ಹೈದರಾಬಾದ್: ಕೊನೆಗೂ ತವರಿನಲ್ಲಿ ಅನುಭವಿಸಿದ ವಿರೋಚಿತ ಸೋಲಿಗೆ ಆರ್‌ಸಿಬಿ, ಸನ್ ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಸೇಡು ತೀರಿಸಿಕೊಂಡಿದೆ. ಇಲ್ಲಿನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಹೈದರಾಬಾದ್ ವಿರುದ್ಧ 35 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 206 ರನ್ ಬಾರಿಸಿತ್ತು. 207 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಸನ್ ರೈಸರ್ಸ್ ಹೈದರಾಬಾದ್ 8 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು.
Advertisement
Advertisement
ಬೃಹತ್ ಮೊತ್ತದ ಚೇಸಿಂಗ್ ಆರಂಭಿಸಿದ್ದ ಸನ್ ರೈಸರ್ಸ್ ತಂಡ ಆರಂಭದಿಂದಲೇ ಪ್ರಮುಖ ವಿಕೆಟ್‌ಗಳನ್ನ ಕಳೆದುಕೊಂಡಿತು. ಆರ್‌ಸಿಬಿ ತವರು ಕ್ರೀಡಾಂಗಣದಲ್ಲಿ ಅಬ್ಬರಿಸಿ ಬೊಬ್ಬರಿದಿದ್ದ ಸನ್ ರೈಸರ್ಸ್ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು. 5 ಓವರ್‌ಗಳಲ್ಲಿ 56 ರನ್‌ಗಳಿಗೆ ಹೈದರಾಬಾದ್ ತಂಡ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ನಂತರ ಕ್ರೀಸ್‌ಗಿಳಿದ ಬ್ಯಾಟರ್ಸ್‌ಗಳು ಆರ್‌ಸಿಬಿ ಎದುರು ನೆಲಕಚ್ಚಿದ್ದರಿಂದ ಸನ್‌ರೈಸರ್ಸ್ ತಂಡ ಸೋಲು ಎದುರಿಸಬೇಕಾಯಿತು.
Advertisement
ಹೈದರಾಬಾದ್ ಪರ ಅಭಿಷೇಕ್ ಶರ್ಮಾ (Abhishek Sharma) 31 ರನ್, ನಾಯಕ ಪ್ಯಾಟ್ ಕಮ್ಮಿನ್ಸ್ (Pat Cummins) 31 ರನ್, ನಿತೀಶ್ ಕುಮಾರ್ ರೆಡ್ಡಿ 13 ರನ್, ಟ್ರಾವಿಸ್ ಹೆಡ್ 1 ರನ್, ಹೆನ್ರಿಕ್ ಕ್ಲಾಸೆನ್, ಏಡನ್ ಮಾರ್ಕ್ರಮ್ ತಲಾ 7 ರನ್, ಅಬ್ದುಲ್ ಸಮದ್ 10 ರನ್, ಭುವನೇಶ್ವರ್ ಕುಮಾರ್ 13 ರನ್, ಶಹಬಾಜ್ ಅಹ್ಮದ್ 40 ರನ್, ಜಯದೇವ್ ಉನಡ್ಕಟ್ 8 ರನ್ ಗಳಿಸಿದರು.
Advertisement
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ ಪರ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ (Virat Kohli) ಸ್ಪೋಟಕ ಆರಂಭ ತಂದುಕೊಟ್ಟಿದ್ದರು. ಮೊದಲ ವಿಕೆಟ್‌ಗೆ ಈ ಜೋಡಿ 3.5 ಓವರ್‌ಗಳಲ್ಲೇ ಬರೋಬ್ಬರಿ 48 ರನ್‌ಗಳ ಜೊತೆಯಾಟ ನೀಡಿತ್ತು. ಡುಪ್ಲೆಸಿಸ್ (Faf du Plessis) 12 ಎಸೆತಗಳಲ್ಲಿ 25 ರನ್ ಚಚ್ಚಿ ಔಟಾದರು. ಈ ಬೆನ್ನಲ್ಲೇ ವಿಲ್ ಜಾಕ್ಸ್ ಕೇವಲ 6 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಕ್ರೀಸ್‌ಗೆ ಬಂದ ರಜತ್ ಪಾಟೀದಾರ್ ಆರೆಂಜ್ ಆರ್ಮಿ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಬೆಂಡೆತ್ತಿದರು. ಬ್ಯಾಕ್ ಟು ಬ್ಯಾಕ್ ಸಿಕ್ಸಸ್ ಸಿಡಿಸುವ ಮೂಲಕ ಕೇವಲ 20 ಎಸೆತಗಳಲ್ಲೇ ಅರ್ಧಶತಕ ಪೂರೈಸಿದರು. ಇದರೊಂದಿಗೆ ಪವರ್ ಪ್ಲೇನಲ್ಲಿ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ್ದ ಕೊಹ್ಲಿ ನಿಧಾಗತಿಯ ಅರ್ಧಶತಕ ಪೂರೈಸಿದರು. ಕೊನೆಯಲ್ಲಿ ಗ್ರೀನ್ ಮತ್ತಿತರ ಬ್ಯಾಟರ್‌ಗಳ ಸಂಘಟಿತ ಪ್ರದರ್ಶನದಿಂದ ಆರ್‌ಸಿಬಿ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.
ಆರ್‌ಸಿಬಿ ಪರ ರಜತ್ ಪಾಟೀದಾರ್ 20 ಎಸೆತಗಳಲ್ಲಿ 50 ರನ್ (5 ಸಿಕ್ಸರ್, 2 ಬೌಂಡರಿ), ವಿರಾಟ್ ಕೊಹ್ಲಿ 51 ರನ್ (43 ಎಸೆತ, 4 ಬೌಂಡರಿ, 1 ಸಿಕ್ಸರ್), ಡುಪ್ಲೆಸಿಸ್ 25 ರನ್, ಕ್ಯಾಮರೂನ್ ಗ್ರೀನ್ 37 ರನ್, ಮಹಿಪಾಲ್ ಲೋಮ್ರೋರ್ 7ರನ್, ದಿನೇಶ್ ಕಾರ್ತಿಕ್ 11 ರನ್, ಸ್ವಪ್ನಿಲ್ ಸಿಂಗ್ 12 ರನ್ ಗಳಿಸಿದರು.