ಅಹಮದಾಬಾದ್: ಶುಭಮನ್ ಗಿಲ್ ಸ್ಫೋಟಕ ಶತಕದ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್ ಪ್ರದರ್ಶನದಿಂದ ಗುಜರಾತ್ ಟೈಟಾನ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 62 ರನ್‌ಗಳ ಭರ್ಜರಿ ಜಯದೊಂದಿಗೆ ಸತತ 2ನೇ ಬಾರಿಗೆ ಐಪಿಎಲ್‌ನಲ್ಲಿ ಫೈನಲ್ ಪ್ರವೇಶಿಸಿದೆ. ಇನ್ನೂ 5 ಬಾರಿ ಚಾಂಪಿಯನ್ಸ್ ಪಟ್ಟಕ್ಕೇರಿದ್ದ ಮುಂಬೈ ಇಂಡಿಯನ್ಸ್ ಸೋಲಿನೊಂದಿಗೆ 2023ರ ಐಪಿಎಲ್ ಆವೃತ್ತಿಗೆ ವಿದಾಯ ಹೇಳಿದೆ.
2022ರ ಆವೃತ್ತಿಯಲ್ಲಿ ಐಪಿಎಲ್ ಪ್ರವೇಶಿಸಿದ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಸತತ 2ನೇ ಬಾರಿಗೆ ಐಪಿಎಲ್‌ನಲ್ಲಿ ಫೈನಲ್ ತಲುಪಿದೆ. ಸೂಪರ್ ಸಂಡೇನಲ್ಲಿ (ಮೇ 28) ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೆಣಸಲಿದೆ.
Advertisement
Advertisement
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 20 ಓವರ್‌ಗಳಲ್ಲಿ 233 ರನ್ ಗಳಿಸಿತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ 18.2 ಓವರ್‌ಗಳಲ್ಲಿ 171 ರನ್‌ಗಳಿಗೆ ಸರ್ವಪತನ ಕಂಡಿತು.
Advertisement
ಚೇಸಿಂಗ್ ಆರಂಭಿಸಿದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ರೋಹಿತ್ ಶರ್ಮಾ ಹಾಗೂ ನೆಹಾಲ್ ವಧೇರಾ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ನಂತರ ಕಣಕ್ಕಿಳಿದ 14 ಎಸೆತಗಳಲ್ಲಿ ವರ್ಮಾ 307.14 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿ ಸ್ಫೋಟಕ 43 ರನ್ (5 ಬೌಂಡರಿ, 3 ಸಿಕ್ಸರ್) ಚಚ್ಚಿ ತಂಡಕ್ಕೆ ಚೇತರಿಕೆ ತಂದರು.
Advertisement
ನಂತರ 4ನೇ ವಿಕೆಟ್‌ಗೆ ಜೊತೆಯಾದ ಕ್ಯಾಮರೂನ್ ಗ್ರೀನ್ ಹಾಗೂ ಸೂರ್ಯಕುಮಾರ್ ಯಾದವ್ ಜೋಡಿ 32 ಎಸೆತಗಳಲ್ಲಿ 52 ರನ್ ಜೊತೆಯಾಟ ನೀಡಿತ್ತು. ಅಷ್ಟರಲ್ಲೇ 20 ಎಸೆತಗಳಲ್ಲಿ 30 ರನ್ (2 ಸಿಕ್ಸರ್, 2 ಬೌಂಡರಿ) ಗಳಿಸಿದ್ದ ಗ್ರೀನ್ ವಿಕೆಟ್ ಕೈಚೆಲ್ಲಿ ನಿರಾಸೆ ಮೂಡಿಸಿದರು. ಇನ್ನೂ ಅರ್ಧಶತಕ ಗಳಿಸಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಸೂರ್ಯಕುಮಾರ್ ಯಾದವ್, ತಂಡಕ್ಕೆ ಗೆಲುವು ತಂದುಕೊಡುತ್ತಾರೆ ಎಂಬ ನಿರೀಕ್ಷೆಯಿತ್ತು. ಆದ್ರೆ ಬೇಡದ ಶಾಟ್ ಹೊಡೆಯಲು ಯತ್ನಿಸಿ ಸೂರ್ಯ ಕ್ಲೀನ್ ಬೌಲ್ಡ್ ಆಗಿ ತಂಡದ ಗೆಲುವಿನ ಕನಸನ್ನ ನುಚ್ಚು ನೂರು ಮಾಡಿದರು.
ಸೂರ್ಯಕುಮಾರ್ ಯಾದವ್ 61 ರನ್ (38 ಎಸೆತ, 7 ಬೌಂಡರಿ, 2 ಸಿಕ್ಸರ್) ಗಳಿಸಿ ಔಟಾಗುತ್ತಿದ್ದಂತೆ ವಿಷ್ಣು ವಿನೋದ್ 5 ರನ್ ಗಳಿಸಿ ಔಟಾದರು. ಕೊನೆಯಲ್ಲಿ ಟಿಮ್ ಡೇವಿಡ್ 2 ರನ್, ಕ್ರಿಸ್ ಜೋರ್ಡಾನ್ 2 ರನ್ ಗಳಿಸಿದರೆ ಪಿಯೂಷ್ ಚಾವ್ಲಾ ಶೂನ್ಯಕ್ಕೆ ನಿರ್ಗಮಿಸಿದರು. ಕುಮಾರ್ ಕಾರ್ತಿಕೇಯನ್ 6 ರನ್ ಗಳಿಸಿ ಔಟಾದರೆ, ಜೇಸನ್ ಬೆಹ್ರೆನ್ಡಾರ್ಫ್ 3 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದರು.
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್‌ತಂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲರಾದರೂ ಬಳಿಕ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಬೃಹತ್ ಮೊತ್ತ ದಾಖಲಿಸಿತು. 6.3 ಓವರ್‌ಗಳಲ್ಲಿ 54 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡರು. 2ನೇ ವಿಕೆಟ್‌ಗೆ 16.5 ಓವರ್‌ಗಳಲ್ಲಿ ತಂಡದ ಮೊತ್ತ 192ಕ್ಕೆ ಏರಿತ್ತು.
ಶುಭಮನ್ ಗಿಲ್ ಸ್ಫೋಟಕ ಶತಕದಾಟಕ್ಕೆ ಮುಂಬೈ ಬೌಲರ್‌ಗಳು ಕಂಗಾಲಾಗಿದ್ದರು. ಸಾಯಿ ಸುದರ್ಶನ್ ಹಾಗೂ ಶುಭಮನ್ ಗಿಲ್ ಜೋಡಿ 64 ಎಸೆತಗಳಲ್ಲಿ 138 ರನ್ ಗಳಿಸಿತ್ತು. ಮೊದಲ 32 ಎಸೆತಗಳಲ್ಲಿ 50 ರನ್ ಗಳಿಸಿದ್ದ ಗಿಲ್, ಮುಂದಿನ 17 ಎಸೆತಗಳಲ್ಲಿ 50 ರನ್ ಚಚ್ಚಿ ಶತಕ ಪೂರೈಸಿದರು. ಕೊನೆಗೆ 60 ಎಸೆತಗಳನ್ನು ಎದುರಿಸಿ 10 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 129 ರನ್ ಗಳಿಸಿ ಔಟಾದರು.
ಈ ನಡುವೆ ಸಾಯಿ ಸುದರ್ಶನ್ 43 ರನ್ ( 31 ಎಸೆತ, 5 ಬೌಂಡರಿ, 1 ಸಿಕ್ಸರ್), ವೃದ್ಧಿಮಾನ್ ಸಾಹಾ 18 ರನ್, ಹಾರ್ದಿಕ್ ಪಾಂಡ್ಯ ಅಜೇಯ 28 ರನ್, ರಶೀದ್ ಖಾನ್ ಅಜೇಯ 5 ರನ್ ಗಳಿಸಿದರು.
ಮುಂಬೈ ಪರ ಆಕಾಶ್ ಮಧ್ವಾಲ್, ಪಿಯೂಷ್ ಚಾವ್ಲಾ ತಲಾ ಒಂದೊಂದು ವಿಕೆಟ್ ಪಡೆದರು.