ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಐಪಿಎಲ್ ಪಂದ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ (Rishabh Pant) ಸೇವೆ ಅಲಭ್ಯವಾಗುವ ಹಿನ್ನೆಲೆಯಲ್ಲಿ ಬದಲಿ ನಾಯಕನನ್ನು ಫ್ರಾಂಚೈಸಿ ಘೋಷಿಸಿದೆ.
ಮೂರುಬಾರಿ ನಿಧಾನಗತಿಯ ಓವರ್ ರೇಟ್ ನಿಂದ ಐಪಿಎಲ್ ನಿಯಮ (Slow Over Rate) ಉಲ್ಲಂಘಿಸಿದ್ದಕ್ಕಾಗಿ ರಿಷಭ್ ಪಂತ್‌ಗೆ ಬಿಸಿಸಿಐ 30 ಲಕ್ಷ ರೂ. ದಂಡ ವಿಧಿಸಿದೆ. ಇದರೊಂದಿಗೆ ಒಂದು ಪಂದ್ಯದಿಂದ ಅಮಾನತುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಭಾನುವಾರದ ಪಂದ್ಯಕ್ಕೆ ಬದಲಿ ನಾಯಕನನ್ನು ಘೋಷಿಸಲಾಗಿದೆ.
Advertisement
Advertisement
ಸೂಪರ್ ಸಂಡೇ (ಮೇ 12) ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಿಂದ ರಿಷಭ್ ಪಂತ್ ಹೊರಗುಳಿಯಲಿದ್ದಾರೆ. ಹಾಗಾಗಿ ಅಕ್ಷರ್ ಪಟೇಲ್ (Axar Patel) ಅವರಿಗೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ನೀಡಲಾಗುವುದು ಎಂದು ಕೋಚ್ ರಿಕಿ ಪಾಂಟಿಂಗ್ ಖಚಿತಪಡಿಸಿದ್ದಾರೆ. ಭಾನುವಾರ ಸಂಜೆ 7:30ರ ವೇಳೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇತ್ತಂಡಗಳು ಸೆಣಸಲಿವೆ.
Advertisement
ಬ್ಯಾಟಿಂಗ್ ಬಲದ ಚಿಂತೆ:
ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅಗ್ರ ಕ್ರಮಾಂಕದಲ್ಲಿ ಫ್ರೆಸರ್ ಮೆಕ್‌ಗಾರ್ಕ್, ಪೃಥ್ವಿ ಶಾ, ಅಭಿಷೇಕ್ ಪೋರೆಲ್ ಬ್ಯಾಟಿಂಗ್ ಬಲ ನೀಡುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಶಾಯ್ ಹೋಪ್, ರಿಷಭ್ ಪಂತ್, ಅಕ್ಷರ್ ಪಟೇಲ್ ಫಾರ್ಮ್‌ನಲ್ಲಿದ್ದರು. ಆದ್ರೆ ರಿಷಭ್ ಪಂತ್ ಅವರ ಅಲಭ್ಯತೆಯು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲದ ಚಿಂತೆ ತಂದೊಡ್ಡಿದೆ. ಅಲ್ಲದೇ ಪ್ಲೇ ಆಫ್ ರೇಸ್‌ನಲ್ಲಿರುವ ಡೆಲ್ಲಿ ತಂಡಕ್ಕೆ ಗೆಲುವು ಕೈ ಹಿಡಿಯುತ್ತಾ ಎಂಬುದನ್ನ ಕಾದು ನೋಡಬೇಕಿದೆ.
Advertisement
ದಂಡ ವಿಧಿಸಿದ್ದು ಏಕೆ?
ಮೇ 7 ರಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ (Arun Jaitley Stadium) ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಧಾನಗತಿಯ ಬೌಲಿಂಗ್ ನಡೆಸಿತ್ತು. ಇದಕ್ಕಾಗಿ ಪಂತ್ ಅವರಿಗೆ 30 ಲಕ್ಷ ರೂ. ದಂಡದೊಂದಿಗೆ ಒಂದು ಪಂದ್ಯದಿಂದ ಅಮಾನತುಗೊಳಿಸಲಾಗಿದೆ. ಇದರೊಂದಿಗೆ ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ಉಳಿದ 11 ಸದಸ್ಯರಿಗೆ ತಲಾ 12 ಲಕ್ಷ ರೂ. ಅಥವಾ ಆಯಾ ಪಂದ್ಯ ಶುಲ್ಕದ 50 ಪ್ರತಿಶತದಷ್ಟು ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಮಂಡಳಿ ತಿಳಿಸಿದೆ.
30 ಲಕ್ಷ ದಂಡ ಯಾಕೆ?
ಐಪಿಎಲ್‌ನಲ್ಲಿ ಮೊದಲ ಬಾರಿ ನಿಧಾನಗತಿ ಬೌಲಿಂಗ್ ಮಾಡಿದರೆ ನಾಯಕನಿಗೆ 12 ಲಕ್ಷ ರೂ. ದಂಡವನ್ನು ವಿಧಿಸಲಾಗುತ್ತದೆ. 2ನೇ ಬಾರಿ ಈ ತಪ್ಪನ್ನು ಮಾಡಿದರೆ ನಾಯಕನಿಗೆ 24 ಲಕ್ಷ ರೂ. ದಂಡದ ಜೊತೆ ಆಟಗಾರರಿಗೂ ದಂಡ ವಿಧಿಸಲಾಗುತ್ತದೆ. 3ನೇ ಬಾರಿಗೆ ದಂಡ ವಿಧಿಸಿದರೆ 30 ಲಕ್ಷ ದಂಡದೊಂದಿಗೆ ಒಂದು ಪಂದ್ಯದಿಂದ ನಾಯಕನನ್ನು ಅಮಾನತುಗೊಳಿಸಲಾಗುತ್ತದೆ.
ಪಂದ್ಯಕ್ಕೆ ಮೀಸಲಾದ ಸಮಯ ಎಷ್ಟು?
ಐಪಿಎಲ್ ನಿಯಮದ ಪ್ರಕಾರ ಒಂದು ತಂಡ 20 ಓವರ್‌ಗಳನ್ನು 90 ನಿಮಿಷದ ಒಳಗಡೆ ಮುಗಿಸಬೇಕು. ಈ ಅವಧಿಯಲ್ಲಿ ಓವರ್‌ಗಳನ್ನು ಪೂರ್ಣ ಮಾಡದೇ ಇದ್ದರೂ 20ನೇ ಓವರ್ ಅನ್ನು 90ನೇ ನಿಮಿಷದಲ್ಲೇ ಆರಂಭಿಸಬೇಕು. ಈ ನಿಯಮವನ್ನು ಮೊದಲ ಬಾರಿ ಉಲ್ಲಂಘಿಸಿದರೆ 12 ಲಕ್ಷ ರೂ. ದಂಡವನ್ನು ವಿಧಿಸಲಾಗುತ್ತದೆ. ಪ್ರತಿ ಪಂದ್ಯದಲ್ಲಿ 2 ನಿಮಿಷ 30 ಸೆಕೆಂಡಿನ 4 ಸ್ಟ್ರಟೆಜಿಕ್ ಟೈಮ್ ಔಟ್ ಬ್ರೇಕ್‌ಗಳು ಇರುತ್ತದೆ. ಮೊದಲ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ತಂಡ 6-9 ಓವರ್ ಮಧ್ಯೆ ಯಾವಾಗ ಬೇಕಾದರೂ ಪಡೆದುಕೊಳ್ಳಬಹುದು. 2ನೇ ಸ್ಟ್ರಟೆಜಿಕ್ ಟೈಮ್ ಔಟ್ ಅನ್ನು ಬ್ಯಾಟಿಂಗ್ ತಂಡ 13-16 ಓವರ್ ಮಧ್ಯೆ ಯಾವಾಗ ಬೇಕಾದರೂ ಪಡೆದುಕೊಳ್ಳಬಹುದು.