– ಕೊಹ್ಲಿ-ಡುಪ್ಲೆಸಿಸ್ ಶತಕದ ಜೊತೆಯಾಟ ವ್ಯರ್ಥ
– ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ರಾಜಸ್ಥಾನ್ ರಾಯಲ್ಸ್
ಜೈಪುರ: ಜೋಸ್ ಬಟ್ಲರ್ (Jos Buttler) ಬೊಂಬಾಟ್ ಶತಕ ಹಾಗೂ ಸಂಜು ಸ್ಯಾಮ್ಸನ್ ಅರ್ಧಶತಕದ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 6 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ.
ಇಲ್ಲಿನ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ (RCB) 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತ್ತು. 184 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ 19.1 ಓವರ್‌ಗಳಲ್ಲೇ 189 ರನ್ ಚಚ್ಚಿ ಗೆಲುವು ಸಾಧಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲೂ ಅಗ್ರಸ್ಥಾನಕ್ಕೇರಿದೆ.
Advertisement
Advertisement
ಚೇಸಿಂಗ್ ಆರಂಭಿಸಿದ ರಾಜಸ್ಥಾನ್ ರಾಯಲ್ಸ್ ತಂಡ ಮೊದಲ ಓವರ್‌ನ 2ನೇ ಎಸೆತದಲ್ಲೇ ಯಶಸ್ವಿ ಜೈಸ್ವಾಲ್ ಅವರ ಪ್ರಮುಖ ವಿಕೆಟ್ ಕಳೆದುಕೊಂಡಿತು. ಈ ವೇಳೆ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಜೋಸ್ ಬಟ್ಲರ್ ಹಾಗೂ ನಾಯಕ ಸಂಜು ಸ್ಯಾಮ್ಸನ್ (Sanju Samson) ಆರ್‌ಸಿಬಿ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಚೆಂಡಾಡಿದರು. 86 ಎಸೆತಗಳಲ್ಲಿ ಈ ಜೋಡಿ 148 ರನ್‌ಗಳ ಜೊತೆಯಾಟ ನೀಡಿತು. ಈ ವೇಳೆ ಸಂಜು ಸ್ಯಾಮ್ಸನ್ ಔಟಾದರೂ ಬಟ್ಲರ್ ತಮ್ಮ ಅಬ್ಬರ ಮುಂದುವರಿಸಿದರು.
Advertisement
Advertisement
ರಾಜಸ್ಥಾನ್ ಪರ ಜೋಸ್ ಬಟ್ಲರ್ 58 ಎಸೆತಗಳಲ್ಲಿ 100 ರನ್ (4 ಸಿಕ್ಸರ್, 9 ಬೌಂಡರಿ), ಸಂಜು ಸ್ಯಾಮ್ಸನ್ 69 ರನ್ (42 ಎಸೆತ, 2 ಸಿಕ್ಸರ್, 8 ಬೌಂಡರಿ), ರಿಯಾನ್ ಪರಾಗ್ 4 ರನ್, ಧ್ರುವ್ ಜುರೆಲ್ 2 ರನ್, ಶಿಮ್ರಾನ್ ಹೆಟ್ಮೇಯರ್ 11 ರನ್ ಬಾರಿಸಿದರು. ಆರ್‌ಸಿಬಿ ಪರ ರೇಸಿ ಟಾಪ್ಲಿ 2 ವಿಕೆಟ್ ಕಿತ್ತರೆ, ಯಶ್ ದಯಾಳ್, ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಕಿತ್ತರು
ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಪರ ನಾಯಕ ಫಾಫ್ ಡು ಪ್ಲೆಸಿಸ್ (Faf du Plessis) ಹಾಗೂ ವಿರಾಟ್ ಕೊಹ್ಲಿ ಪವರ್ ಪ್ಲೇನಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ನಿಧಾನಗತಿಯ ಬ್ಯಾಟಿಂಗ್ ನಡೆಸಿದರು. ಇದು ರನ್ ವೇಗದ ಗತಿಯನ್ನೂ ಕಳೆದುಕೊಂಡಿತು.
20 ಓವರ್ ಪಂದ್ಯದಲ್ಲಿ ಆರಂಭಿಕ ಆಟಗಾರ ವಿರಾಟ್ ಕೊಹ್ಲಿ (Virat Kohli) ಒಬ್ಬರೇ 12 ಓವರ್ ಎದುರಿಸಿದರೂ ಕೇವಲ 113 ರನ್ (6 ಸಿಕ್ಸರ್, 12 ಬೌಂಡರಿ) ಮಾತ್ರವೇ ಗಳಿಸಿದರು. ಇದರೊಂದಿಗೆ ಫಾಫ್ ಡು ಪ್ಲೆಸಿಸ್ 44 ರನ್‌ಗಳಿಸಿದರೆ, ಉಳಿದ ಯಾವೊಬ್ಬ ಆಟಗಾರನೂ ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಸ್ಪೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ 1 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರೆ, ಸೌರವ್ ಚೌಹಾಣ್ 9 ರನ್, ಕ್ಯಾಮರೂನ್ ಗ್ರೀನ್ 5 ರನ್ ಗಳಿಸಿದರು.
ರಾಯಸ್ಥಾನ್ ರಾಯಲ್ಸ್ ಪರ ಯಜುವೇಂದ್ರ ಚಾಹಲ್ 2 ವಿಕೆಟ್ ಕಿತ್ತರೆ, ನಾಂದ್ರೆ ಬರ್ಗರ್ ಒಂದು ವಿಕೆಟ್ ಪಡೆದರು.