ಹೈದರಾಬಾದ್: ಸಿಕ್ಸರ್ ಬೌಂಡರಿಗಳ ಆಟದಲ್ಲಿ ಸನ್‌ರೈಸರ್ಸ್ ಹೈದಾಬಾದ್ (Sunrisers Hyderabad) ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ 31 ರನ್‌ಗಳ ಜಯ ಸಾಧಿಸಿದೆ.
ಗೆಲ್ಲಲು 278 ರನ್‌ಗಳ ಕಠಿಣ ಗುರಿಯನ್ನು ಪಡೆದ ಮುಂಬೈ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 246 ರನ್ ಹೊಡೆದು ಸತತ ಎರಡನೇ ಸೋಲನ್ನು ಅನುಭವಿಸಿತು. ಎರಡು ತಂಡಗಳು ಮೊತ್ತ 500 ರನ್‌ಗಳ ಗಡಿಯನ್ನು ದಾಟಿದ್ದು ವಿಶೇಷ.
Advertisement
WHAT. A. MATCH! 🔥
Raining sixes and 500 runs scored for the first time ever in #TATAIPL 💥
Hyderabad is treated with an epic encounter 🧡💙👏
Scorecard ▶️ https://t.co/oi6mgyCP5s#SRHvMI pic.twitter.com/hwvWIDGsLh
— IndianPremierLeague (@IPL) March 27, 2024
Advertisement
ಮೂರು ದಾಖಲೆ ಸೃಷ್ಟಿ: ಒಟ್ಟು 523 ರನ್ ಸಿಡಿದಿದ್ದು ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲು. ಇಂದಿನ ಪಂದ್ಯದಲ್ಲಿ 31 ಬೌಂಡರಿ, 38 ಸಿಕ್ಸ್ ಸಿಡಿಯಲ್ಪಟ್ಟಿದೆ. ಐಪಿಎಲ್‌ನಲ್ಲಿ ಇಷ್ಟು ಬೌಂಡರಿ, ಸಿಕ್ಸ್ ಚಚ್ಚುವ ಮೂಲಕ ಮತ್ತೊಂದು ದಾಖಲೆ ಬರೆಯಲಾಗಿದೆ.
Advertisement
ಇಂದಿನ ಪಂದ್ಯದಲ್ಲಿ ಹೈದರಾಬಾದ್ 277 ರನ್ ಹೊಡೆಯುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ತಂಡ ಎಂಬ ಹೆಗ್ಗಳಿಕೆಗೆ ಹೈದರಾಬಾದ್ ಪಾತ್ರವಾಯಿತು. ಈ ಹಿಂದೆ ಅತಿ ಹೆಚ್ಚು ರನ್ ಸಿಡಿಸಿದ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಹೆಸರಿನಲ್ಲಿ ಇತ್ತು. 2013ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಪುಣೆ ವಾರಿಯರ್ಸ್ ವಿರುದ್ಧ 5 ವಿಕೆಟ್ ನಷ್ಟಕ್ಕೆ 263 ರನ್ ಹೊಡೆದಿತ್ತು. ಈ ಪಂದ್ಯದಲ್ಲಿ ಕ್ರಿಸ್ ಗೇಲ್ ಔಟಾಗದೇ 175 ರನ್ ಚಚ್ಚಿದ್ದರು.
Advertisement
ಭಾರೀ ದೊಡ್ಡ ಮೊತ್ತವಿದ್ದ ಹಿನ್ನೆಲೆಯಲ್ಲಿ ಆರಂಭದಲ್ಲೇ ರೋಹಿತ್ ಶರ್ಮಾ (Rohit Sharma) ಮತ್ತು ಇಶನ್ ಕಿಶನ್ (Ishan Kishan) ಅಬ್ಬರಿಸಲು ಆರಂಭಿಸಿದರು. ಇಬ್ಬರು 20 ಎಸೆತಗಳಲ್ಲಿ 56 ರನ್ ಚಚ್ಚಿದರು.
ಈಶನ್ ಕಿಶನ್ 34 ರನ್(13 ಎಸೆತ, 2 ಬೌಂಡರಿ, 4 ಸಿಕ್ಸರ್) ಹೊಡೆದು ಔಟಾದರೆ ರೋಹಿತ್ ಶರ್ಮಾ 26 ರನ್ (12 ಎಸೆತ, 1 ಬೌಂಡರಿ, 3 ಸಿಕ್ಸರ್) ಹೊಡೆದು ಔಟಾದರು. ನಂತರ ನಮನ್ ಧೀರ್ 30 ರನ್(14 ಎಸೆತ, 2 ಬೌಂಡರಿ, 2 ಸಿಕ್ಸರ್) ಹೊಡೆದು ಕ್ಯಾಚ್ ನೀಡಿದರು.
MAXIMUM saving effort 🤯
Incredible from Mayank Agarwal near the ropes! 👏👏
Follow the Match ▶️ https://t.co/oi6mgyCP5s#TATAIPL | #SRHvMI pic.twitter.com/6PW8yA7RIy
— IndianPremierLeague (@IPL) March 27, 2024
ವಿಕೆಟ್ ಉರುಳಿದರೂ ಗೆಲ್ಲಲೇಬೇಕೆಂದು ಕ್ರೀಸ್‌ಗೆ ಇಳಿದ ತಿಲಕ್ ವರ್ಮಾ ಹೈದರಾಬಾದ್ ಬೌಲರ್‌ಗಳಿಗೆ ಬಿಸಿ ಮುಟ್ಟಿಸಿದರು. 24 ಎಸೆತಗಳಲ್ಲಿ ಅರ್ಧಶತಕ ಹೊಡೆದ ವರ್ಮಾ 64 ರನ್ (34 ಎಸೆತ, 2 ಬೌಂಡರಿ, 6 ಸಿಕ್ಸರ್) ಗಳಿಸಿದ್ದಾಗ ಸಿಕ್ಸ್ ಸಿಡಿಸಲು ಹೋಗಿ ಕ್ಯಾಚ್ ನೀಡಿ ಔಟಾದರು. ಹಾರ್ದಿಕ್ ಪಾಂಡ್ಯ 24 ರನ್ ಹೊಡೆದರು ಔಟಾದರೆ ಡಿಮ್ ಡೇವಿಡ್ ಔಟಾಗದೇ 42 ರನ್ (22 ಎಸೆತ, 2 ಬೌಂಡರಿ, 3 ಸಿಕ್ಸರ್) ಹೊಡೆದರು. ಇದನ್ನೂ ಓದಿ: ಆರ್‌ಸಿಬಿ ದಾಖಲೆ ಉಡೀಸ್ – ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದ ಹೈದರಾಬಾದ್
ನಾಯಕ ಪ್ಯಾಟ್ ಕಮ್ಮಿನ್ಸ್ 4 ಓವರ್ ಎಸೆದು 35 ರನ್ ನೀಡಿ ರೋಹಿತ್ ಶರ್ಮಾ ಮತ್ತು ತಿಕಲ್ ವರ್ಮಾ ವಿಕೆಟ್ ಪಡೆದು ಹೈದರಾಬಾದ್‌ಗೆ ಮಹತ್ವದ ಮುನ್ನಡೆ ತಂದುಕೊಟ್ಟರು.
The moment when @SunRisers created HISTORY!
Final over flourish ft. Heinrich Klaasen 🔥
Head to @JioCinema and @StarSportsIndia to watch the match LIVE#TATAIPL | #SRHvMI pic.twitter.com/QVERNlftkb
— IndianPremierLeague (@IPL) March 27, 2024
ಮುಂಬೈ ರನ್ ಏರಿದ್ದು ಹೇಗೆ?
50 ರನ್ – 18 ಎಸೆತ
100 ರನ್ – 45 ಎಸೆತ
150 ರನ್ – 63 ಎಸೆತ
200 ರನ್ – 101 ಎಸೆತ
246 ರನ್ – 120 ಎಸೆತ