಕ್ರಿಕೆಟ್ ಆಸಕ್ತಿ ಬೆಳೆಸಲು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ವಿಶೇಷ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಮೂಲಕ ವಿಜೇತರಿಗೆ ಉದ್ಘಾಟನಾ ಪಂದ್ಯದ ಟಿಕೆಟ್ ಗೆಲ್ಲುವ ಅವಕಾಶ ಕಲ್ಪಿಸಿಕೊಟ್ಟಿದೆ. ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಬೆನ್ನಲ್ಲೇ ಐಪಿಎಲ್ ಪ್ರಿಯರಿಗೆ ಶಾಕ್!