ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ (RCB vs CSK) ನಡುವಿನ ಟಾಟಾ ಐಪಿಎಲ್ 2024ರ ನಾಕೌಟ್ ಪಂದ್ಯವು ಜಿಯೋಸಿನಿಮಾದಲ್ಲಿ ಏಕಕಾಲಕ್ಕೆ 50 ಕೋಟಿ ಜನರಿಂದ ವೀಕ್ಷಣೆ ಕಂಡಿದ್ದು, ಮೈದಾನದ ಹೊರಗೂ ದಾಖಲೆ ಬರೆದಿದೆ.
Advertisement
ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆದ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಪಂದ್ಯವು ರಣರೋಚಕವಾಗಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್‌ಸಿಬಿ 218 ರನ್ ಗಳಿಸಿ ಸಿಎಸ್‌ಕೆ ಗೆಲುವಿಗೆ 219 ರನ್‌ಗಳ ಗುರಿ ನೀಡಿತ್ತು. ಆದ್ರೆ ಸಿಎಸ್‌ಕೆ ಪ್ಲೇ ಆಫ್‌ಗೆ (IPL Playoffs) ಲಗ್ಗೆಯಿಡಲು ಅಗತ್ಯವಿದ್ದ ಗುರಿ 201 ರನ್ ಮಾತ್ರವಾಗಿತ್ತು. ಕೊನೇ ಕ್ಷಣದವರೆಗೂ ಹೋರಾಡಿದ ಸಿಎಸ್‌ಕೆ 27 ರನ್‌ಗಳಿಂದ ಸೋತರೆ, 10 ರನ್‌ಗಳ ಅಂತರದಲ್ಲಿ ಪ್ಲೇ ಆಫ್ ತಲುಪುವ ಅವಕಾಶವನ್ನು ಕೈಚೆಲ್ಲಿತು. ಆದ್ರೆ ಉಭಯ ತಂಡಗಳ ಈ ರಣರೋಚಕ ಕದನ ಗ್ರೌಂಡ್ ಹೊರಗೂ ದಾಖಲೆ ಬರೆದಿರುವುದೇ ವಿಶೇಷ.
Advertisement
Advertisement
ವೀಕ್ಷಣೆಯಲ್ಲೂ ದಾಖಲೆ:
ಪ್ರಸಕ್ತ ವರ್ಷದ ಎಲ್ಲ ಪಂದ್ಯಗಳಲ್ಲೂ ದಾಖಲೆ ವೀಕ್ಷಕರನ್ನು ಕಂಡಿರುವ ಆರ್‌ಸಿಬಿ, ಶನಿವಾರ ನಡೆದ ನಾಕೌಟ್ ಕದನದಲ್ಲಿ ಬರೋಬ್ಬರಿ 50 ಕೋಟಿ ನೋಡುಗರನ್ನ (JioCinema Viewers) ಕಂಡಿದ್ದು, ದಾಖಲೆ ವೀಕ್ಷಕರನ್ನು ಕಂಡ ಪಂದ್ಯ ಎನಿಸಿಕೊಂಡಿದೆ.
Advertisement
ಯಾರ ವಿರುದ್ಧ – ಯಾವ ಪಂದ್ಯದಲ್ಲಿ ಎಷ್ಟು ಮಂದಿ ವೀಕ್ಷಣೆ?
ಆರ್‌ಸಿಬಿ vs ಸಿಎಸ್‌ಕೆ – 50 ಕೋಟಿ
ಆರ್‌ಸಿಬಿ vs ಸಿಎಸ್‌ಕೆ – 38 ಕೋಟಿ
ಎಸ್‌ಆರ್‌ಹೆಚ್ vs ಎಂಐ – 28 ಕೋಟಿ
ಸಿಎಸ್‌ಕೆ vs ಎಂಐ – 26 ಕೋಟಿ
ಆರ್‌ಸಿಬಿ vs ಕೆಕೆಆರ್ – 25 ಕೋಟಿ
ಸಿಎಸ್‌ಕೆ vs ಜಿಟಿ – 25 ಕೋಟಿ
ಆರ್‌ಸಿಬಿ vs ಪಿಬಿಕೆಎಸ್ – 24 ಕೋಟಿ
ಸಿಎಸ್‌ಕೆ vs ಡಿಸಿ – 24 ಕೋಟಿ
ಆರ್‌ಸಿಬಿ vs ಎಸ್‌ಆರ್‌ಹೆಚ್ – 24 ಕೋಟಿ
ಆರ್‌ಸಿಬಿ vs ಎಂಐ – 23 ಕೋಟಿ
ಆರ್‌ಸಿಬಿ vs ಆರ್‌ಆರ್ – 23 ಕೋಟಿ
ಆರ್‌ಸಿಬಿಗೆ ಮುಂದಿದೆ ಕಠಿಣ ಸವಾಲು?
ಸತತ 6 ಪಂದ್ಯಗಳನ್ನು ಗೆದ್ದು ಬೀಗಿರುವ ಆರ್‌ಸಿಬಿ ಮುಂದೆ ಬಲಿಷ್ಠ ತಂಡಗಳನ್ನು ಎದುರಿಸಬೇಕಾಗಿದೆ. ಈಗಾಗಲೇ ಕೋಲ್ಕತ್ತಾ ನೈಟ್‌ರೈಡರ್ಸ್ ಅಗ್ರಸ್ಥಾನದಲ್ಲಿದ್ದು, 2ನೇ ಸ್ಥಾನಕ್ಕೆ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ತೀವ್ರ ಪೈಪೋಟಿ ನಡೆಯುತ್ತಿದೆ. ಮೊದಲ ಕ್ವಾಲಿಫೈಯರ್ (Qualifier) ಪಂದ್ಯದಲ್ಲಿ ಅಗ್ರಸ್ಥಾನ ಪಡೆದ ಎರಡು ತಂಡಗಳು ಕಾದಾಟ ನಡೆಸಲಿವೆ. ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದ್ದು, ಸೋತ ತಂಡ ಎಲಿಮಿನೇಟರ್ -2 (Eliminator) ಹಂತದಲ್ಲಿ ಕಣಕ್ಕಿಳಿಯಲಿದೆ. ಆದ್ರೆ ಆರ್‌ಸಿಬಿ 4ನೇ ಸ್ಥಾನದಲ್ಲಿರುವುದರಿಂದ 3ನೇ ಸ್ಥಾನ ಪಡೆದ ತಂಡದೊಂದಿಗೆ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಸೆಣಸಲಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ ಎಲಿಮಿನೇಟರ್ 2ರಲ್ಲಿ, ಕ್ವಾಲಿಫೈಯರ್-1ರಲ್ಲಿ ಸೋತ ತಂಡದೊಂದಿಗೆ ಕಾದಾಟ ನಡೆಸಬೇಕಾಗುತ್ತದೆ. ಈ ಎರಡರಲ್ಲಿ ಯಾವುದೇ ಪಂದ್ಯದಲ್ಲಿ ಸೋತರೂ ಆರ್‌ಸಿಬಿ ಗಂಟುಮೂಟೆ ಕಟ್ಟಬೇಕಾಗುತ್ತದೆ. ಇಲ್ಲವಾದ್ರೆ ಈ ಎರಡು ಹಂತಗಳನ್ನು ದಾಟಿದ ನಂತರ ಫೈನಲ್ ಪ್ರವೇಶಿಸುವ ಅವಕಾಶ ಪಡೆಯಲಿದೆ.
ಪ್ಲೇ ಆಫ್ ಪಂದ್ಯಗಳು ನಡೆಯುವುದು ಎಲ್ಲಿ?
ಮೇ 21 ನಡೆಯುವ ಮೊದಲ ಕ್ವಾಲಿಫೈಯರ್ ಮತ್ತು ಮೇ 22ರಂದು ನಡೆಯುವ ಮೊದಲ ಎಲಿಮಿನೇಟರ್ ಪಂದ್ಯಗಳು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಮೇ 24ರಂದು ನಡೆಯುವ ಕ್ವಾಲಿಫೈಯರ್-2 ಹಾಗೂ ಮೇ 26ರಂದು ನಡೆಯುವ ಫೈನಲ್ ಪಂದ್ಯಗಳು ಚೆನ್ನೈನ ಎಂ.ಎ ಚಿದಂಬರಂ (ಚೆಪಾಕ್) ಕ್ರೀಡಾಂಗಣದಲ್ಲಿ ನಡೆಯಲಿದೆ.