ಅಹಮದಾಬಾದ್: 2024ರ ಐಪಿಎಲ್ ಆವೃತ್ತಿಯಲ್ಲಿ (IPL 2023) ಗುಜರಾತ್ ಟೈಟಾನ್ಸ್ (Gujarat Titans) ತಂಡವು ತವರಿನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೇ 13ರಂದು ನಡೆಯುವ ಪಂದ್ಯದಲ್ಲಿ ಸಾಂಪ್ರದಾಯಿಕ ಕಡು ನೀಲಿ ಜೆರ್ಸಿ ಬದಲಿಗೆ ವಿಶೇಷ ಲ್ಯಾವೆಂಡರ್ ಬಣ್ಣದ ಜೆರ್ಸಿ ಧರಿಸಿ ಕಣಕ್ಕಿಳಿಯಲಿದೆ.
ಹೌದು. 2022ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಗುಜರಾತ್ ಟೈಟಾನ್ಸ್ ತಂಡ ತನ್ನ 2ನೇ ಆವೃತ್ತಿಯಿಂದಲೇ ವಿಶೇಷವಾಗಿ ಜಾಗೃತಿ ಮೂಡಿಸುವ ಅಭಿಯಾನವೊಂದನ್ನೂ ನಡೆಸುತ್ತಾ ಬಂದಿದೆ. ಅದರಂತೆ ಮೇ 13ರಂದು ಕೋಲ್ಕತ್ತಾ ನೈಟ್‌ರೈಡರ್ಸ್ ವಿರುದ್ಧ ನಡೆಯುವ ಪಂದ್ಯದಲ್ಲಿ ಗುಜರಾತ್ ಲ್ಯಾವೆಂಡರ್ ಜೆರ್ಸಿಯನ್ನ ಧರಿಸಿ ಕಣಕ್ಕಿಳಿಯಲಿದೆ.
- Advertisement 2-
- Advertisement 3-
ಲ್ಯಾವೆಂಡರ್ ಜೆರ್ಸಿ ಧರಿಸಲು ಕಾರಣ ಏನು?
ಲ್ಯಾವೆಂಡರ್ (Lavender Jersey) ಸಾಮಾನ್ಯವಾಗಿ ಅನ್ನನಾಳದ ಕ್ಯಾನ್ಸರ್‌ಗೆ ಸಂಬಂಧಿಸಿದ್ದಾಗಿದೆ. ಇದು ಎಲ್ಲಾ ರೀತಿಯ ಕ್ಯಾನ್ಸರ್ (Cancer) ಅನ್ನು ಪ್ರತಿನಿಧಿಸುತ್ತದೆ. ಈ ವಿನಾಶಕಾರಿ ರೋಗದ ಬಗ್ಗೆ ಜಾಗೃತಿ (Cancer Awareness) ಮೂಡಿಸುವಲ್ಲಿ ತಂಡದ ಜವಾಬ್ದಾರಿಯುತ ಪ್ರಜ್ಞೆ ಎಂದು ಗುಜರಾತ್ ಟೈಟಾನ್ಸ್ ತಂಡ ಹೇಳಿಕೊಂಡಿದೆ. ಇದನ್ನೂ ಓದಿ: IPL 2024: ಕೊಹ್ಲಿ ಸ್ಫೋಟಕ ಬ್ಯಾಟಿಂಗ್; ಆರ್ಸಿಬಿಗೆ 60 ರನ್‌ಗಳ ಭರ್ಜರಿ ಜಯ
- Advertisement 4-
ಲ್ಯಾವೆಂಡರ್ ಜೆರ್ಸಿ ಧರಿಸುವ ಮೂಲಕ, ನಾವು ಕ್ಯಾನ್ಸರ್ ರೋಗಿಗಳು ಹಾಗೂ ಕ್ಯಾನ್ಸರ್‌ನಿಂದ ಬದುಕುಳಿದವರು ಮತ್ತು ಅವರ ಕುಟುಂಬಗಳಿಗೆ ಬೆಂಬಲ ಸೂಚಿಸಬಹುದು ಎಂದು ತಂಡ ಭಾವಿಸುತ್ತದೆ. ಅಲ್ಲದೇ ಕ್ಯಾನ್ಸರ್ ತಡೆಯುವ ಜಾಗೃತ ಕ್ರಮಗಳ ಬಗ್ಗೆ ಜನರನ್ನು ಪ್ರೇರೇಪಿಸುವುದು, ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವವರಿಗೆ ಸಹಕಾರ ನೀಡುವುದನ್ಮು ಪ್ರೇರೇಪಿಸುವುದು ತಂಡದ ಉದ್ದೇಶವಾಗಿದೆ ಆದ್ದರಿಂದ ಅಂದು ಲ್ಯಾವೆಂಡರ್ ಜೆರ್ಸಿ ಧರಿಸಿ ತಂಡ ಕಣಕ್ಕಿಳಿಯಲಿದೆ ಎಂದು ಟೈಟಾನ್ಸ್ ಫ್ರಾಂಚೈಸಿ ಹೇಳಿಕೋಂಡಿದೆ.
ಪ್ರತಿ ಸೀಸನ್‌ನಲ್ಲೂ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿ ಧರಿಸುತ್ತಿದ್ದ ಆರ್‌ಸಿಬಿ ಪರಿಸರದ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುತ್ತಿತ್ತು. ತನ್ನ 2ನೇ ಆವೃತ್ತಿಯಿಂದಲೇ ಗುಜರಾತ್ ಟೈಟಾನ್ಸ್ ತಂಡ ಕ್ಯಾನ್ಸರ್ ಮಾರಣಾಂತಿಕ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿರುವುದು ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನೂ ಓದಿ: ಲಕ್ನೋಗೆ ಹೀನಾಯ ಸೋಲು – ಮೈದಾನದಲ್ಲೇ ರಾಹುಲ್‌ಗೆ ಮಾಲೀಕರಿಂದ ಫುಲ್ ಕ್ಲಾಸ್