– ತಂಡದ ಉಳಿದ ಆಟಗಾರರಿಗೆ ಪಂದ್ಯ ಶುಲ್ಕದ 25% ದಂಡ ವಿಧಿಸಿದ್ದೇಕೆ?
ಅಹಮದಾಬಾದ್: 2024ರ ಐಪಿಎಲ್ ಆವೃತ್ತಿಯಲ್ಲಿ 12 ಪಂದ್ಯಗಳಲ್ಲಿ 5 ರಲ್ಲಿ ಗೆಲುವು ಸಾಧಿಸಿ ಪ್ಲೇ ಆಫ್ ರೇಸ್‌ನಲ್ಲಿರುವ ಗುಜರಾತ್ ಟೈಟಾನ್ಸ್ (Gujarat Titans) ತಂಡ ಸಿಎಸ್‌ಕೆ ವಿರುದ್ಧ ಗೆದ್ದರೂ ಖುಷಿಯಿಲ್ಲದಂತಾಗಿದೆ.
ಹೌದು. ಸಿಎಸ್‌ಕೆ (CSK) ವಿರುದ್ಧ ಶತಕ ಸಿಡಿಸಿ ಮೆರೆದಾಡಿದ ಟೈಟಾನ್ಸ್ ತಂಡದ ನಾಯಕ ಶುಭಮನ್ ಗಿಲ್ (Shubman Gill) ಅವರಿಗೆ ಪಂದ್ಯದ ವೇಳೆ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದು ಈ ಋತುವಿನಲ್ಲಿ ಟೈಟಾನ್ಸ್ ತಂಡಕ್ಕೆ ವಿಧಿಸಲಾದ 2ನೇ ದಂಡ ಶುಲ್ಕವಾಗಿದೆ. ಇದನ್ನೂ ಓದಿ: ಕಿರಿಯ ವಯಸ್ಸಿನಲ್ಲೇ ಕ್ರಿಕೆಟ್ ದೇವರ ದಾಖಲೆ ಮುರಿದ ಸಾಯಿ ಸುದರ್ಶನ್!
Advertisement
Advertisement
ಮೊದಲ ಬಾರಿಗೆ ನಿಧಾನಗತಿಯ ಓವರ್‌ರೇಟ್‌ಗೆ 12 ಲಕ್ಷ ರೂ. ದಂಡ ವಿಧಿಸಲಾಗಿತ್ತು. 2ನೇ ಬಾರಿ ನಿಮಯ ಉಲ್ಲಂಘಿಸಿದ್ದರಿಂದಾಗಿ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದರೊಂದಿಗೆ ಇಂಪ್ಯಾಕ್ಟ್ ಪ್ಲೇಯರ್ (Impact Player) ಸೇರಿದಂತೆ ತಂಡದ ಉಳಿದ 11 ಸದಸ್ಯರಿಗೆ ವೈಯಕ್ತಿಕವಾಗಿ 6 ಲಕ್ಷ ರೂ. ಅಥವಾ ಪಂದ್ಯ ಶುಲ್ಕದ 25 ಪ್ರತಿಶತದಷ್ಟು ದಂಡ (IPL Fined) ವಿಧಿಸಲಾಗಿದೆ.
Advertisement
Advertisement
ಗಿಲ್-ಸುದರ್ಶನ ಶತಕಗಳ ಸಾಧನೆ:
ಸಿಎಸ್‌ಕೆ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಶತಗಳ ಜೊತೆಯಾಟವಾಡಿದ ಶುಭಮನ್ ಗಿಲ್ ಹಾಗೂ ಸಾಯಿಸುದರ್ಶನ್ ಮೊದಲ ವಿಕೆಟ್‌ಗೆ 210 ರನ್‌ಗಳ ಜೊತೆಯಾಟ ನೀಡಿದರು. ಈ ಮೂಲಕ ಮೊದಲ ವಿಕೆಟಿಗೆ ದ್ವಿಶತಕದ ಜೊತೆಯಾಟವಾಡಿದ್ದ ಕೆ.ಎಲ್ ರಾಹುಲ್ ಹಾಗೂ ಕ್ವಿಂಟನ್ ಡಿಕಾಕ್ ಅವರ ದಾಖಲೆಯನ್ನೂ ಸರಿಗಟ್ಟಿದ್ದರು. 2022ರ ಆವೃತ್ತಿಯಲ್ಲಿ ಐಪಿಎಲ್ ಪ್ರವೇಶಿಸಿದ ಲಕ್ನೂ ಸೂಪರ್ ಜೈಂಟ್ಸ್ ತಂಡದ ಪರ ಕ್ವಿಂಟನ್ ಡಿಕಾಕ್ ಹಾಗೂ ಕೆ.ಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿದು 210 ರನ್‌ಗಳ ಜೊತೆಯಾಟ ನೀಡಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು.
ಗಿಲ್-ಸುದರ್ಶನ್ 17.2 ಓವರ್‌ಗಳಲ್ಲೇ 210 ರನ್ ಬಾರಿಸುವ ಮೂಲಕ ಈ ದಾಖಲೆಯನ್ನು ಸರಿಗಟ್ಟಿದ್ದಾರೆ. ಶುಭಮನ್ ಗಿಲ್ 55 ಎಸೆತಗಳಲ್ಲಿ 104 ರನ್ (9 ಬೌಂಡರಿ, 6 ಸಿಕ್ಸರ್) ಬಾರಿಸಿದ್ರೆ, ಸಾಯಿ ಸುದರ್ಶನ್ 51 ಎಸೆತಗಳಲ್ಲಿ 103 ರನ್ (7 ಸಿಕ್ಸರ್, 5 ಬೌಂಡರಿ) ಚಚ್ಚಿದರು. ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ಪಾದ ಮುಟ್ಟಿ ನಮಸ್ಕರಿಸಿದ ಅಭಿಮಾನಿ; ಹೃದಯ ಶ್ರೀಮಂತಿಕೆ ಮೆರೆದ ಧೋನಿ – ವೀಡಿಯೋ ವೈರಲ್!
ಶುಕ್ರವಾರ ಸಿಎಸ್‌ಕೆ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ 3 ವಿಕೆಟ್ ನಷ್ಟಕ್ಕೆ 231 ರನ್ ಸಿಡಿಸಿತ್ತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಸಿಎಸ್‌ಕೆ 8 ವಿಕೆಟ್‌ಕೆ 196 ರನ್ ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು.