ಮುಂಬೈ: ಕಳೆದ ವರ್ಷ ಟಿ20 ಕ್ರೆಕೆಟ್‌ನಲ್ಲಿ (T20 Cricket) ಧೂಳೆಬ್ಬಿಸಿ, ಹಲವು ಅಂತಾರಾಷ್ಟ್ರೀಯ ದಾಖಲೆಗಳನ್ನ ಉಡೀಸ್ ಮಾಡಿದ ಟೀಂ ಇಂಡಿಯಾ (Team India) ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ (Suryakumar Yadav) ಈ ವರ್ಷ ಡಕೌಟ್ ದಾಖಲೆ ಬರೆಯುತ್ತಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಸರಣಿಯ ಮೂರು ಪಂದ್ಯಗಳಲ್ಲೂ ಮೊದಲ ಎಸೆತಗಳಿಗೆ ಡಕೌಟ್ ಆಗಿದ್ದ ಸೂರ್ಯಕುಮಾರ್, 2023ರ ಐಪಿಎಲ್ ಆವೃತ್ತಿಯಲ್ಲೂ ಕಳಪೆ ಬ್ಯಾಟಿಂಗ್ ಫಾರ್ಮ್ ಮುಂದುವರಿಸಿದ್ದಾರೆ. ಇದನ್ನೂ ಓದಿ: IPL 2023: ಸೋಲಿನ ಬೆನ್ನಲ್ಲೇ RCBಗೆ ಶಾಕ್ – ನಾಯಕ ಡುಪ್ಲೆಸಿಸ್‌ಗೆ 12 ಲಕ್ಷ ದಂಡ
Advertisement
Advertisement
ಆರ್‌ಸಿಬಿ (RCB) ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 16 ಎಸೆತಗಳಲ್ಲಿ 15 ರನ್ ಗಳಿಸಿದ್ದ ಸೂರ್ಯ, ಸಿಎಸ್‌ಕೆ (CSK) ವಿರುದ್ಧ ನಡೆದ 2ನೇ ಪಂದ್ಯದಲ್ಲಿ ಕೇವಲ 2 ಎಸೆತಗಳಲ್ಲಿ 1 ರನ್ ಗಳಿಸಿದ್ದರು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ 3ನೇ ಪಂದ್ಯದಲ್ಲಿ 2 ಕ್ಯಾಚ್ ಕೈಚೆಲ್ಲಿ ಕಳಪೆ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ ಬ್ಯಾಟಿಂಗ್‌ನಲ್ಲಿ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿ ಡಕೌಟ್ ಆಗಿದ್ದಾರೆ.
Advertisement
Advertisement
ಈ ಹಿಂದೆ ಟೀಂ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಸರಣಿಯ ಮೂರು ಪಂದ್ಯಗಳಲ್ಲೂ ಸೂರ್ಯಕುಮಾರ್ ಯಾದವ್ ಗೋಲ್ಡನ್ ಡಕೌಟ್ ಆಗಿ ಬೇಡದ ದಾಖಲೆಯೊಂದನ್ನ ಹೆಗಲಿಗೇರಿಸಿಕೊಂಡರು.
ಕಳೆದ ವರ್ಷ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ರನ್ ಹೊಳೆ ಹರಿಸುವ ಮೂಲಕ ವಿಶ್ವದ ನಂ.1 ಟಿ20 ಬ್ಯಾಟ್ಸ್‌ಮ್ಯಾನ್ ಎನಿಸಿಕೊಂಡಿದ್ದ ಸೂರ್ಯಕುಮಾರ್ ಯಾದವ್ ಇದೀಗ ನಡೆಯುತ್ತಿರುವ 2023ರ ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುತ್ತಿದ್ದಾರೆ. ಇದನ್ನೂ ಓದಿ: IPL 2023: ಸೈಲೆಂಟಾಗಿರ್ಬೇಕ್ ಅಷ್ಟೇ – RCB ಫ್ಯಾನ್ಸ್‌ಗೆ ಗಂಭೀರ್ ವಾರ್ನಿಂಗ್
2021ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸೂರ್ಯ ಇಲ್ಲಿಯವರೆಗೂ ಅವರು 48 ಪಂದ್ಯಗಳಲ್ಲಿ 46.53ರ ಸರಾಸರಿಯಲ್ಲಿ 1,675 ರನ್‌ಗಳನ್ನ ಸಿಡಿಸಿದ್ದಾರೆ.
ಇದರಲ್ಲಿ ಅವರು 3 ಶತಕಗಳು ಹಾಗೂ 13 ಅರ್ಧಶತಕಗಳನ್ನ ಸಿಡಿಸಿದ್ದಾರೆ. ಆ ಮೂಲಕ 906 ಅಂಕಗಳನ್ನು ಕಲೆ ಹಾಕುವ ಮೂಲಕ ಐಸಿಸಿ ಟಿ20 ಬ್ಯಾಟರ್‌ಗಳ ಪಟ್ಟಿಯಲ್ಲಿ ಪಾಕಿಸ್ತಾನ ತಂಡದ ಮೊಹಮ್ಮದ್ ರಿಜ್ವಾನ್ ಅವರನ್ನ ಹಿಂದಿಕ್ಕಿ ನಂ.1 ಸ್ಥಾನವನ್ನು ಅಲಂಕರಿಸಿದ್ದಾರೆ.