ಚೆನ್ನೈ: ಸಂಘಟಿತ ಬೌಲಿಂಗ್, ಬ್ಯಾಟಿಂಗ್ ಪ್ರದರ್ಶನದಿಂದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧ 5 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ಈ ಮೂಲಕ ಪ್ಲೇ ಆಫ್ ಹಾದಿಗೆ ಮತ್ತಷ್ಟು ಹತ್ತಿರವಾಗಿದೆ.
Cleared from the Captain 💥
Ruturaj Gaikwad remained unbeaten on 42 to steer his side to a clinical win 👏👏
Watch the match LIVE on @StarSportsIndia and @JioCinema 💻📱#TATAIPL | #CSKvRR | @ChennaiIPL pic.twitter.com/3K0FvYgNG7
— IndianPremierLeague (@IPL) May 12, 2024
Advertisement
ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ್ ರಾಯಲ್ಸ್ ಫೀಲ್ಡಿಂಗ್ ಮಾಡುವ ಅವಕಾಶವನ್ನು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡಕ್ಕೆ ಬಿಟ್ಟುಕೊಟ್ಟಿತು. ನಿಧಾನಗತಿಯ ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ತಂಡಕ್ಕೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಕೈಕೊಟ್ಟ ಪರಿಣಾಮ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತ್ತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ 18.2 ಓವರ್‌ಗಳಲ್ಲೇ 5 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ ಗೆಲುವು ಸಾಧಿಸಿತು.
Advertisement
Dube dashes his way out 😎
His innings acts like a catalyst and pushes #CSK closer to the target 👏
Watch the match LIVE on @StarSportsIndia and @JioCinema 💻📱#TATAIPL | #CSKvRR | @ChennaiIPL pic.twitter.com/KRyse7uyxd
— IndianPremierLeague (@IPL) May 12, 2024
Advertisement
ಅಲ್ಪ ಮೊತ್ತದ ಚೇಸಿಂಗ್ ಗುರಿ ಬೆನ್ನಟ್ಟಿದ ಚೆನ್ನೈ ಪವರ್‌ಪ್ಲೇನಲ್ಲಿ ಸ್ಪೋಟಕ ಆರಂಭ ಪಡೆದರೂ ಬಳಿಕ ರನ್ ವೇಗ ಕಳೆದುಕೊಂಡಿತ್ತು. ಆದ್ರೆ ನಾಯಕ ರುತುರಾಜ್ ಗಾಯಕ್ವಾಡ್ (Ruturaj Gaikwad) ಅವರ ಜವಾಬ್ದಾರಿಯುತ ಬ್ಯಾಟಿಂಗ್ ತಂಡವನ್ನು ಗೆಲ್ಲುವಿತನ್ನ ಕೊಂಡೊಯ್ದಿತು. ಚೆನ್ನೈ ಪರ ಕೊನೇವರೆಗೂ ಹೋರಾಡಿದ ರುತುರಾಜ್ ಗಾಯಕ್ವಾಡ್ 41 ಎಸೆತಗಳಲ್ಲಿ 42 ರನ್ (2 ಸಿಕ್ಸರ್, 1 ಬೌಂಡರಿ) ಗಳಿಸಿದರು. ರಚಿನ್ ರವಿಂದ್ರ 27 ರನ್, ಡೇರಿಲ್ ಮಿಚೆಲ್ 22 ರನ್, ಮೊಯಿನ್ ಅಲಿ 10 ರನ್, ಶಿವಂ ದುಬೆ 18 ರನ್, ರವೀಂದ್ರ ಜಡೇಜಾ 5 ರನ್, ಸಮೀರ್ ರಿಝ್ವಿ 15 ರನ್ ಗಳಿಸಿದರು.
Advertisement
Trapped in front ⚡️⚡️
Yuzvendra Chahal does what he does best straightway ☝️ #CSK need 65 from 60 deliveries
Watch the match LIVE on @StarSportsIndia and @JioCinema 💻📱#TATAIPL | #CSKvRR | @rajasthanroyals pic.twitter.com/RTtiWzBOMy
— IndianPremierLeague (@IPL) May 12, 2024
ಅಪರೂಪದ ಔಟ್‌ಗೆ ತುತ್ತಾದ ಜಡ್ಡು:
ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಆಲ್‌ರೌಂಡರ್ ಜಡೇಜಾ ಅಪರೂಪದ ಔಟ್‌ಗೆ ತುತ್ತಾಗಿರುವ ಪ್ರಸಂಗವೂ ಕಂಡುಬಂದಿತು. 16ನೇ ಓವರ್‌ನ 5ನೇ ಎಸೆತ ಎದುರಿಸಿದ ಜಡೇಜಾ 2 ರನ್ ಕದಿಯುವ ಪ್ರಯತ್ನ ಮಾಡಿದ್ದರು. ಈ ವೇಳೆ ರನೌಟ್ ಆಗುವ ಸಾಧ್ಯತೆಯಿತ್ತು. ಸಂಜು ಸ್ಯಾಮ್ಸನ್ ಅವರು ಡೈರೆಕ್ಟ್ ವಿಕೆಟ್‌ಗೆ ಚೆಂಡನ್ನು ಎಸೆದರು, ಆದ್ರೆ ವಿಕೆಟ್‌ಗೆ ಅಡ್ಡಲಾಗಿ ಓಡುತ್ತಿದ್ದ ಜಡೇಜಾ ಚೆಂಡನ್ನು ಬೆನ್ನಿಗೆ ತಾಗಿಸಿಕೊಂಡರು. ಇದರಿಂದ ಸಿಟ್ಟಾದ ಸಂಜು ಸ್ಯಾಮ್ಸನ್ ಅಂಪೈರ್ ಮೊರೆ ಹೋದರು. ಕೊನೆಗೆ ಟಿವಿ ಅಂಪೈರ್ ಕ್ಷೇತ್ರರಕ್ಷಣೆ ತಡೆಯುವ ಪ್ರಯತ್ನ ಮಾಡಿದ ಆಧಾರದ ಮೇಲೆ ಔಟ್ ಎಂದು ತೀರ್ಪು ನೀಡಿದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ್ ರಾಯಲ್ಸ್ 5 ವಿಕೆಟ್ ನಷ್ಟಕ್ಕೆ 141 ರನ್‌ಗಳನ್ನಷ್ಟೇ ಗಳಿಸಿತ್ತು. ನಿಧಾನಗತಿಯ ಬ್ಯಾಟಿಂಗ್ ಆರಂಭಿಸಿದ ಆರಂಭಿಕ ಜೋಡಿ ಮೊದಲ ವಿಕೆಟ್‌ಗೆ 6.2 ಓವರ್‌ಗಳಲ್ಲಿ 43 ರನ್ ಗಳಿಸಿತ್ತು. ಯಶಸ್ವಿ ಜೈಸ್ವಾಲ್ (Yashasvi Jaiswal) 21 ಎಸೆತಗಳಲ್ಲಿ 24 ರನ್ ಗಳಿಸಿ ಔಟಾಗುತ್ತಿದ್ದಂತೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಚೆನ್ನೈ ಬೌಲಿಂಗ್ ದಾಳಿ ಎದುರಿಸುವಲ್ಲಿ ವಿಫಲರಾದರು. ಜೋಸ್ ಬಟ್ಲರ್, ಸಂಜಯ ಸ್ಯಾಮ್ಸನ್ ಅಲ್ಪ ಮೊತ್ತಕ್ಕೆ ನಿರ್ಮಿಸಿದರು.
Impressive bowling by #CSK bowlers 🙌
Tushar Deshpande with 2 wickets in the final over ✌️
Watch the match LIVE on @JioCinema and @StarSportsIndia 💻📱#TATAIPL | #CSKvRR | @ChennaiIPL pic.twitter.com/R06yp0KQjB
— IndianPremierLeague (@IPL) May 12, 2024
ಕೊನೆಗೆ ಡೆತ್ ಓವರ್‌ನಲ್ಲಿ ರಿಯಾನ್ ಪರಾಗ್, ಧ್ರುವ್ ಜುರೆಲ್ ಅವರ ಸ್ಫೋಟಕ ಬ್ಯಾಟಿಂಗ್‌ನಿಂದ ರಾಜಸ್ಥಾನ್ 140 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ರಾಜಸ್ಥಾನ್ ಪರ ಜೋಸ್ ಬಟ್ಲರ್ 21 ರನ್, ಸಂಜು ಸ್ಯಾಮ್ಸನ್ (Sanju Samson) 15 ರನ್ ಧ್ರುವ್ ಜುರೆಲ್ 18 ಎಸೆತಗಳಲ್ಲಿ 28 ರನ್ ಗಳಿಸಿದ್ರೆ ಕೊನೆಯವರೆಗೂ ಹೋರಾಡಿದ ರಿಯಾನ್ ಪರಾಗ್ 47 ರನ್ (35 ಎಸೆತ, 3 ಸಿಕ್ಸರ್, 1 ಬೌಂಡರಿ) ಗಳಿಸಿ ಕ್ರೀಸ್‌ನಲ್ಲಿ ಉಳಿದರು. ಅಶ್ವಿನ್ ಅಜೇಯ 1 ರನ್ ಗಳಿಸಿದರು. ಚೆನ್ನೈ ಪರ ಸಿಮರ್ಜಿತ್ ಸಿಂಗ್ 3 ವಿಕೆಟ್ ಕಿತ್ತರೆ, ತುಷಾರ್ ದೇಶ್‌ಪಾಂಡೆ 2 ವಿಕೆಟ್ ಪಡೆದು ಮಿಂಚಿದರು.