ಕೋಲ್ಕತ್ತಾ: ಆರಂಭದಲ್ಲಿ ಬೌಲರ್ ನಂತರ ಬ್ಯಾಟರ್‌ಗಳ ಅತ್ಯುತ್ತಮ ಆಟದಿಂದ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 9 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು. ಸುಲಭ ಸವಾಲನ್ನು ಬೆನ್ನಟ್ಟಿದ ಡೆಲ್ಲಿ ಇನ್ನೂ 21 ಎಸೆತ ಬಾಕಿ ಇರುವಂತೆಯೇ 157 ರನ್ ಹೊಡೆದು ಜಯಗಳಿಸಿತು.
Advertisement
What a way to wrap up a solid all-round show 💥
A commanding performance by Kolkata Knight Riders at home 💜
And that win helps them consolidate their position in the points table 🤝
Scorecard ▶️ https://t.co/eTZRkma6UM#TATAIPL | #KKRvDC | @KKRiders pic.twitter.com/FFBYyylTKU
— IndianPremierLeague (@IPL) April 29, 2024
Advertisement
ಕೋಲ್ಕತ್ತಾ ಆರಂಭಿಕ ಆಟಗಾರ ಫಿಲ್ ಸಾಲ್ಟ್ (Phil Salt) ಆರಂಭದಲ್ಲೇ ಅಬ್ಬರಿಸಲು ಆರಂಭಿಸಿದ್ದರು. 68 ರನ್(33 ಎಸೆತ, 7 ಬೌಂಡರಿ, 5 ಸಿಕ್ಸರ್) ಸಿಡಿಸಿ ಔಟಾದರು. ಕೊನೆಯಲ್ಲಿ ಮುರಿಯದ 4ನೇ ವಿಕೆಟಿಗೆ ನಾಯಕ ಶ್ರೇಯಸ್ ಅಯ್ಯರ್ ಮತ್ತು ವೆಂಕಟೇಶ್ ಅಯ್ಯರ್ 43 ಎಸೆತಗಳಲ್ಲಿ 57 ರನ್ ಜೊತೆಯಾಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಶ್ರೇಯಸ್ ಅಯ್ಯರ್ ಔಟಾಗದೇ 33 ರನ್(23 ಎಸೆತ, 3 ಬೌಂಡರಿ, 1 ಸಿಕ್ಸ್) ವೆಂಕಟೇಶ್ ಅಯ್ಯರ್ ಔಟಾಗದೇ 26 ರನ್(23 ಎಸೆತ, 2 ಬೌಂಡರಿ,1 ಸಿಕ್ಸ್) ಹೊಡೆದರು. ಇದನ್ನೂ ಓದಿ: ಪ್ರವಾಸಿಗರೇ ಗಮನಿಸಿ – ಊಟಿ, ಕೊಡೈಕೆನಾಲ್‌ಗೆ ಹೋಗಬೇಕಾದ್ರೆ ಇ-ಪಾಸ್ ಕಡ್ಡಾಯ
Advertisement
Phil Salt on song here at the Eden Gardens 🎶@KKRiders have already reached 40/0 in the chase ⚡️⚡️
Watch the match LIVE on @StarSportsIndia and @JioCinema 💻📱#TATAIPL | #KKRvDC pic.twitter.com/fAQiG2rRwf
— IndianPremierLeague (@IPL) April 29, 2024
Advertisement
ಡೆಲ್ಲಿ ಪರ ನಾಯಕ ರಿಷಭ್ ಪಂತ್ 27 ರನ್ ಹೊಡೆದರೆ ಕೊನೆಯಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ಔಟಾಗದೇ 35 ರನ್ (26 ಎಸೆತ, 5 ಬೌಂಡರಿ, 1 ಸಿಕ್ಸರ್) ಸಿಡಿಸಿದ ಪರಿಣಾಮ ತಂಡ 150 ರನ್‌ಗಳ ಗಡಿಯನ್ನು ದಾಟಿತು.
ಕೋಲ್ಕತ್ತಾ ಪರ ವರುಣ್ ಚಕ್ರವರ್ತಿ 16 ರನ್ ನೀಡಿ 3 ವಿಕೆಟ್ ಕಿತ್ತರೆ ವೈಭವ್ ಅರೋರಾ ಮತ್ತು ಹರ್ಷಿತ್ ರಾಣಾ ತಲಾ 2 ವಿಕೆಟ್ ಪಡೆದರು.