ಆರಂಭದಲ್ಲೇ ಗಾಯಕ್ಕೆ ತುತ್ತಾದ ಕೆ.ಎಲ್‌ ರಾಹುಲ್‌ – ಅತಿಯಾಗೆ ಭಾರೀ ನಿರಾಸೆ

Public TV
2 Min Read
Athiya Shetty

ಲಕ್ನೋ: 14ನೇ ಆವೃತ್ತಿಯ ಐಪಿಎಲ್‌ನಲ್ಲಿ (IPL 2023) ಸೋಮವಾರ ನಡೆದ 43ನೇ ಪಂದ್ಯದಲ್ಲಿ ನಾಯಕ ಕೆ.ಎಲ್‌ ರಾಹುಲ್‌ (KL Rahul) ಆರಂಭದಲ್ಲೇ ಗಾಯಕ್ಕೆ ತುತ್ತಾಗಿ ಪಂದ್ಯದಲ್ಲಿ ಹೊರಗುಳಿದರು.

ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಕೇವಲ 9 ವಿಕೆಟ್‌ ನಷ್ಟಕ್ಕೆ 126 ರನ್‌ಗಳನ್ನಷ್ಟೇ ಗಳಿಸಿತು. ಗಾಯದಿಂದ ಚೇರಿಸಿಕೊಂಡ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಮತ್ತೆ ನಾಯಕನಾಗಿ ಪಂದ್ಯವನ್ನ ಮುನ್ನಡೆಸಿದರು. ಆದ್ರೆ ಇದೇ ಪಂದ್ಯದ ವೇಳೆ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡದ ನಾಯಕ ಕೆಎಲ್ ರಾಹುಲ್ ಗಾಯಕ್ಕೊಳಗಾಗಿ ಮೈದಾನದಿಂದ ಹೊರನಡೆದರು. ಇದನ್ನೂ ಓದಿ: ಒಂದು ಹುಡ್ಗನ್ನ ಪಟಾಯಿಸಿಕೊಡು ವಿರಾಟ್‌ – ಪೋಸ್ಟರ್‌ ಹಿಡಿದು ರಿಕ್ವೆಸ್ಟ್‌ ಮಾಡಿದ RCB ಫ್ಯಾನ್ಸ್‌

ಹೌದು, ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆ ಮಾಡಿಕೊಂಡರು. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲು ಬ್ಯಾಟಿಂಗ್ ಮಾಡಿತು. ಈ ವೇಳೆ 2ನೇ ಓವರ್‌ನ ಅಂತಿಮ ಎಸೆತದಲ್ಲಿ ಬೌಂಡರಿ ರಕ್ಷಣೆಗೆ ತೆರಳಿದ್ದ ಕೆ.ಎಲ್ ರಾಹುಲ್ ಗಾಯಕ್ಕೆ ತುತ್ತಾದರು. ಮಾರ್ಕಸ್‌ ಸ್ಟೋಯ್ನಿಸ್‌ ಎಸೆದ ಈ ಎಸೆತವನ್ನ ಡುಪ್ಲೆಸಿಸ್ ಬೌಂಡರಿಗಟ್ಟಿದರು. ಈ ಬೌಂಡರಿ ತಡೆಯಲು ಯತ್ನಿಸಿದ ರಾಹುಲ್ ಬೌಂಡರಿ ಲೈನ್ ಬಳಿಯೇ ಕುಸಿದು ಬಿದ್ದರು. ತಕ್ಷಣವೇ ಆಗಮಿಸಿದ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಪರಿಶೀಲಿಸಿ ಕೆಎಲ್ ರಾಹುಲ್ ಅವರನ್ನು ಮೈದಾನದಿಂದ ಪೆವಿಲಿಯನ್‌ಗೆ ಕರೆದೊಯ್ದರು. ಇದನ್ನೂ ಓದಿ: ವಿರಾಟ್‌ ಕೊಹ್ಲಿ ನನ್ನ ಫೇವ್ರೆಟ್‌ – ʻಈ ಸಲ ಕಪ್‌ ನಮ್ದೆʼ ಅಂತಿದ್ದಾರೆ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ

LSG

ರಾಹುಲ್‌ ಹೊರಹೋಗುತ್ತಿದ್ದಂತೆ ಕೃನಾಲ್‌ ಪಾಂಡ್ಯ ಪಂದ್ಯದ ನಾಯಕತ್ವ ವಹಿಸಿಕೊಂಡು ಮುನ್ನಡೆಸಿದರು. ಇದರಿಂದ ಪತಿಯ ಅಮೋಘ ಪ್ರದರ್ಶನವನ್ನ ಕಣ್ತುಂಬಿಕೊಳ್ಳಲು ಬಂದಿದ್ದ ಅತಿಯಾ ಶೆಟ್ಟಿಗೆ ಭಾರೀ ನಿರಾಸೆಯಾಯಿತು.

Share This Article