ಅಹಮದಾಬಾದ್: ಇಲ್ಲಿ ನಡೆದ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್‌ನಲ್ಲಿ ಪಂದ್ಯದಲ್ಲಿ ಗುಜರಾತ್ 35 ರನ್‌ಗಳ ಜಯ ಗಳಿಸಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ನಿಗದಿತ ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 231 ರನ್‌ಗಳನ್ನು ಕಲೆ ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಚೆನ್ನೈ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 196 ರನ್‌ಗಳನ್ನು ಮಾತ್ರ ಕಲೆ ಹಾಕಲು ಶಕ್ತವಾಯಿತು.
ಚೆನ್ನೈ ತಂಡದ ಮೊತ್ತ 10 ರನ್ ಇರುವಾಗಲೇ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದರಿಸಿತು. ತಂಡದ ಪರ ಡೆರಿಲ್ ಮಿಚೆಲ್ 34 ಎಸೆತಗಳಲ್ಲಿ 3 ಸಿಕ್ಸರ್, 7 ಬೌಂಡರಿ ನೆರವಿನಿಂದ 63 ರನ್ ಕಲೆ ಹಾಕಿದರು. ಮೊಯಿನ್ ಅಲಿ 36 ಎಸೆತಗಳಲ್ಲಿ 4 ಸಿಕ್ಸರ್ 4 ಬೌಂಡರಿ ಸಿಡಿಸಿ 56 ರನ್ ಗಳಿಸಿದರು. ಶಿವಂ ದುಬೆ 13 ಎಸೆತಗಳಲ್ಲಿ 21, ಜಡೇಜಾ 10 ಎಸೆತಗಳಲ್ಲಿ 18 ರನ್‌ಗಳ ಕೊಡುಗೆ ನೀಡಿದರು. ಧೋನಿ 11 ಎಸೆತಗಳಲ್ಲಿ 3 ಸಿಕ್ಸರ್, 1 ಬೌಂಡರಿ ನೆರವಿನಿಂದ 26 ರನ್ ಗಳಿಸಿದರು.
ಗುಜರಾತ್ ಪರ ಮೋಹಿತ್ ಶರ್ಮಾ 3, ರಶೀದ್ ಖಾನ್ 2, ಸಂದೀಪ್, ಉಮೇಶ್ ಯಾದವ್ ತಲಾ 1 ವಿಕೆಟ್ ಉರುಳಿಸಿದರು.
ಗುಜರಾತ್ ಪರ ಶುಬಮನ್ ಗಿಲ್ 55 ಎಸೆತಗಳಲ್ಲಿ 6 ಸಿಕ್ಸರ್, 9 ಬೌಂಡರಿ ನೆರವಿನಿಂದ 104 ರನ್, ಸಾಯಿ ಸುದರ್ಶನ್ 51 ಎಸೆತಗಳಲ್ಲಿ 7 ಸಿಕ್ಸರ್ 5 ಬೌಂಡರಿ ಸಿಡಿಸಿ 103 ರನ್ ಕಲೆ ಹಾಕಿದರು. ಈ ಮೂಲಕ ಸಾಯಿ ಸುದರ್ಶನ್ ಐಪಿಎಲ್‌ನಲ್ಲಿ ಅತಿ ವೇಗವಾಗಿ 1000 ರನ್‌ಗಳನ್ನು (25 ಇನ್ನಿಂಗ್ಸ್) ಸಿಡಿಸಿದ ಆಟಗಾರ ಎಂಬ ದಾಖಲೆ ಬರೆದರು.
ಸಚಿನ್ ತೆಂಡೂಲ್ಕರ್ (31), ರುತುರಾಜ್ ಗಾಯಕ್ವಾಡ್ (31), ತಿಲಕ್ ವರ್ಮಾ (33) ಇನ್ನಿಂಗ್ಸ್ನಲ್ಲಿ 1000 ರನ್‌ಗಳನ್ನು ದಾಖಲಿಸಿದ್ದರು.
ಪಂದ್ಯದಲ್ಲಿ ಚೆನ್ನೈ ಪರ ತುಷಾರ್ ದೇಶಪಾಂಡೆ 2 ವಿಕೆಟ್ ಕಿತ್ತರು.