ಮುಲ್ಲನಪುರ: ಬೌಲಿಂಗ್, ಬ್ಯಾಟಿಂಗ್ ಪಡೆ ಉತ್ತಮವಾಗಿದ್ದರೆ ತಂಡ ನಿರಂತರ ಜಯ ಸಾಧಿಸುತ್ತದೆ ಎನ್ನುವುದಕ್ಕೆ ರಾಜಸ್ಥಾನ ತಂಡವೇ ಸಾಕ್ಷಿ. ಪಂಜಾಬ್ ಕಿಂಗ್ಸ್ ಭಾರೀ ಪೈಪೋಟಿ ನೀಡಿದ್ದರೂ ರಾಜಸ್ಥಾನ ರೋಚಕ 3 ವಿಕೆಟ್‌ಗಳ ಜಯ ಸಾಧಿಸಿದೆ.
ಗೆಲ್ಲಲು 148 ರನ್‌ಗಳ ಸವಾಲನ್ನು ಪಡೆದ ರಾಜಸ್ಥಾನ ಇನ್ನೂ 1 ಬಾಲ್ ಇರುವಂತೆಯೂ 7 ವಿಕೆಟ್ ನಷ್ಟಕ್ಕೆ 152 ರನ್ ಹೊಡೆದು ಜಯ ಸಾಧಿಸಿತು. 6 ಪಂದ್ಯಗಳಲ್ಲಿ 5 ಪಂದ್ಯ ಗೆಲ್ಲುವ ಮೂಲಕ 10 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿಯಿತು. ಇದನ್ನೂ ಓದಿ: ಅಂಬೇಡ್ಕರ್ ಜನ್ಮದಿನದಂದೇ ಸಂಕಲ್ಪ ಪತ್ರ – ಭಾನುವಾರ ಬಿಜೆಪಿ ಪ್ರಣಾಳಿಕೆ ಬಿಡುಗಡೆ
Advertisement
Hetmyer the HERO for @rajasthanroyals 💗
The visitors release the pressure with only 11 off 8 required now!
Watch the match LIVE on @StarSportsIndia and @JioCinema 💻📱#TATAIPL | #PBKSvRR pic.twitter.com/5Dw5TQ7Q9V
— IndianPremierLeague (@IPL) April 13, 2024
Advertisement
ಕೊನೆಯ 3 ಓವರ್‌ಗಳಲ್ಲಿ ರಾಜಸ್ಥಾನ ಗೆಲ್ಲು 34 ರನ್ ಬೇಕಿತ್ತು. ಹರ್ಷಲ್ ಪಟೇಲ್ ಎಸೆದ 18ನೇ ಓವರ್‌ನಲ್ಲಿ 14 ರನ್ ಬಂದರೆ ಕರ್ರನ್ ಎಸೆತ 19ನೇ ಓವರ್‌ನಲ್ಲಿ 10 ರನ್ ಬಂದರೂ 2 ವಿಕೆಟ್ ಕಳೆದುಕೊಂಡಿತ್ತು.
Advertisement
ಕೊನೆಯ ಓವರ್‌ನಲ್ಲಿ 10 ರನ್ ಬೇಕಿತ್ತು. ಅರ್ಶ್‌ದೀಪ್ ಎಸೆದ ಮೊದಲ 2 ಎಸೆತದಲ್ಲಿ ಯಾವುದೇ ರನ್ ಬಂದಿರಲಿಲ್ಲ. ಮೂರನೇ ಎಸೆತದಲ್ಲಿ ಹೇಟ್ಮೇಯರ್ ಸಿಕ್ಸ್ ಸಿಡಿಸಿ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ನಾಲ್ಕನೇ ಎಸೆತದಲ್ಲಿ ಕರ್ರನ್ ಮಿಸ್ ಫಿಲ್ಡ್ ಮಾಡಿದ ಕಾರಣ 2 ರನ್ ಬಂತು. ಐದನೇ ಎಸೆತದಲ್ಲಿ ಹೇಟ್ಮೇಯರ್ ಸಿಕ್ಸ್ ಸಿಡಿಸಿ ತಂಡಕ್ಕೆ ಐದನೇ ಗೆಲುವು ತಂದುಕೊಟ್ಟರು. ಇದನ್ನೂ ಓದಿ: ಈ ಬಾರಿ ಮೋದಿ ಗರಿಷ್ಠ 214-240 ಸ್ಥಾನ ಗೆಲ್ಲಬಹುದು: ತೆಲಂಗಾಣ ಸಿಎಂ ರೇವಂತ್ ರೆಡ್ಡಿ
Advertisement
Excellent piece of fielding! 🙌
It's none other than the @rajasthanroyals skipper @IamSanjuSamson with a superb run-out to dismiss Livingstone 🎯
Watch the match LIVE on @JioCinema and @StarSportsIndia 💻📱 #TATAIPL | #PBKSvRR pic.twitter.com/iCsTjauQqV
— IndianPremierLeague (@IPL) April 13, 2024
ಹೇಟ್ಮೇಯರ್ ಔಟಾಗದೇ 27 ರನ್(10 ಎಸೆತ,1 ಬೌಂಡರಿ, 3 ಸಿಕ್ಸ್), ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 39 ರನ್, ತನುಶ್ ಕೋಟ್ಯಾನ್ 24 ರನ್, ನಾಯಕ ಸಂಜು ಸ್ಯಾಮ್ಸನ್ 23 ರನ್ ಹೊಡೆದು ಔಟಾದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ 52 ರನ್‌ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡಿತ್ತು. ವಿಕೇಟ್ ಉರುಳುತ್ತಿದ್ದರೂ ಜಿತೇಶ್ ಶರ್ಮಾ 29 ರನ್(24 ಎಸೆತ, 1 ಬೌಂಡರಿ, 2 ಸಿಕ್ಸರ್), ಕೊನೆಯಲ್ಲಿ ಅಶುತೋಶ್ ಶರ್ಮಾ ಸ್ಫೋಟಕ 31 ರನ್ (16 ಎಸೆತ, 1 ಬೌಂಡರಿ, 3 ಸಿಕ್ಸ್) ಸಿಡಿಸಿದ ಪರಿಣಾಮ ತಂಡ 140 ರನ್‌ಗಳ ಗಡಿ ದಾಟಿತು.
A bit of confusion but Kuldeep Sen holds onto it eventually! 😎
Avesh Khan with the wicket of Atharva Taide as #PBKS reach 38/1 after 6 overs.
Watch the match LIVE on @JioCinema and @StarSportsIndia #TATAIPL | #PBKSvRR pic.twitter.com/K9Chhgm1Za
— IndianPremierLeague (@IPL) April 13, 2024