ಲಕ್ನೋ: ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಗೆಲ್ಲಲು 168 ರನ್‌ಗಳ ಸವಾಲು ಪಡೆದ ಡೆಲ್ಲಿ ಇನ್ನೂ 11 ಎಸೆತ ಬಾಕಿ ಇರುವಂತೆಯೇ 4 ವಿಕೆಟ್ ನಷ್ಟಕ್ಕೆ 170 ರನ್ ಹೊಡೆದು ಟೂರ್ನಿಯಲ್ಲಿ ಎರಡನೇ ಜಯ ಸಾಧಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಜಿಗಿದಿದೆ.
Advertisement
Victory in Lucknow for the @DelhiCapitals 🙌
A successful chase power them to their second win of the season as they win by 6⃣ wickets!
Scorecard ▶️ https://t.co/0W0hHHG2sq#TATAIPL | #LSGvDC pic.twitter.com/6R7an9Cy8g
— IndianPremierLeague (@IPL) April 12, 2024
Advertisement
ಡೇವಿಡ್ ವಾರ್ನರ್ (David Warner) ಬೇಗನೇ ಔಟಾದರೂ ಪೃಥ್ವಿ ಶಾ 32 ರನ್ (22 ಎಸೆತ, 4 ಬೌಂಡರಿ), ಜೇಕ್ ಫ್ರೇಸರ್ 55 ರನ್(35 ಎಸೆತ, 2 ಬೌಂಡರಿ, 5 ಸಿಕ್ಸರ್), ರಿಷಭ್ ಪಂತ್ (Rishab Pant) 41 ರನ್(24 ಎಸೆತ, 4 ಬೌಂಡರಿ, 2 ಸಿಕ್ಸ್) ಸಿಡಿಸಿದ ಪರಿಣಾಮ ಡೆಲ್ಲಿ ಜಯಗಳಿಸಿತು.
Advertisement
Maiden IPL FIFTY for Jake Fraser-McGurk on DEBUT!
Hat-trick of sixes in this thoroughly entertaining knock 💥💥💥
Watch the match LIVE on @StarSportsIndia and @JioCinema 💻📱#TATAIPL | #LSGvDC pic.twitter.com/0hXuBkiBr3
— IndianPremierLeague (@IPL) April 12, 2024
Advertisement
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಕ್ನೋಗೆ ಕ್ವಿಂಟನ್ ಡಿ ಕಾಕ್ 19 ರನ್, ನಾಯಕ ಕೆಎಲ್ ರಾಹುಲ್ (KL Rahul) 39 ರನ್(22 ಎಸೆತ, 5 ಬೌಂಡರಿ, 1 ಸಿಕ್ಸರ್), ಕೊನೆಯಲ್ಲಿ ಆಯುಷ್ ಬದೋನಿ ಅವರ ಸ್ಫೋಟಕ ಔಟಾಗದೇ 55 ರನ್(35 ಎಸೆತ, 5 ಬೌಂಡರಿ, 1 ಸಿಕ್ಸರ್) ನೆರವಿನಿಂದ ಲಕ್ನೋ 7 ವಿಕೆಟ್ ನಷ್ಟಕ್ಕೆ 167 ರನ್ ಹೊಡೆಯಿತು. ಕುಲದೀಪ್ ಯಾದವ್ 20 ರನ್ ನೀಡಿ 3 ವಿಕೆಟ್ ಕಿತ್ತರು.
A crucial 5️⃣0️⃣-run partnership 🙌
Ayush Badoni & Arshad Khan have powered #LSG to a competitive total!
Watch the match LIVE on @JioCinema and @StarSportsIndia 💻📱#TATAIPL | #LSGvDC pic.twitter.com/coyAwzQ85N
— IndianPremierLeague (@IPL) April 12, 2024
ಕೊನೆಯಲ್ಲಿ ಆರ್‌ಸಿಬಿ:
ಇಂದಿನ ಪಂದ್ಯವನ್ನು ಡೆಲ್ಲಿ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಏರಿದರೆ ಆರ್‌ಸಿಬಿ (RCB) ಕೊನೆಯ ಸ್ಥಾನಕ್ಕೆ ಜಾರಿದೆ. ಡೆಲ್ಲಿ 6 ಪಂದ್ಯಗಳ ಪೈಕಿ 2 ರಲ್ಲಿ ಜಯ ಸಾಧಿಸಿದ್ದರೆ ಆರ್‌ಸಿಬಿ 6 ಪಂದ್ಯಗಳ ಪೈಕಿ 5 ರಲ್ಲಿ ಸೋಲುವ ಮೂಲಕ 2 ಅಂಕ ಸಂಪಾದಿಸಿ 10ನೇ ಸ್ಥಾನಕ್ಕೆ ಕುಸಿದಿದೆ.