– ಬ್ಯಾಟ್ಸ್‌ಮನ್‌ಗಳ ವೈಫಲ್ಯಕ್ಕೆ ಬೆಲೆ ತೆತ್ತ ಆರ್‌ಸಿಬಿ
ಅಹಮದಾಬಾದ್: ಕೋಟ್ಯಂತರ ಆರ್‌ಸಿಬಿ (RCB) ಅಭಿಮಾನಿಗಳ ಕನಸು ಭಗ್ನಗೊಂಡಿದೆ. ಇಂದು ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ರಾಜಸ್ಥಾನ ರಾಯಲ್ಸ್ (Rajasthan Royals) 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.
Advertisement
173 ರನ್‌ಗಳ ಸವಾಲನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ಇನ್ನು 6 ಎಸೆತ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 174 ರನ್ ಹೊಡೆದು ಜಯ ಸಾಧಿಸಿತು. ಟಾಪ್ ಆರ್ಡರ್ ಬ್ಯಾಟರ್‌ಗಳ ವೈಫಲ್ಯ, ಕಳಪೆ ಬೌಲಿಂಗ್ ಮತ್ತು ಫೀಲ್ಡಿಂಗ್‌ಗೆ ಆರ್‌ಸಿಬಿ ಬೆಲೆ ತೆತ್ತಿದೆ.
Advertisement
Advertisement
All is ???????????????? when Po???????????????? is there ????
Rajasthan Royals ease out the nerves with a 4️⃣ wicket victory ????
With that, they move forward in the quest for glory ????
Watch the match LIVE on @StarSportsIndia and @JioCinema ????????#TATAIPL | #RRvRCB | #Eliminator | #TheFinalCall pic.twitter.com/brrzI8Q3sZ
— IndianPremierLeague (@IPL) May 22, 2024
Advertisement
ಮೊದಲ ವಿಕೆಟಿಗೆ ಯಶಸ್ವಿ ಜೈಸ್ವಾಲ್ ಮತ್ತು ಟಾಮ್ ಕ್ಯಾಡ್ಮೋರ್ 33 ಎಸೆತಗಳಲ್ಲಿ 46 ರನ್ ಹೊಡೆದರು. ಟಾಮ್ ಕ್ಯಾಡ್ಮೋರ್ 20 ರನ್ ಗಳಿಸಿ ಔಟಾದರೆ ಯಶಸ್ವಿ ಜೈಸ್ವಾಲ್ 45 ರನ್(30 ಎಸೆತ, 8 ಬೌಂಡರಿ) ಹೊಡೆದು ವಿಕೆಟ್ ಒಪ್ಪಿಸಿದರು. ನಾಯಕ ಸಂಜು ಸ್ಯಾಮ್ಸನ್ 17 ರನ್ ಸಿಡಿಸಿ ಔಟಾದರು. ಇದನ್ನೂ ಓದಿ: ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿ – ದಾಖಲೆ ಬರೆದ ಕೊಹ್ಲಿ
112 ರನ್‌ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ರಾಜಸ್ಥಾನ ವಿರಾಟ್ ಕೊಹ್ಲಿ (Virat Kohli) ಅವರ ಅತ್ಯುತ್ತಮ ಥ್ರೋನಿಂದಾಗಿ 4ನೇ ವಿಕೆಟ್ ಕಳೆದುಕೊಂಡಿತು. 8 ರನ್ ಗಳಿಸಿದ್ದ ಧ್ರುವ್ ಜುರೆಲ್ ಎರಡನೇ ರನ್ ಓಡುವಾಗ ರನೌಟ್‌ಗೆ ಬಲಿಯಾದರು. ಕೊನೆಯಲ್ಲಿ ಹೆಟ್ಮೇಯರ್ 26 ರನ್(14 ಎಸೆತ, 3 ಬೌಂಡರಿ, 1 ಸಿಕ್ಸರ್) ಮತ್ತು ಪೊವೆಲ್ ಔಟಾಗದೇ 16 ರನ್ ಹೊಡೆದ ಪರಿಣಾಮ ರಾಜಸ್ಥಾನ ಪಂದ್ಯವನ್ನು ಗೆದ್ದುಕೊಂಡಿತು.
????????????????????????????????! ????
Captain Sanju Samson is stumped off a wide delivery ☝️
Watch the match LIVE on @StarSportsIndia and @JioCinema ????????#TATAIPL | #RRvRCB | #Eliminator | #TheFinalCall pic.twitter.com/e0G6MhVu18
— IndianPremierLeague (@IPL) May 22, 2024
ಶುಕ್ರವಾರ ರಾಜಸ್ಥಾನ ಮತ್ತು ಹೈದರಾಬಾದ್ ಮಧ್ಯೆ ಎರಡನೇ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಗೆದ್ದವರು ಫೈನಲ್‌ನಲ್ಲಿ ಕೋಲ್ಕತ್ತಾವನ್ನು ಎದುರಿಸಲಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟ್ ಆರಂಭಿಸಿದ ವಿರಾಟ್ ಕೊಹ್ಲಿ ಮತ್ತು ನಾಯಕ ಡುಪ್ಲೆಸಿಸ್ ಮೊದಲ ವಿಕೆಟಿಗೆ 37 ರನ್ ಕಲೆ ಹಾಕಿದರು. 17 ರನ್ ಗಳಿಸಿದ್ದಾಗ ಈ ವೇಳೆ ಸಿಕ್ಸ್ ಸಿಡಿಸಲು ಹೋಗಿ ಡುಪ್ಲೇಸಿಸ್ ಪೊವೆಲ್ ಹಿಡಿದ ಅತ್ಯುತ್ತಮ ಕ್ಯಾಚ್‌ಗೆ ಬಲಿಯಾದರು. ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ 33 ರನ್ (24 ಎಸೆತ, 3 ಬೌಂಡರಿ, 1 ಸಿಕ್ಸ್) ಸಿಕ್ಸ್ ಸಿಡಿಸಲು ಹೋಗಿ ವಿಕೆಟ್ ಒಪ್ಪಿಸಿದರು.
ಮೂರನೇ ವಿಕೆಟಿಗೆ ರಜತ್ ಪಾಟೀದರ್ ಮತ್ತು ಕ್ಯಾಮರೂನ್ ಗ್ರೀನ್ 31 ಎಸೆತಗಳಲ್ಲಿ 41 ರನ್ ಜೊತೆಯಾಟವಾಡಿ ಸ್ವಲ್ಪ ಚೇತರಿಕೆ ನೀಡಿದರು. ಮ್ಯಾಕ್ಸ್‌ವೆಲ್ ಮತ್ತೆ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಕ್ಯಾಮರೂನ್ ಗ್ರೀನ್ 27 ರನ್ (21 ಎಸೆತ, 2 ಬೌಂಡರಿ, 1 ಸಿಕ್ಸ್), ರಜತ್ ಪಾಟೀದರ್ 34 ರನ್ (22 ಎಸೆತ, 2 ಬೌಂಡರಿ, 2 ಸಿಕ್ಸ್), ಮಹಿಪಾಲ್ ಲೋಮ್ರೋರ್ 32 ರನ್(17 ಎಸೆತ, 2 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟಾದರು. ಅಂತಿಮವಾಗಿ 8 ವಿಕೆಟ್ ನಷ್ಟಕ್ಕೆ 172 ರನ್‌ಗಳಿಸಿತು.
Cameron Green ✅
Glenn Maxwell ✅
Ravichandran Ashwin unveiling his magic at a crucial stage ✨
Watch the match LIVE on @JioCinema and @StarSportsIndia ????????#TATAIPL | #RRvRCB | #Eliminator | #TheFinalCall pic.twitter.com/jiXqFUjU3C
— IndianPremierLeague (@IPL) May 22, 2024