ಚೆನ್ನೈ: ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವನ್ನು ಕಟ್ಟಿ ಹಾಕಿದ ಪಂಜಾಬ್ ಕಿಂಗ್ಸ್ (Punjab Kings) 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚೆನ್ನೈ 7 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ಸುಲಭ ಸವಾಲನ್ನು ಬೆನ್ನಟ್ಟಿದ ಪಂಜಾಬ್ ಇನ್ನೂ 13 ಎಸೆತ ಬಾಕಿ ಇರುವಂತೆಯೇ 3 ವಿಕೆಟ್ ನಷ್ಟಕ್ಕೆ 163 ರನ್ ಹೊಡೆದು ಜಯಗಳಿಸಿತು.
Advertisement
Advertisement
ಪಂಜಾಬ್ ಪರ ಜಾನಿ ಬೈರ್ಸ್ಟೋವ್ 46 ರನ್ (30 ಎಸೆತ, 7 ಬೌಂಡರಿ, 1 ಸಿಕ್ಸರ್) ಹೊಡೆದರೆ ರಿಲೀ ರೋಸೌವ್ 43 ರನ್(23 ಎಸೆತ, 5 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು. ಶಶಾಂಕ್ ಸಿಂಗ್ ಔಟಾಗದೇ 25 ರನ್(26 ಎಸೆತ, 1 ಬೌಂಡರಿ, 1 ಸಿಕ್ಸರ್), ನಾಯಕ ಸ್ಯಾಮ್ ಕರ್ರನ್ ಔಟಾಗದೇ 16 ರನ್ (20 ಎಸೆತ, 3 ಬೌಂಡರಿ) ಹೊಡೆದರು.
Advertisement
Over the Ropes 🙌 💥
Shashank Singh taking #PBKS closer 👌
Watch the match LIVE on @StarSportsIndia and @JioCinema 💻📱#TATAIPL | #CSKvPBKS | @PunjabKingsIPL pic.twitter.com/ZPKu4CNzwd
— IndianPremierLeague (@IPL) May 1, 2024
Advertisement
ಮೊದಲು ಬ್ಯಾಟ್ ಮಾಡಿದ ಚೆನ್ನೈ ಆರಂಭ ಉತ್ತಮವಾಗಿತ್ತು. ಮೊದಲ ವಿಕೆಟಿಗೆ 50 ಎಸೆತಗಳಲ್ಲಿ64 ರನ್ ಬಂದಿತ್ತು. ಅಜಿಂಕ್ಯಾ ರಹಾನೆ 29 ರನ್(24 ಎಸೆತ, 5 ಬೌಂಡರಿ) ಋತುರಾಜ್ ಗಾಯಕ್‌ವಾಡ್ 62 ರನ್ (48 ಎಸೆತ, 5 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು.
The artist performing his art 🎨 😎
Chepauk roars to MS Dhoni's fireworks 💥
Watch the match LIVE on @JioCinema and @StarSportsIndia 💻📱#TATAIPL | #CSKvPBKS | @ChennaiIPL pic.twitter.com/WE7AnyBR8e
— IndianPremierLeague (@IPL) May 1, 2024
ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಿಂದ ಉತ್ತಮ ಪ್ರದರ್ಶನ ಬಾರದ ಕಾರಣ ಚೆನ್ನೈ ಸೋಲನ್ನು ಅನುಭವಿಸಿತು. ಇತರ ರೂಪದಲ್ಲಿ ಪಂಜಾಬ್ 18 ರನ್ ಬಿಟ್ಟುಕೊಟ್ಟಿದ್ದರಿಂದ ಚೆನ್ನಯ ತಂಡದ ಸ್ಕೋರ್ 160 ರನ್‌ಗಳ ಗಡಿ ದಾಟಿತ್ತು. ಹರ್‌ಪ್ರೀತ್ ಬ್ರಾರ್ ಮತ್ತು ರಾಹುಲ್ ಚಹರ್ ತಲಾ ಎರಡು ವಿಕೆಟ್ ಪಡೆದರು.