ದುಬೈ: ಐಪಿಎಲ್ ಮಿನಿ ಹರಾಜಿನಲ್ಲಿ ಬೆಂಗಳೂರು ಮೂಲದ ರಚಿನ್ ರವೀಂದ್ರ (Rachin Ravindra) ಚೆನ್ನೈ ಸೂಪರ್‌ಕಿಂಗ್ಸ್ (CSK) ತಂಡದ ಪಾಲಾಗಿದ್ದಾರೆ. ಇದರಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಕಿವೀಸ್ ಫ್ಲೇವರ್ ಬಿರುದು ಕೊಟ್ಟಿದ್ದಾರೆ.
ಈಗಾಗಲೇ ಕಿವೀಸ್ ತಂಡದ ಡಿವೋನ್ ಕಾನ್ವೆ, ಮಿಚೆಲ್ ಸ್ಯಾಂಟ್ನರ್ ಸಿಎಸ್‌ಕೆ ತಂಡದಲ್ಲಿ ಮಿಂಚಿದ್ದಾರೆ. ಇದೀಗ ಸ್ಟಾರ್ ಆಲ್‌ರೌಂಡರ್ ರಚಿನ್ ರವೀಂದ್ರ ಅವರನ್ನ 1.80 ಕೋಟಿ ರೂ.ಗೆ ಹಾಗೂ ಡೇರಿಲ್ ಮಿಚೆಲ್ (Daryl Mitchell) ಅವರನ್ನ 14 ಕೋಟಿ ರೂ.ಗೆ ಖರೀದಿಸಿದೆ. ಈ ಮೂಲಕ ತಂಡದ ಬಲ ಮತ್ತಷ್ಟು ಹೆಚ್ಚಿಸಿಕೊಂಡಿದೆ. ಕಳೆದ ಆವೃತ್ತಿಯಲ್ಲಿ ಕೆಕೆಆರ್‌ನಲ್ಲಿದ್ದ ಶಾರ್ದೂಲ್ ಠಾಕೂರ್ ಅವರನ್ನು 4 ಕೋಟಿ ರೂ.ಗೆ ಚೆನ್ನೈ ತಂಡ ಖರೀದಿಸಿದೆ. ಇದನ್ನೂ ಓದಿ: IPL ಇತಿಹಾಸದಲ್ಲೇ ದುಬಾರಿ ಆಟಗಾರ – 20.50 ಕೋಟಿ ರೂ.ಗೆ ಬಿಕರಿಯಾದ ಪ್ಯಾಟ್ ಕಮ್ಮಿನ್ಸ್
Advertisement
Advertisement
ಅಲ್ಲದೇ ಹರ್ಷಲ್ ಪಟೇಲ್ ಅವರನ್ನು 11.75 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್, ಅಲ್ಜಾರಿ ಜೋಸೆಫ್ ಅವರನ್ನ 11.50 ಕೋಟಿ ರೂ.ಗೆ ರಾಯಲ್ ಚಾಲೆಂಜರ್ಸ್, ಉಮೇಶ್ ಯಾದವ್ ಅವರನ್ನ 5.80 ಕೋಟಿ ರೂ.ಗೆ ಗುಜರಾತ್ ಟೈಟಾನ್ಸ್, ದಕ್ಷಿಣ ಆಫ್ರಿಕಾದ ಜೆರಾಲ್ಟ್ ಕೋಟ್ಜಿ ಅವರನ್ನ 5 ಕೋಟಿ ರೂ.ಗೆ ಮುಂಬೈ ಇಂಡಿಯನ್ಸ್ ಖರೀದಿ ಮಾಡಿದೆ.
Advertisement
ಇನ್ನೂ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಶತಕ ಸಿಡಿಸಿದ್ದ ಟ್ರಾವಿಸ್ ಹೆಡ್ 6.80 ಕೋಟಿ ರೂ.ಗೆ ಎಸ್‌ಆರ್‌ಹೆಚ್ ಪಾಲಾದರೆ, ವೆಸ್ಟ್ ಇಂಡೀಸ್ ತಂಡದ ನಾಯಕ ರೋವ್ಮನ್ ಪೋವೆಲ್ 7.40 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಬಿಕರಿಯಾಗಿದ್ದಾರೆ. ಇದನ್ನೂ ಓದಿ: ಅಚ್ಚರಿ ಬೆಳವಣಿಗೆಯಲ್ಲಿ ಮುಂಬೈ ಸಾರಥಿಯಾದ ಪಾಂಡ್ಯ – ಹಿಟ್‌ಮ್ಯಾನ್ ಸ್ಥಾನ ಏನು?
Advertisement
20.50ಕೋಟಿ ರೂ.ಗೆ ಬಿಕರಿಯಾದ ಪ್ಯಾಟ್ ಕಮ್ಮಿನ್ಸ್:
ದುಬೈನಲ್ಲಿ ನಡೆದ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಹಾಗೂ ನಾಯಕ ಪ್ಯಾಟ್ ಕಮ್ಮಿನ್ಸ್ ಬರೋಬ್ಬರಿ 20.50 ರೂ.ಗೆ ಬಿಕರಿಯಾಗಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಬಿಡ್ ಆದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.