ಅಹಮದಾಬಾದ್: 2024ರ ಐಪಿಎಲ್ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ತಂಡದ ಯುವ ಆಟಗಾರ ಸಾಯಿ ಸುದರ್ಶನ್ (Sai Sudharsan), ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಅಪರೂಪದ ದಾಖಲೆಯೊಂದನ್ನು ಮುರಿದಿದ್ದಾರೆ.
ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿದ 22 ವರ್ಷದ ಸುದರ್ಶನ್, ಇದರೊಂದಿಗೆ ಐಪಿಎಲ್ ಆವೃತ್ತಿಯಲ್ಲಿ ವೇಗವಾಗಿ 1,000 ರನ್ ಪೂರೈಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ಪಾದ ಮುಟ್ಟಿ ನಮಸ್ಕರಿಸಿದ ಅಭಿಮಾನಿ; ಹೃದಯ ಶ್ರೀಮಂತಿಕೆ ಮೆರೆದ ಧೋನಿ – ವೀಡಿಯೋ ವೈರಲ್!
Advertisement
Advertisement
ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ 11ನೇ ಓವರ್‌ನಲ್ಲಿ ಸಿಮರ್ಜೀತ್ ಸಿಂಗ್ ಅವರ ಬೌಲಿಂಗ್‌ಗೆ ಸಿಕ್ಸರ್ ಸಿಡಿಸಿ, 71 ರನ್ ಗಳಿಸುವ ಮೂಲಕ ಸುದರ್ಶನ್ 1,000 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಒಟ್ಟಾರೆ ಈ ಪಂದ್ಯದಲ್ಲಿ ಸಾಯಿ ಸುರ್ದಶನ್ 51 ಎಸೆತಗಳಲ್ಲಿ 7 ಸಿಕ್ಸರ್, 5 ಬೌಂಡರಿಯೊಂದಿಗೆ 103 ರನ್ ಬಾರಿಸಿದ್ದಾರೆ.
Advertisement
ವೇಗದ 1000 ರನ್ ಸಿಡಿಸಿದ ಮೊದಲ ಭಾರತೀಯ:
ಸಾಯಿ ಸುದರ್ಶನ್ ಕೇವಲ 25 ಇನ್ನಿಂಗ್ಸ್‌ಗಳಲ್ಲಿ 1,000 ರನ್ ಪೂರೈಸಿದ ಮೊದಲ ಭಾರತೀಯನಾಗಿದ್ದಾರೆ. ಸಚಿನ್ ತೆಂಡೂಲ್ಕರ್ (Sachin Tendulkar) ಮತ್ತು ಗಾಯಕ್ವಾಡ್ ಇಬ್ಬರೂ 31 ಇನ್ನಿಂಗ್ಸ್‌ಗಳಲ್ಲಿ 1000 ರನ್ ಪೂರೈಸಿದ್ದರು. 33 ಇನ್ನಿಂಗ್ಸ್‌ಗಳಲ್ಲಿ 1,000 ರನ್ ಬಾರಿಸಿದ್ದ ತಿಲಕ್ ವರ್ಮಾ 4ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಸಾಯಿ ಸುದರ್ಶನ್, ಗಿಲ್ ದ್ವಿಶತಕ ಜೊತೆಯಾಟ – ಚೆನ್ನೈ ವಿರುದ್ಧ ಗುಜರಾತ್‌ಗೆ 35 ರನ್‌ಗಳ ಜಯ
Advertisement
ವೇಗವಾಗಿ 1,000 ರನ್ ಸಿಡಿಸಿದ ಟಾಪ್-5 ಸರದಾರರು:
ಶಾನ್ ಮಾರ್ಷ್- 21 ಇನಿಂಗ್ಸ್
ಲೆಂಡ್ಲ್ ಸಿಮನ್ಸ್ – 23 ಇನಿಂಗ್ಸ್
ಮ್ಯಾಥ್ಯೂ ಹೇಡನ್- 25 ಇನಿಂಗ್ಸ್
ಸಾಯಿ ಸುದರ್ಶನ್- 25ಇನಿಂಗ್ಸ್
ಜಾನಿ ಬೈರ್ಸ್ಟೋವ್- 26 ಇನಿಂಗ್ಸ್