ಬೆಂಗಳೂರು: 16ನೇ ಆವೃತ್ತಿಯ ಐಪಿಎಲ್‌ನಲ್ಲಿ (IPL 2023) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವೆ ನಡೆದ ಪಂದ್ಯ ಎರಡೆರಡು ದಾಖಲೆಗಳನ್ನ ಉಡೀಸ್ ಮಾಡಿದೆ. ಈ ಪಂದ್ಯ ಜಿಯೋ ಸಿನಿಮಾ (Jio Cinema) ಆ್ಯಪ್‌ನಲ್ಲಿ ಹಿಂದೆಂದಿಗಿಂತಲೂ ಅತಿಹೆಚ್ಚು ಮಂದಿ ವೀಕ್ಷಣೆ ಮಾಡಿರುವುದು ಒಂದು ದಾಖಲೆಯಾದರೆ, ಈ ಆವೃತ್ತಿಯಲ್ಲಿ ಅತಿಹೆಚ್ಚು ರನ್ ದಾಖಲಾದ ಮೊದಲ ಪಂದ್ಯ ಎಂಬುದು ಮತ್ತೊಂದು ವಿಶೇಷ.
Advertisement
ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವೆ ನಡೆದ ರಣರೋಚಕ ಪಂದ್ಯದಲ್ಲಿ ಬರೋಬ್ಬರಿ 33 ಸಿಕ್ಸರ್, 24 ಬೌಂಡರಿಗಳು ಸಿಡಿದವು. ಸಿಎಸ್‌ಕೆ ಪರ 17 ಸಿಕ್ಸರ್, 12 ಬೌಂಡರಿಗಳು, ಆರ್‌ಸಿಬಿ ಪರ 16 ಸಿಕ್ಸರ್ ಹಾಗೂ 12 ಬೌಂಡರಿಗಳು ದಾಖಲಾದವು. ಇತ್ತಂಡಗಳ ಸಿಕ್ಸರ್, ಬೌಂಡರಿ ಹೊಡಿಬಡಿ ಆಟದಿಂದ 240 ಎಸೆತಗಳಲ್ಲಿ ಬರೋಬ್ಬರಿ 444 ರನ್ ಸಿಡಿಯಿತು, ಸಿಕ್ಸರ್, ಬೌಂಡರಿಗಳಿಂದಲೇ 294 ರನ್ ದಾಖಲಾಗಿತ್ತು. ಇದು ಈ ಐಪಿಎಲ್ ಆವೃತ್ತಿಯಲ್ಲಿ ಅತಿಹೆಚ್ಚು ರನ್ ದಾಖಲಾದ ಮೊದಲ ಪಂದ್ಯ ಎನಿಸಿಕೊಂಡಿತು.
Advertisement
Advertisement
ಇದೇ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ 240 ಎಸೆತಗಳಲ್ಲಿ 433 ರನ್ ಹಾಗೂ ಕೆಕೆಆರ್-ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ 411 ರನ್ ದಾಖಲಾಗಿತ್ತು. ಇದನ್ನೂ ಓದಿ: ʻಈ ಸಲ ಕಪ್ ನಮ್ದೆʼ ಅಂತಿದ್ದಾರೆ ನಟಿ ಅಮೂಲ್ಯ ಮಕ್ಕಳು – ಪುಟಾಣಿ ಫ್ಯಾನ್ಸ್‌ಗೆ ನೆಟ್ಟಿಗರು ಫಿದಾ
Advertisement
ದಾಖಲೆ ಬರೆದ ಜಿಯೋ ಆ್ಯಪ್:
ಕಳೆದ ವಾರ ರಾಜಸ್ಥಾನ್ ರಾಯಲ್ಸ್ ನಡುವೆ ನಡೆದ ಪಂದ್ಯದ ವೇಳೆ ಸಿಎಸ್‌ಕೆ ನಾಯಕ ಧೋನಿ ಮತ್ತು ರವೀಂದ್ರ ಜಡೇಜಾ ಅವರು 20ನೇ ಓವರ್‌ನಲ್ಲಿ ಕ್ರೀಸ್‌ನಲ್ಲಿದ್ದರು. ಈ ವೇಳೆ ಜಿಯೋ ಸಿನಿಮಾದಲ್ಲಿ 2.2 ಕೋಟಿ ಮಂದಿ ವೀಕ್ಷಣೆ ಮಾಡುತ್ತಿದ್ದರು. ಇದು ಈವರೆಗೆ ಜಿಯೋ ಸಿನಿಮಾ ಆ್ಯಪ್‌ನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಐಪಿಎಲ್ ಪಂದ್ಯವಾಗಿತ್ತು. ಈ ಹಿಂದೆ ಲಕ್ನೋ ವಿರುದ್ಧದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್ ಮಾಡುತ್ತಿದ್ದಾಗ 1.7 ಕೋಟಿ ಮಂದಿ ಜಿಯೋ ಸಿನಿಮಾವನ್ನು ವೀಕ್ಷಣೆ ಮಾಡುತ್ತಿದ್ದರು. ಆದ್ರೆ ಸೋಮವಾರ ಆರ್‌ಸಿಬಿ ನಡುವಿನ ಪಂದ್ಯವನ್ನ 2.4 ಕೋಟಿ ಮಂದಿ ವೀಕ್ಷಣೆ ಮಾಡಿದ್ದಾರೆ.
18.4 ಓವರ್‌ಗಳಲ್ಲಿ 2.3 ಕೋಟಿ ಇದ್ದ ವೀಕ್ಷಕರ ಸಂಖ್ಯೆ 19 ಹಾಗೂ 20ನೇ ಓವರ್‌ನಲ್ಲಿ 2.4 ಕೋಟಿಗೆ ಏರಿತ್ತು. ಇದು ಅತಿ ಹೆಚ್ಚು ವೀಕ್ಷಣೆ ಕಂಡ ಮೊದಲ ಪಂದ್ಯವಾಗಿದ್ದು, ಹಿಂದೆಲ್ಲಾ ದಾಖಲೆಗಳನ್ನ ಉಡೀಸ್ ಮಾಡಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಆರ್‌ಸಿಬಿ, ಚೆನ್ನೈ ಮ್ಯಾಚ್ – ಟಿಕೆಟ್‍ಗಾಗಿ ಮುಗಿಬಿದ್ದ ಅಭಿಮಾನಿಗಳಿಗೆ ಲಾಠಿ ಚಾರ್ಜ್
ಅತಿ ಹೆಚ್ಚು ವೀಕ್ಷಣೆ ಕಂಡ ಪಂದ್ಯಗಳು
1. ಚೆನ್ನೈ ಸೂಪರ್ ಕಿಂಗ್ಸ್ Vs ರಾಯಲ್ ಚಾಲೆಂಜರ್ಸ್ ಬೆಂಗಳೂರು – 2.4 ಕೋಟಿ
2. ಚೆನ್ನೈ ಸೂಪರ್ ಕಿಂಗ್ಸ್ Vs ರಾಜಸ್ಥಾನ ರಾಯಲ್ಸ್ – 2.2 ಕೋಟಿ
3. ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಲಕ್ನೋ ಸೂಪರ್ ಜೈಂಟ್ಸ್ – 1.8 ಕೋಟಿ
4. ಮುಂಬೈ ಇಂಡಿಯನ್ಸ್ Vs ಡೆಲ್ಲಿ ಕ್ಯಾಪಿಟಲ್ಸ್ – 1.7 ಕೋಟಿ
5. ಚೆನ್ನೈ ಸೂಪರ್ ಕಿಂಗ್ಸ್ Vs ಲಕ್ನೋ ಸೂಪರ್ ಜೈಂಟ್ಸ್ – 1.7 ಕೋಟಿ
6. ಚೆನ್ನೈ ಸೂಪರ್ ಕಿಂಗ್ಸ್ Vs ಗುಜರಾತ್ ಟೈಟಾನ್ಸ್ – 1.6 ಕೋಟಿ