ಮುಂಬೈ: ಈ ಬಾರಿ ಐಪಿಎಲ್‌ನಲ್ಲಿ (IPL 2023) ಹಿಂದೆಂದಿಗಿಂತಲೂ ಪೈಪೋಟಿ ಹೆಚ್ಚಾಗಿದೆ. ಕನಿಷ್ಠ ಪ್ಲೇ ಆಫ್ ತಲುಪಲೇಬೇಕೆಂದು ಎಲ್ಲ ತಂಡಗಳು ಪೈಪೋಟಿಗೆ ಬಿದ್ದಿವೆ. ಯಾವ ತಂಡದ ಲೆಕ್ಕಾಚಾರ ಹೇಗಿದೆ ಎಂಬುದನ್ನು ಇಲ್ಲಿ ನೋಡಬಹುದು.
Advertisement
ಗುಜರಾತ್ ಟೈಟಾನ್ಸ್:
ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ಸ್ ಪಟ್ಟಕ್ಕೇರಿದ ಗುಜರಾತ್ ಟೈಟಾನ್ಸ್ (Gujarat Taitans) ತಂಡ ತನ್ನ 2ನೇ ಆವೃತ್ತಿಯಲ್ಲೂ ಪ್ಲೆ ಆಫ್ ಪ್ರವೇಶ ಖಚಿತಪಡಿಸಿಕೊಂಡಿದೆ. ಈ ಸೀಜನ್‌ನಲ್ಲಿ 11 ಪಂದ್ಯಗಳ ಪೈಕಿ 8ರಲ್ಲಿ ಗೆಲುವು ಸಾಧಿಸಿದ್ದು, 16 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇನ್ನುಳಿದ ಮೂರು ಪಂದ್ಯಗಳಲ್ಲಿ 1ರಲ್ಲಿ ಗೆದ್ದರೂ ಟೈಟಾನ್ಸ್ ಅಧಿಕೃತವಾಗಿ ಪ್ಲೇ ಆಫ್ ಪ್ರವೇಶಿಸಲಿದೆ. ಇದನ್ನೂ ಓದಿ: ಸೂರ್ಯ ಸ್ಫೋಟಕ ಆಟಕ್ಕೆ ಆರ್‌ಸಿಬಿ ಬರ್ನ್ – ಮುಂಬೈಗೆ 6 ವಿಕೆಟ್‌ಗಳ ಭರ್ಜರಿ ಜಯ
Advertisement
Advertisement
ಸಿಎಸ್‌ಕೆ:
4 ಬಾರಿ ಐಪಿಎಲ್ ಚಾಂಪಿಯನ್ಸ್ ಪಟ್ಟ ಗಿಟ್ಟಿಸಿಕೊಂಡಿರುವ ಎಂ.ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK) 12ರಲ್ಲಿ 7 ಪಂದ್ಯದಲ್ಲಿ ಗೆಲುವು ಸಾಧಿಸಿದೆ. 4 ಪಂದ್ಯ ಸೋತಿದ್ದು, ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಹಾಗಾಗಿ ಸಿಎಸ್‌ಕೆ ತಂಡ 15 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿ ಉಳಿದುಕೊಂಡಿದೆ. ಉಳಿದ 2 ಪಂದ್ಯಗಳಲ್ಲಿ 1 ಅಥವಾ 2ರಲ್ಲಿ ಗೆದ್ದರೂ ಪ್ಲೆ ಆಫ್ ಪ್ರವೇಶಿಸಲಿದೆ. ಇಲ್ಲವಾದಲ್ಲಿ ಪ್ಲೆ ಆಫ್ ಹಾದಿ ಇನ್ನೂ ಕಠಿಣವಾಗಲಿದೆ.
Advertisement
ಮುಂಬೈ:
ಕಳೆದ ವಾರವಷ್ಟೇ 7ನೇ ಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್ (Mumbai Indians) ಬ್ಯಾಟಿಂಗ್ ಬಲದಿಂದ 3ನೇ ಸ್ಥಾನಕ್ಕೆ ಜಿಗಿದಿದೆ. 11ರಲ್ಲಿ 6 ಪಂದ್ಯಗಳನ್ನ ಗೆದ್ದಿರುವ ಮುಂಬೈ 12 ಅಂಕ ಗಳಿಸಿದೆ. ಇನ್ನುಳಿದ 3 ಪಂದ್ಯಗಳಲ್ಲಿ 2 ಪಂದ್ಯ ಗೆದ್ದರೂ ಪ್ಲೆ ಆಫ್ ಖಚಿತವಾಗಲಿದೆ. ಇದನ್ನೂ ಓದಿ: ಧೋನಿ ಕ್ಯಾಪ್ಟನ್ ಆಗಿದ್ದಿದ್ದರೆ RCB ಮೂರು ಬಾರಿ ಕಪ್ ಗೆಲ್ಲುತ್ತಿತ್ತು ಎಂದ ಪಾಕ್ ಮಾಜಿ ಕ್ರಿಕೆಟಿಗ
ಈ ತಂಡಗಳ ನಡುವೆ ಹಣಾಹಣಿ:
ಈ ಬಾರಿ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG), ರಾಜಸ್ಥಾನ್ ರಾಯಲ್ಸ್, ಕೆಕೆಆರ್, ಆರ್‌ಸಿಬಿ, ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ಭಾರೀ ಪೈಪೋಟಿ ಇದೆ. ಏಕೆಂದರೆ ಲಕ್ನೋ 11 ಅಂಕ ಗಳಿಸಿ 4ನೇ ಸ್ಥಾನದಲ್ಲಿದ್ದರೆ ಉಳಿದ ತಂಡಗಳು ತಲಾ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿ 10 ಅಂಕಗಳೊಂದಿಗೆ ಕ್ರಮವಾಗಿ 5 ರಿಂದ 8 ಸ್ಥಾನದಲ್ಲಿವೆ. ಗುರುವಾರ ನಡೆಯುವ ಪಂದ್ಯದಲ್ಲಿ ಕೆಕೆಆರ್ ಹಾಗೂ ರಾಜಸ್ತಾನ್ ರಾಯಲ್ಸ್ ತಂಡಗಳು ಸೆಣಸಲಿದ್ದು, ಗೆದ್ದ ತಂಡ 4ನೇ ಸ್ಥಾನಕ್ಕೇರಲಿದೆ.
ಇನ್ನೂ ಪ್ರತಿಬಾರಿ ಈ ಸಲ ಕಪ್ ನಮ್ದೆ ಅನ್ನೋ ಉತ್ಸಾಹದೊಂದಿಗೆ ಬರುವ ಆರ್‌ಸಿಬಿ ಸಹ 11ರ ಪೈಕಿ 5 ಪಂದ್ಯದಲ್ಲಿ ಗೆಲುವು ಸಾಧಿಸಿ 7ನೇ ಸ್ಥಾನದಲ್ಲಿದೆ. ಉಳಿದ ಎಲ್ಲ ಪಂದ್ಯಗಳೂ ನಿರ್ಣಾಕವಾಗಿದೆ. ಇದನ್ನೂ ಓದಿ: ಗುಜರಾತ್ ಟೈಟಾನ್ಸ್‌ಗೆ 9 ವಿಕೆಟ್‌ಗಳ ಭರ್ಜರಿ ಜಯ – ಪಾಂಡ್ಯ ಪಡೆ ಬಹುತೇಕ ಪ್ಲೇ ಆಫ್‌ಗೆ; ಈ ಸಲ ಕಪ್ ಯಾರದ್ದು?
ಹೈದರಾಬಾದ್, ಡೆಲ್ಲಿ:
ಆರಂಭದಿಂದಲೂ ಸೋಲಿನ ಹಾದಿಯಲ್ಲೇ ಮುಂದುವರಿದ ಡೆಲ್ಲಿ ಕ್ಯಾಪಿಟಲ್ಸ್ ಪ್ಲೆ ಆಫ್‌ನಿಂದ ಔಟ್ ಆಗೋದು ಖಚಿತವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ 11 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 8 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲೇ ಇದೆ. ಆದ್ರೆ 10ರಲ್ಲಿ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಹೈದರಾಬಾದ್ ತಂಡ ಇನ್ನುಳಿದ 4 ಪಂದ್ಯಗಳಲ್ಲೂ ಸತತ ಗೆಲುವು ಸಾಧಿಸಿದರೆ, ಪ್ಲೆ ಆಫ್ ಪ್ರವೇಶಿಸಬಹುದಾಗಿದೆ.